ಕೆ.ಎನ್.ಪಿ.ಲೇಖನ;

ಕೆ.ಎನ್.ಪಿ.ಲೇಖನ ವಿಭಾಗದಲ್ಲಿ ಪೂಜ್ಯಶ್ರೀ ನಾಗಭೂಷಣ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ರಚಿಸಿದ “ಸುಜ್ಞಾನದ ಆಗರ ಮತ್ತು ಸಾಗರದ ಜ್ಞಾನ ಉಳ್ಳಾತನೇ ಶ್ರೀಗುರು” ಎಂಬ ಲೇಖನವನ್ನು ಪ್ರಕಟಿಸಲಾಗಿದೆ. ಸಹೃದಯರು ಲೇಖನ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ..

ಶ್ರೀಗುರುವೇ ಸತ್ ಕ್ರೀಯೆ
ಆಗರವೇ ಸುಜ್ಞಾನ
ಸಾಗರವೇ ಯನ್ನ ಮತಿಗೆ ಮಂಗಳ
ವಿತ್ತು ರಾಗದಿಂ ಬೇಗ ಕೃಪೆಯಾಗು||

ಎಂದು ಹಾಡಿ ಹರಿಸಿದ ಮೈಲಾರ ಬಸಲಿಂಗ ಶರಣರ ವಚನಗಳು ಸ್ಮರಣಿಯವಾದವುಗಳು. ಗುರುವನ್ನು ಅವರು ನಿತ್ಯ ಒಂದರಂತೆ 336 ವಚನಗಳನ್ನು ರಚಿಸಿ ಕೊಂಡಾಡಿದ್ದಾರೆ. ಮಾನವನ ಆಗೂ ಹೋಗೂಗಳಿಗೆ ದಿನ ನಿತ್ಯದ ಬದುಕಿಗಾಗಿ ಗುರು ಕೃಪೆ ಬೇಕೆ ಬೇಕು. ನಮ್ಮ ಕ್ರೀಯಾಶೀಲ ವ್ಯಕ್ತಿತ್ವದ ಬೆಳವಣಿಗೆಗೆ ಓದು, ಬರಹ, ಕಲಿಕೆ ಇತ್ಯಾದಿಗಳಿಗೆ ಹಾಗೂ ಆಧ್ಯಾತ್ಮದ ಹಾದಿಯ ಸಾಧನೆಗಾಗಿ “ ಕರುಣಾಳು ಬಾ ಬೆಳಕೆ ಮುಸುಕಿದ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು” ಎನ್ನುವ ಹಾಗೆ ಗುರುನಾಥ ನಮ್ಮನು ಅಜ್ಞಾನದ ಅಂಧಕಾರದಿಂದ ಪಾರು ಮಾಡಿ ಸುಜ್ಞಾನದ ಬೆಳಕನ್ನು ದಯಪಾಲಿಸುವ ದಯಾಘನನು.

ಆದ್ದರಿಂದ ಆತನನನ್ನು ಸದಾ ಪ್ರಾರ್ಥಿಸದೆ ಜೀವನ ಸಾರ್ಥಕವಾಗುವುದಿಲ್ಲಾ. ನಮ್ಮ ಬದುಕು ಕಾಲಚಕ್ರದಲ್ಲಿ ಸಿಲುಕಿ ಝರ್ಜರಿತವಾದಾಗ ಆತನ ನೆನವು ಸಂಜೀವಿನಿಯಂತೆ ಕೆಲಸ ಮಾಡುತ್ತದೆ. ಆತನ ಅನುಭವ, ಮಾರ್ಗದರ್ಶನ, ಜ್ಞಾನ ಎಲ್ಲವೂ ನಮಗೆ ಬೇಕೆ ಬೇಕು.

“ಹರಮುನಿದರೆ ಗುರು ಕಾಯಬಲ್ಲ “ ಎಂಬ ಉಪ್ತಿ ಪ್ರಸಿದ್ದವಾದದು ದೇವರಿಗಿಂತಲೂ ಗುರು ದೊಡ್ಡವನು ಎನ್ನುವುದು ಇದರ ಅರ್ಥ. “ಅರಿವೇ ಗುರು “ ಇದು ನಮ್ಮೊಳಗಿನ ಅರಿವೇ ಗುರುವಾಗಬಲ್ಲದು ಸಾಂದರ್ಭಿಕವಾಗಿ ಮಾತ್ರ. ಸದಾ ಸ್ಮರಣಿಯನಾದ ಗುರು ದೈಹಿಕ, ಮಾನಸಿಕ ಪರಿಶುದ್ದವಾಗಿ ಪೂಜಿಸಬೇಕು.

ಗುರುವನ್ನು ನರನೆಂದವಗೆ
ಲಿಂಗವನು ಶಿಲೆ ಎಂದವಗೆ
ಪಾದೊದಕವನ್ನು ಜಲಯೆಂದವಗೆ
ರವರವ ನರಕ ತಪ್ಪದು ಕಾಣ ಎಂದ ಶರಣರ ನುಡಿ ಸತ್ಯವಾದದು.
ಗುರು ಜಾತಿ ಧರ್ಮಗಳನ್ನು ಮೀರಿದಾತನು

ಜಾತಿ ಹೀನನ ಮನೆಯ
ಜೋತಿ ತಾಹೀನವೇ
ಜಾತಿ ವಿಜಾತಿ ಎನಬೇಡ
ದೇವ ನೊಲಿದಾತನೇ ಜಾತ ಸರ್ವಜ್ಞನ ಮಾತು ಸ್ಮರಣಿಯವಾದದು.

ಶಿಷ್ಟರಕ್ಷಕ ದುಷ್ಟ ಪರಿಪಾಲಕ ನಾದವನೆ ನಿಜವಾದ ಗುರು. ಬಿದ್ದವರನ್ನು, ಬೀಳುತ್ತಿರುವವರನ್ನು, ಬೀಳಲೆತ್ನಿಸುವವರನ್ನು ಉದ್ದಾರ ಮಾಡುವಾತನೆ ಗುರು. “ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವಾತನೆ ಕುಲಜ“ ಎಂಬಂತೆ ಆತನ ಕ್ರಿಯೆ. ಮತ್ತು ಜ್ಞಾನಾನ್ನ ದಾಸೋಹಿ ಆದಾತನೇ ಗುರು. ಗುರುವಿನಲ್ಲಿ ಎಲ್ಲರನ್ನು, ಎಲ್ಲವನ್ನು ಗುರುತಿಸುವ ಗುರುತ್ವಾಕರ್ಷಣ ಶಕ್ತಿ ಅಡಗಿರುತ್ತದೆ.

ನಾವು ಕಂಡ ಕಂಡವರನ್ನು ಗುರುವೆಂದು ಕರೆಯಬಾರದು. ನೀರನ್ನು ಸೋಸಿ ಕುಡಿಯಬೇಕು. ಗುರುವನ್ನು ನೋಡಿ ಮಾಡಿಕೊಳ್ಳಬೇಕು ಎಂದು ಹೇಳುವ ಹಿರಿಯರ ಮಾತು ಸತ್ಯ.

ಎಲ್ಲ ಧರ್ಮಿಯರಲ್ಲು ಸಹಾ ಗುರುವಿಗೆ ವಿಶಿಷ್ಟ ಸ್ಥಾನ ಮಾನವಿದೆ. ಅಕ್ಷರಂ ಕಲಿಸಿದಾತನೇ ಗುರು ಎಂದೇಳುವಾಗ ನಮಗೆ ಕಲಿಸಿದ ವಿದ್ಯಾಗುರುವಿಗೆ ಉದರ ಪೋಷಣ ಗುರು ಎಂದು ಕರೆಯಲಾಗುತ್ತದೆ. ಅವರನ್ನು ಸಹಾ ಗೌರವಿಸುವುದು ನಮ್ಮ ಧರ್ಮ. ಅದರಂತೆ ಆಧ್ಯಾತ್ಮದ ಗುರುವಾದವನು ನಮಗೆ ಆತ್ಮಸಾಕ್ಷಾತ್ಕಾರದ ಬಗ್ಗೆ ಜ್ಞಾನವನ್ನು ಕೊಡುವ ಗುರುವೇ ಶ್ರೇಷ್ಠನಾದವನು. ಆತನ ಹರಕೆ ನಮಗೆ ಹೇಗಿರುತ್ತದೆಂದರೆ,

“ಆಚಾರಕ್ಕರಸಾಗು ನೀತಿಗೆ ಪ್ರಭುವಾಗು
ಮಾತಿನಲಿ ಚೂಡಾಮಣಿಯಾಗು –ಕಂದಯ್ಯ
ಜೋತಿಯೆ ಆಗು ಜಗಕ್ಕೆಲ್ಲ”

ಎಂಬಂತೆ ತಾಯಿಯ ಹೃದಯ ಉಳ್ಳಾತನೆ ನಿಜವಾದ ಗುರು ಏನಿಸಬಲ್ಲ ಗುರುವಿಗೆ ತಾಯಿಯಂತಲೂ ಕರೆಯುತ್ತಾರೆ ಆತನೂ ನಮ್ಮನ್ನು,

ಅಸತೋಮ ಸದ್ಗಮಯ
ತಮಸೋಮ ಜೋತಿರ್ಗಮಯ
ಮೃತ್ತೊರ್ಮ ಅಮೃತಂಗಮಯ
ಓಂ ಶಾಂತಿ ಶಾಂತಿ ಶಾಂತಿ:

ಅಂದರೆ ಅಸತ್ಯದಿಂದ ಸತ್ಯದ ಕಡೆಗೆ ಕತ್ತಲೆಯಿಂದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮರತ್ತದೆಡೆಗೆ ನಮ್ಮನ್ನು ಕರೆದುದುಕೊಂಡು ಹೋಗುವಾತನೆ ಶ್ರೀಗುರು

ಕಬಿರದಾಸರು ಹೇಳುವ ಹಾಗೆ ಗುರು ಮಹಿಮೆಯನ್ನು ಸಪ್ತಸಮುದ್ರವನ್ನೇ ಶಾಹಿಯನ್ನಾಗಿ ಮಾಡಿ ಇಡಿ ವನವೆನ್ನೇಲ್ಲಾ ಲೇಖನಿಯನ್ನಾಗಿ ಮಾಡಿ, ಈ ಭೂಮಂಡಲವನ್ನೇ ಹಾಳಿಯನ್ನಾಗಿ ಮಾಡಿದರೂ ಸಹಾ ಗುರು ಮಹಿಮೆಯನ್ನು ವರ್ಣಿಸಲು ಸಾಲದು ಎಂದು ಹೇಳಿರುವಾಗ ನಮ್ಮ ನಿಮ್ಮೇಲ್ಲರಿಗೆ ಹೇಗೆ ಸಾಧ್ಯ ಅಂತೆಯೇ ಗುರುವೆಂದರೆ ಹುಣ್ಣಿಮೆಯ ಬೆಳದಿಂಗಳೆಂದು ಕರೆಯೋಣ ಆತನ ಚರಣಗಳಿಗೊಂದು ನಮ್ಮ ನಮನ… 

ಪೂಜ್ಯಶ್ರೀ ಶ್ರೀಷ.ಬ್ರ.ನಾಗಭೂಷಣ ಶಿವಯೋಗಿ ಶಿವಾಚಾರ್ಯ
ಮಹಾಸ್ವಾಮಿಗಳು
ಸಂಸ್ಥಾನ ಬೃಹನ್ಮಠ ಹೆಬ್ಬಾಳ
ತಾ.ಗಂಗಾವತಿ ಜಿ.ಕೊಪ್ಪಳ
ಪೊ.9448757856

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.