ಕೆ.ಎನ್.ಪಿ.ವಾರ್ತೆ,ಗಂಗಾವತಿ,ಮಾ.24;

ನಾಳೆಯಿಂದ ಮಾರುತೇಶ್ವರ ಜಾತ್ರಾ ಮಹೋತ್ಸವವು ಜರುಗಲಿದೆ.

ತಾಲೂಕಿನ ಮುಸ್ಟೂರ್ ಡಗ್ಗಿಯಲ್ಲಿ ನಾಳೆ ಹಾಗೂ ಮಾ.26 ರಂದು ಮಾರುತೇಶ್ವರ ಜಾತ್ರಾ ಮಹೋತ್ಸವವು ಜರುಗಲಿದ್ದು, ಜಾತ್ರಾ ಮಹೋತ್ಸವದ ಪ್ರಯುಕ್ತ 2ದಿನಗಳ ಕಾಲ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ನಾಳೆಯ ಕಾರ್ಯಕ್ರಮಗಳು :

ನಾಳೆ ಸಂಜೆ 6.00 ಗಂಟೆಗೆ ಉಚ್ಚಯ್ಯ (ತೇರು) ಎಳೆಯುವ ಕಾರ್ಯಕ್ರಮ ಮತ್ತು ಸಂಜೆ 7.30 ಕ್ಕೆ ಮದ್ದು ಸುಡುವ ಕಾರ್ಯಕ್ರಮ ನೆರವೇರಲಿದೆ.

ಮಾ.26ರ ಕಾರ್ಯಕ್ರಮಗಳು :

ಮಾ. 26ರಂದು ಕಾರಿಕಂಟಿ ಉತ್ಸವವು ನೆರವೇರಲಿದ್ದು, ಇದರ ಪ್ರಯುಕ್ತ, ಬೆಳಿಗ್ಗೆ 06 ಗಂಟೆಗೆ ಅರಣ್ಯದಲ್ಲಿ ಕಾರಿಕಂಟಿ ಪೂಜೆ, 10 ಗಂಟೆಗೆ ಗೋಪುರಕ್ಕೆ ಕಳಸಾರೋಹಣ ಹಾಗೂ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ.

ಮಧ್ಯಾಹ್ನ 01 ಗಂಟೆಯಿಂದ ಸಂಜೆ 5.30 ರವರೆಗೆ ಕಾರಿಕಂಟಿ ಉತ್ಸವ ನಡೆಯಲಿದ್ದು, ಸಂಜೆ 6 ಗಂಟೆಯಿಂದ ಗಂಗಾ ಸ್ನಾನ ಮತ್ತು 6.30 ಕ್ಕೆ ಅಗ್ನಿಕೊಂಡ ಕಾರ್ಯಕ್ರಮ ನೆರೆವೇರುವುದರೊಂದಿಗೆ ಜಾತ್ರಾ ಮಹೋತ್ಸವವು ಮುಕ್ತಾಯಗೊಳ್ಳಲಿದೆ. ಜಾತ್ರೆಗೆ ಬಂದ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆಯು ಇರಲಿದೆ.

ವರದಿ : ಹನುಮೇಶ್ ಡಣಾಪುರ