ಕೆ.ಎನ್.ಪಿ.ವಾರ್ತೆ,ಹಾವೇರಿ,ಜು.29;

ಮನುಷ್ಯನ ಕಷ್ಟ ಕಾರ್ಪಣ್ಯದೂರ ಮಾಡುವ ಶಕ್ತಿ ಗುರುವಿಗಿದೆ ಅಂತಹ ನಿಜ ಗುರುವನ್ನು ಪಡೆದ ನೆಗಳೂರಿನ ಸದ್ಭಕ್ತರು ಧನ್ಯರು ಎಂದು ಬಂಕಾಪುರ ಅರಳೆಲೆ ಹಿರೇಮಠದ ರೇವಣ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ನೆಗಳೂರ ಗ್ರಾಮದ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಜರುಗಿದ ಗುರುಶಾಂತೇಶ್ವರ ಶಿವಾಚಾರ್ಯರ 7ನೇ ವರ್ಷದ ಶಿವಯೋಗ ಮೌನ ತಪೋನುಷ್ಠಾನ ಮಂಗಲ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು.

ಹಾವೇರಿ ಹರಸೂರು ಬಣ್ಣದ ಮಠದ ಅಭಿನವ ರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ನೆಗಳೂರ ಶ್ರೀಗಳ ಕ್ರೀಯಾಶೀಲತೆ ಉತ್ತಮ ಸಂಸ್ಕಾರ ಪಸರಿಸುವಲ್ಲಿ ಶ್ರೀಗಳ ಪಾತ್ರ ಮಹತ್ವವಾಗಿದೆ. ಶ್ರೀಗಳು ಕಿರಿಯ ವಯಸ್ಸಿನಲ್ಲಿ ಮಠದ ಅಭಿವೃದ್ಧಿಯೊಂದಿಗೆ ಸದ್ಭಕ್ತರ ಅಂತರಂಗವನ್ನು ಅರಿತು ಅವರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯನ್ಮುಖವಾಗಿರುವುದು ಶ್ಲಾಘನೀಯ ಎಂದರು.

ಗುರುಶಾಂತೇಶ್ವರ ಶಿವಾಚಾರ್ಯರು ಮಾತನಾಡಿ, 48 ದಿನಗಳ ಕಾಲ ಕೈಗೊಂಡ ಅನುಷ್ಠಾನ ಬಹಳ ಸಂತೋಷವನ್ನುಂಟು ಮಾಡಿದೆ. ಮಾತಿಗಿಂತ ಮೌನಕ್ಕೆ ಬಹಳ ಶಕ್ತಿಯಿದೆ ಅದಕ್ಕಾಗಿ ಮಾತು ಬೆಳ್ಳಿ ಮೌನ ಬಂಗಾರ ಎಂದು ಪೂರ್ವಜರ ನಾಣ್ಣುಡಿ ಸಾರ್ವಕಾಲಿಕ ಮೌನಕ್ಕೆ ಅಪಾರ ಶಕ್ತಿಯಿದೆ ಜೀವನದಲ್ಲಿ ನಗು ಮತ್ತು ಮೌನದಿಂದ ಏನಾದರು ಸಾಧನೆ ಮಾಡಬಹುದು. ಅದಕ್ಕಾಗಿ ಮನುಷ್ಯನಾದವನು ಧರ್ಮ ಮಾರ್ಗದಲ್ಲಿ ನಡೆದು ಎಂತಹ ಸಂದರ್ಭದಲ್ಲಿ ಧೃತಿಗೇಡದೆ ಮೌನ ಹಾಗೂ ನಗುವಿನಿಂದಿದ್ದರೆ ಎಲ್ಲವೂ ಸಾಧ್ಯ ಎಂದು ಹೇಳಿದರು. ನಾವು ಕೈಗೊಂಡ ಅನುಷ್ಠಾನದ ಫಲ ನಾಡಿನ ಅನ್ನಧಾತರಿಗೆ ಹಾಗೂ ಸರ್ವ ಸದ್ಭಕ್ತರಿಗೆ ಲಭಿಸಲಿ ಎಂದರು.

ಗುತ್ತಲ ಕಲ್ಮಠದ ಗುರುಶಿದ್ದ ಸ್ವಾಮೀಜಿ ಮಾತನಾಡಿ, ಸ್ವಾಮಿಗಳಾದವರು ಸಮಾಜಗೋಸ್ಕರವಾಗಿ ತಮ್ಮನ್ನು ತಾವೇ ದಂಡಿಸಿಕೊಂಡು ಅನುಷ್ಠಾನ ಕೈಗೊಂಡು ಸದ್ಭಕ್ತರ ಅನ್ನಧಾತರ ಸಂಕಷ್ಟ ನಿವಾರಣೆಗೆ ಅರ್ಪಿಸಿರುವುದು ಉತ್ತಮ ಕಾರ್ಯವಾಗಿದೆ ಎಂದರು.

ಸಮಾರಂಭದಲ್ಲಿ ಜಿ.ಪಂ.ಸದಸ್ಯ ಸಿದ್ಧರಾಜ ಕಲಕೋಟಿ, ಗ್ರಾ.ಪಂ ಅಧ್ಯಕ್ಷೆ ಜಯಮ್ಮ ಬನ್ನಿಮಟ್ಟಿ, ಉಪಾಧ್ಯಕ್ಷ ಹುಚ್ಚುಸಾಬ್ ನದಾಫ, ಕೆ.ಎಂ.ಮೈದೂರ, ಶಿವಕುಮಾರ ಮಾಹೂರ, ಚನ್ನಬಸಪ್ಪ ಬನ್ನಿಮಟ್ಟಿ, ಕುರುವತ್ತೆಪ್ಪ ಹೊಸಮನಿ, ಮಂಜಪ್ಪ ಮರಿಯಾಣಿ, ಗಂಗಪ್ಪ ದಂಡಿಗನಹಳ್ಳಿ, ಕೊಟ್ರೇಶ ಮಠದ ನಾಗಪ್ಪ ಕಟ್ಟೆಣ್ಣನವರ, ಕುಮಾರ ಕಟ್ಟೆಪ್ಪನವರ, ಕುಮಾರ ಹುಲೇಪ್ಪನವರ, ಅಮರ ಗಂಗನಗೌಡ್ರ, ಈಶ್ವರ ಶಿಡೇನೂರ, ರವಿ ಗುಂಜಳ, ಮಾಲತೇಶ ಮೈಲಾರ, ಅರುಣ ರಿತ್ತಿಮರಿಯಣ್ಣನವರ ಸೇರಿದಂತೆ ಬೆಳವಿಗಿ ಹಿರೇಮೂಗದೂರ ಗುತ್ತಲ ದೇವಿಹೊಸೂರ ಬೆಳಹಾರ ಹೊಸ ಹೊನ್ನತ್ತಿ ಗ್ರಾಮಗಳಿಂದ ಸದ್ಬಕ್ತರು ಪಾಲ್ಗೊಂಡಿದ್ದರು. ಗುರುಶಾಂತ ಸ್ವಾಮಿ ಹಿರೇಮಠ ಸ್ವಾಗತಿಸಿದರು. ಗದಿಗೆಯ್ಯಸ್ವಾಮಿ ಹಿರೇಮಠ ಪ್ರಾಸ್ತಾವಿಕ ನುಡಿದರು. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.

ವರದಿ : ಗುರುಶಾಂತ ಸ್ವಾಮಿ ಹಿರೇಮಠ 

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.