ಕೆ.ಎನ್.ಪಿ.ವಾರ್ತೆ,ನವಲಿ,ಡಿ.23;

ಕರ್ನಾಟಕ ಸರ್ಕಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ, ಭಜರಂಗಿ ಕ್ರೀಡಾ ಮತ್ತು ಸಾಂಸ್ಕೃತಿಕ ಯುವಕ ಸಂಘ, ಪ್ರಕೃತಿ ಫೌಂಡೇಶನ್ ನವಲಿ ಹಾಗೂ ಗೋಪಿ ರಕ್ತ ಭಂಡಾರ ಗಂಗಾವತಿ ಇವರ ಸಹಯೋಗದಲ್ಲಿ ನೆಹರು ಪ್ರಾಥಮಿಕ ಶಾಲೆ ನವಲಿಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ನವಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ರಾಘವೇಂದ್ರ ಅವರು ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ವೇದಿಕೆ ಮೇಲಿನ ಗಣ್ಯಮಾನ್ಯರು ‘ಹಸಿರೆ ಉಸಿರು’ ಎಂಬ ದ್ಯೇಯದೊಂದಿಗೆ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಇದೇ ವೇಳೆ ರಾಘವೇಂದ್ರ ಮಾತನಾಡಿ, ರಕ್ತದಾನ ಮಹತ್ವವಾದುದು. ರಕ್ತದಾನದಿಂದ ಮನುಷ್ಯನ ಆರೋಗ್ಯದಲ್ಲಿ ಮತ್ತಷ್ಟು ಚೈತನ್ಯ ಬರುತ್ತದೆ. ಮನುಷ್ಯನ ಜ್ಞಾಪಕ ಶಕ್ತಿ ಹೆಚ್ಚಿಸಲು ರಕ್ತದಾನ ಬಹುಮುಖ್ಯ ಪಾತ್ರವಹಿಸುತ್ತದೆ. ರಕ್ತದಾನ ಮಾಡಿದರೆ ಬೇರೊಬ್ಬರ ಜೀವ ಉಳಿಸಿದ ತೃಪ್ತಿಯೂ ಸಿಗಲಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ರಕ್ತದಾನದಂತಹ ಸೇವೆಯನ್ನು ಮೈಗೂಡಿಸಿಕೊಳ್ಳಬೇಕು. ರಕ್ತದಾನ ಮಾಡುವುದರಿಂದ ರಕ್ತದೊತ್ತಡ, ಹೃದಯ ಸಂಬಂಧಿ ಖಾಯಿಲೆಗಳು ಹಾಗೂ ನರ ರೋಗಗಳು ಬರುವುದಿಲ್ಲ ಎಂದರು.

ರಕ್ತದಾನ

ಗೋಪಿ ರಕ್ತ ಭಂಡಾರದ ಸಂತೋಷ ಪ್ರಾಸ್ತಾವಿಕವಾಗಿ ಮಾತನಾಡಿ, ರಕ್ತದಾನ ಅತ್ಯಮೂಲ್ಯವಾಗಿದೆ. ಕೆಲವು ಯುವಕರು ರಕ್ತದಾನ ದಿಂದ ತೊಂದರೆ ಆಗುತ್ತದೆ ಎಂಬ ತಪ್ಪು ತಿಳುವಳಿಕೆಯಿಂದ ರಕ್ತದಾನ ಮಾಡಲು ಮುಂದೆ ಬರುತ್ತಿಲ್ಲಾ. ರಕ್ತದಾನ ಮಾಡುವುದರಿಂದ ಹೊಸದಾದ ರಕ್ತ ಉತ್ಪತ್ತಿಯಾಗುತ್ತದೆ ಇದರಿಂದ ದೇಹ ಚಟುವಟಿಕೆಯಿಂದ ಕೂಡಿರುತ್ತದೆ. ಅನುಕೂಲವಾಗುತ್ತದೆ ವಿನಹಃ ಯಾವುದೇ ತೊಂಧರೆ ಇರುವುದಿಲ್ಲ, ಆ ರೀತಿಯ ಅಪನಂಬಿಕೆಗಳಿಂದ ಹೊರಬಂದು ರಕ್ತದಾನಕ್ಕೆ ಮುಂದಾಗಿ, ಎಲ್ಲರೂ ರಕ್ತದಾನ ಮಾಡಿ ಜೀವ ಉಳಿಸಿ ಎಂದು ಕರೆ ನೀಡಿದರು.

ನವಲಿ ಜಿಲ್ಲಾ ಪಂಚಾಯತ ಸದಸ್ಯೆ ಶ್ರೀಮತಿ ಭಾಗ್ಯವತಿ ಭವಾನಿಮಠ ಮಾತನಾಡಿ, ಪಾಸ್ಟ್ ಪುಡ್ ಮತ್ತು ದುಷ್ಟ ಚಟಗಳಿಂದ ಯುವ ಜನರು ತಮ್ಮ ಸ್ವಸ್ಥ ಆರೋಗ್ಯವನ್ನು ಹಾಳು ಮಾಡಿಕೊಳ್ಳುತಿದ್ದಾರೆ. ಪೌಷ್ಠಿಕ ಆಹಾರ ಮತ್ತು ಹಿರಿಯರ ಮಾರ್ಗದರ್ಶನ ಪಡೆದಲ್ಲಿ ದೇಶದ ಸದೃಡತೆ ಕಾಪಾಡುವಲ್ಲಿ ಯುವ ಸಮುದಾಯ ಬಹುಮುಖ್ಯವಾಗಿದೆ. ನವಲಿ ಗ್ರಾಮದ ಯುವ ಬಳಗ ಇಂತಹ ಶ್ರೇಷ್ಠವಾದ ರಕ್ತದಾನ ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಘನೀಯ ಎಂದರು.

ಕಾರ್ಯಕ್ರಮದ ಸಾನಿಧ್ಯವನ್ನ ಚಂದ್ರಶೇಖರಯ್ಯ ಸ್ವಾಮಿಗಳು ವಹಿಸಿದ್ದರು. ಈ ವೇಳೆ ಪ್ರಕೃತಿ ಪೌಂಡೇಶನ್ ಅಧ್ಯಕ್ಷರು ವಿರುಪಣ್ಣ ಕಲ್ಲೂರು, ಯುವ ಸಂಘದ ಅಧ್ಯಕ್ಷರು ಮಲ್ಲಿಕಾರ್ಜುನ ಮುಂಡರಗಿ, ಗ್ರಾಮ ಪಂಚಾಯಿತಿ ಸದಸ್ಯರಾದ ಸಿದ್ದರಾಮಗೌಡ ಉಪ್ಪಳ, ಮಲ್ಲಿಕಾರ್ಜುನ ಬಳಗಾನೂರ, ಜಡಿಯಪ್ಪ ಮುಕ್ಕುಂದಿ, ಮರಿರಾಜ ಭಜಂತ್ರಿ, ಮಾನವ ಹಕ್ಕುಗಳ ಕೊಪ್ಪಳ ಜಿಲ್ಲಾಧ್ಯಕ್ಷರಾದ ಶ್ರೀ ಮಂಜುನಾಥ ತೋಟಗೇರ. ಹಿರಿಯರಾದ ಪಂಚಯ್ಯ ಸ್ವಾಮಿ ಬಿದ್ನೂರಮಠ ಹಾಗೂ ಮುಖ್ಯೋಪಾಧ್ಯಾಯರಾದ ಪರಪ್ಪ ಹಂಚಿನಾಳ ವಿವಿದ ಸಂಘ ಸಂಸ್ಥೆಯ ಮುಖ್ಯಸ್ಥರು ಹಾಗೂ ಯುವಕರು ಭಾಗಿಯಾಗಿದ್ದರು.

ವರದಿ : ಸ್ವಾಮಿ ನವಲಿ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.