ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಮೇ.02;

ಇಲ್ಲಿನ ವಿರಕ್ತ ಮಠ, ಬಸವಕೇಂದ್ರ, ದಾವಣಗೆರೆ ಜಿಲ್ಲಾ ಮತ್ತು ತಾಲ್ಲೂಕು ವಚನ ಸಾಹಿತ್ಯ ಪರಿಷತ್, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಹಾಗೂ ಸ್ಫೂರ್ತಿ ಪ್ರಕಾಶನ ತೆಲಗಿ ಇವರ ಸಂಯುಕ್ತಾಶ್ರಯದಲ್ಲಿ ಬಸವ ಜಯಂತಿ ಮತ್ತು ಬಸವ ಪ್ರಭಾತ್ ಪೇರಿ ಅಂಗವಾಗಿ ಮೇ.03 ಶುಕ್ರವಾರ ದಂದು ಸಂಜೆ 6 ಗಂಟೆಗೆ ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಿವಯೋಗಾಶ್ರಮದಲ್ಲಿ ಶರಣ ಸಂಗಮ ಕಾರ್ಯಕ್ರಮದಡಿ “ಪೂಜ್ಯ ಶ್ರೀ ಮೃತ್ಯುಂಜಯ ಅಪ್ಪಗಳು ಮತ್ತು ಪೂಜ್ಯ ಹರ್ಡೇಕರ್ ಸ್ಮರಣೋತ್ಸವ ಹಾಗೂ ಕವಿಗೋಷ್ಠಿ” ಯನ್ನು ಆಯೋಜಿಸಲಾಗಿದೆ.

ವಿರಕ್ತ ಮಠದ ಚರಮೂರ್ತಿಗಳಾದ ಶ್ರೀ ಬಸವಪ್ರಭು ಸ್ವಾಮೀಜಿಯವರು ದಿವ್ಯ ಸಾನ್ನಿಧ್ಯ ವಹಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಚುಸಾಪ ಅಧ್ಯಕ್ಷರಾದ ಜಿ. ಹೆಚ್ ರಾಜಶೇಖರ್ ಗುಂಡಗಟ್ಟಿ ವಹಿಸುವರು. ಮುಖ್ಯ ಅತಿಥಿಗಳಾಗಿ ಕವಯಿತ್ರಿ ಶ್ರೀಮತಿ ಸುಭಾಷಿಣಿ ಮಂಜುನಾಥ್, ಕವಿಗಳಾದ ಮಹಾಂತೇಶ್ ಬಿ. ನಿಟ್ಟೂರು ಹಾಗೂ ಎಂ.ಬಸವರಾಜ್ ಭಾಗವಹಿಸುವರು.

ಶರಣ ಸಂಸ್ಕೃತಿ, 12ನೇ ಶತಮಾನದ ಶಿವಶರಣರು ಹಾಗೂ ಜಗಜ್ಯೋತಿ ಬಸವಣ್ಣನವರ ಕುರಿತಂತೆ ಕವಿಗೋಷ್ಠಿಯಲ್ಲಿ ನಗರದ ಕವಿಗಳಾದ ಕೆ. ಎನ್. ಸ್ವಾಮಿ, ಶಿವಯೋಗಿ ಹಿರೇಮಠ್, ಗಂಗಾಧರ ಬಿ ಎಲ್ ನಿಟ್ಟೂರ್, ಪಾಪು ಗುರು, ಯೋಗೀಂದ್ರ ನಾಯ್ಕ, ವೀರೇಶ್, ಪಕ್ಕೀರೇಶ್ ಕೆಸರಳ್ಳಿ, ತಾರೇಶ್ ಅಣಬೇರು, ಫಕೀರೇಶ್ ಆದಾಪುರ, ಸುಬ್ರಹ್ಮಣ್ಯ ನಾಡಿಗೇರ್, ಫ್ರಾನ್ಸಿಸ್ ಕ್ಷೇವಿಯರ್, ಬಾತಿ ಕೃಷ್ಣ, ಪ್ರಭು ಗೊಲ್ಲರಹಳ್ಳಿ, ಮಲ್ಲಮ್ಮ, ಜಯಮ್ಮ ನೀಲಗುಂದ್, ರುದ್ರಮ್ಮ, ಅನ್ನಪೂರ್ಣ ರವಿ, ಪಂಕಜಾಕ್ಷಿ ಬಕ್ಕೇಶ್, ಸುನೀತ ಪ್ರಕಾಶ್, ಸರಿತಾ ಗುಬ್ಬಿ, ಉಮಾದೇವಿ, ಮಂಜುಳ ಸುನೀಲ್, ಸಾವಿತ್ರಿ ಜಗದೀಶ್, ಗೀತಾ ತಿಪ್ಪೇಸ್ವಾಮಿ, ಜೆ. ಶೋಭಾ ಅವರು ಕವನ ವಾಚಿಸುವರು.

ಇದರೊಂದಿಗೆ ಕಾರ್ಯಕ್ರಮದಲ್ಲಿ ಬಸವ ಕಲಾ ಲೋಕ – ವಿರಕ್ತ ಮಠ ಹಾಗೂ ರೇವಣಸಿದ್ದಪ್ಪ ತಂಡದವರಿಂದ ವಚನ ಸಂಗೀತ ಗಾಯನ ನಡೆಯಲಿದೆ.

ವರದಿ : ಗಂಗಾಧರ ಬಿ ಎಲ್ ನಿಟ್ಟೂರ್

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.