ಕೆ.ಎನ್.ಪಿ.ವಾರ್ತೆ,ಬೆಳಗಾವಿ,ಮಾ.15;

ಮಾ.18ರಂದು ಸಂಗಾತ ತ್ರೈಮಾಸಿಕ ಸಾಹಿತ್ಯ ಪತ್ರಿಕೆಯು ಲೋಕಾರ್ಪಣೆಗೊಳ್ಳಲಿದೆ.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ರ್ಮಾ.18ರಂದು ಸಂಜೆ 4ಗಂಟೆಗೆ ಸಂಗಾತ ತ್ರೈಮಾಸಿಕ ಸಾಹಿತ್ಯ ಪತ್ರಿಕೆಯು ಲೋಕಾರ್ಪಣೆಗೊಳ್ಳಲಿದ್ದು,
ಹಿರಿಯ ಸಾಹಿತಿಗಳಾದ ಚಂದ್ರಕಾಂತ ಕುಸನೂರ ಪತ್ರಿಕೆ ಲೋಕಾರ್ಪಣೆ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಕವಿಗಳಾದ ಚನ್ನಪ್ಪ ಅಂಗಡಿ, ಸಂಗಾತ ಪತ್ರಿಕೆಯ ಕುರಿತು ಮಾತನಾಡಲಿದ್ದು, ಹಿರಿಯ ಸಾಹಿತಿಗಳಾದ ಡಾ.ಸರಜೂ ಕಾಟ್ಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮೌಲ್ಯ ಮಾಪನ ವಿಭಾಗದ ಕುಲಸಚಿವರಾದ ಡಾ.ರಂಗರಾಜ ಧನದುರ್ಗ ಮತ್ತು ಕವಿಗಳಾದ ಆರಿಪ್ ರಾಜಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸಂಗಾತ ಪತ್ರಿಕೆಯ ಸಂಪಾದಕರಾದ ಟಿ.ಎಸ್.ಗೊರವರ, ಕವಿಗಳಾದ ವಿಠ್ಠಲ ದಳವಾಯಿ ಮತ್ತು ಮೆಹೆಬೂಬ ಮುಲ್ತಾನಿ  ಉಪಸ್ಥಿತರಿರುವರು.