ಕೆ.ಎನ್.ಪಿ.ವಾರ್ತೆ,ಮುಂಡರಗಿ,ಮಾ.18;

ಡಾ|| ಮಾತೆ ಮಹಾದೇವಿಯವರು ತಮ್ಮದೇ ಆದ ತತ್ವ ಸಿದ್ಧಾಂತಗಳ ಹಾದಿಯಲ್ಲಿ ಒಬ್ಬಂಟಿಯಾಗಿ ಹೋರಾಟ ಮಾಡಿ, ಇವರು ನಂಬಿದ ಸತ್ಯ ಮತ್ತು ನಂಬಿದ ದೇವರ ನಾಮಾಂಕಿತದಿಂದ ಬೆಳೆದು ಬಂದವರು.

ಇದ್ದ ಕಾಲದಲ್ಲಿ ಕೆಲವು ವಿಚಾರಗಳನ್ನು ಕೆಲವರು ಖಂಡಿಸುವವರು, ಅಂತೆಯೇ ಶರಣ ಪರಂಪರೆಯಲ್ಲಿ ಗಂಡಾಗಲಿ, ಹೆಣ್ಣಾಗಲಿ ಬೇರೆ ಅಲ್ಲ ಎಂದು ಅರಿತವರು. ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಬೀದರ್‌ನಿಂದ ದೆಹಲಿ ವರೆಗೆ ಹೋರಾಟ ನಡೆಸಿದ್ದರು. ಅವರನ್ನು ಕಳೆದುಕೊಂಡ ಲಿಂಗಾಯತ ಸಮುದಾಯ ಬಡವಾಗಿದೆ ಎಂದು ನಿಂಗು ಸಲಿಗಿಯವರು ತಿಳಿಸಿದರು.

ಕೂಡಲಸಂಗಮ ಬಸವ ಧರ್ಮ ಪೀಠದ ಅಧ್ಯಕ್ಷೆ, ಜಗತ್ತಿನ ಪ್ರಥಮ ಮಹಿಳಾ ಜಗದ್ಗುರು ಮಾತೆ ಮಹಾದೇವಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ನಗರದ ಜಗದ್ಗುರು ತೋಂಟದಾರ್ಯ ಮಠದಲ್ಲಿ ಶಿವಾನುಭವ ಸಮಿತಿ ಹಾಗೂ ಸೇವಾ ಸಮಿತಿಯವರು ಏರ್ಪಡಿಸಿದ್ದ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಪ್ಪಟ ಬಸವತತ್ವ ಮೈಗೂಡಿಸಿಕೊಂಡಿದ್ದ ಮಾತೆ ಮಹಾದೇವಿ ಲಿಂಗೈಕ್ಯರಾಗಿದ್ದು, ಅಪಾರ ಭಕ್ತವೃಂದಕ್ಕೆ ತುಂಬಲಾರದ ನಷ್ಟವಾಗಿದೆ. ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಹೋರಾಟ ನಡೆಸಿದ್ದರು. ಬಸವತತ್ವ ಪ್ರಚಾರಕ್ಕೆ ಅವರ ಪರಿಶ್ರಮ ಹೇಳತೀರದು, ಅವರನ್ನು ಕಳೆದುಕೊಂಡ ಲಿಂಗಾಯತ ಸಮುದಾಯ ಬಡವಾಗಿದೆ ಎಂದು ಗಣ್ಯ ವರ್ತಕ ಕೊಟ್ರೇಶ ಅಂಗಡಿಯವರು ಮನದ ಅಭಿಪ್ರಾಯ ಹಂಚಿಕೊಂಡರು.

ಲಿಂಗಾಯತ ಧರ್ಮಕ್ಕೆ ಇವರು ಹೆಚ್ಚು ಮಹತ್ವ ಕೊಟ್ಟವರು, ಲಿಂಗಾಯತ ಧರ್ಮದ ಎರಡು ಕಣ್ಣಗಳು ಇವರು ಯಾವುದೇ ಹೋರಾಟಕ್ಕೆ ಹೆದರಿದವರಲ್ಲ ಅಂತವರನ್ನು ನಾವು ಕಳೆದುಕೊಂಡಿದ್ದೇವೆ ಎಂದು ಹಿರಿಯ ಪತ್ರಕರ್ತರಾದ ಜೋಶಿಯವರು ಹೇಳಿದರು.

ಇದೇ ವೇಳೆ ದ್ರುವಕುಮಾರ ಹೊಸಮನಿ, ಈಶಣ್ಣ ಬೆಟಗೇರಿ, ವಿರುಪಾಕ್ಷಪ್ಪಗೌಡರು ಹರಗಿನಡೋಣಿ, ಸುರೇಶ ಬಣಕಾರ, ಎ.ಪಿ.ದಂಡಿನ, ಅಶೋಕ ಹುಬ್ಬಳ್ಳಿ, ಗಿರೀಶಗೌಡ್ರು ಪಾಟೀಲ, ಉಮೇಶ ಹಿರೇಮಠ, ಸದಾಶಿವಯ್ಯ ಹಿರೇಮಠ, ಪ್ರಭಾವತಿ ಕುಬಸದ, ಸುಕನ್ಯಾ ಕಬ್ಬೂರು ಮಠ, ಅನ್ನಪೂರ್ಣ ಸಜ್ಜನರ್, ಶಿವಗಂಗಾ ನವಲಿ ಮಠ, ಶಂತ ಕುಬಸದ ಪುಷ್ಪಾಸೀರಿ, ವಿನೋದಮ್ಮ ಅಮರಗೋಳ ಹಿರೇಮಠ ಇತರರು ಭಾಗವಹಿಸಿದ್ದರು.

ವರದಿ : ಕೋಗಳಿ ಶೇಖರ್

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.