ಕೆ.ಎನ್.ಪಿ.ವಾರ್ತೆ,ಗಂಗಾವತಿ,ಡಿ.10;

ಡಾ|| ಶಿವಕುಮಾರ ಮಾಲಿಪಾಟೀಲ್ ರವರ “ಕ್ಷಮಿಸಿ ಬಿಡು ಬಸವಣ್ಣ” ಕವನಸಂಕಲನ ಲೋಕಾರ್ಪಣೆ ಹಾಗೂ ಗಂಗಾವತಿ ಡಿ.ವೈ.ಎಸ್.ಪಿ ಡಾ.ಚಂದ್ರಶೇಖರ ಬಿ.ಪಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಲುಮರದ ವೀರಾಚಾರ್ ಅವರಿಗೆ ಸನ್ಮಾನ ಸಮಾರಂಭವನ್ನು ನಗರದ ಭಾರತೀಯ ವೈದ್ಯಕೀಯ ಭವನದಲ್ಲಿ ಡಿ.19 ರಂದು ಸಂಜೆ 5ಗಂಟೆಗೆ ಹಮ್ಮಿಕೊಳ್ಳಲಾಗಿದೆ. 

ಕುಡಗುಂಟಿ ಬಸವರಾಜ ಪ್ರಕಾಶನ ಗಂಗಾವತಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಪರಿಷತ್ ಗಂಗಾವತಿ, ಲಯನ್ಸ್ ಕ್ಲಬ್ ಹಾಗೂ ಕಾವ್ಯಲೋಕ ಇವರುಗಳ ಸಹಯೋಗದೊಂದಿಗೆ ಡಿ.12ರಂದು ಸಂಜೆ 5ಗಂಟೆಗೆ ನಗರದ ಭಾರತೀಯ ವೈದ್ಯಕೀಯ ಭವನದಲ್ಲಿ ಡಾ|| ಶಿವಕುಮಾರ ಮಾಲಿಪಾಟೀಲ್ ರವರ “ಕ್ಷಮಿಸಿ ಬಿಡು ಬಸವಣ್ಣ” ಕವನಸಂಕಲನ ಲೋಕಾರ್ಪಣೆಗೊಳ್ಳಲಿದೆ. ತಪ್ಪದೇ ನೀವು ಬನ್ನಿ.. ನಿಮ್ಮವರನ್ನು ಕರೆ ತನ್ನಿ.  

ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅಧ್ಯಕ್ಷತೆ ವಹಿಸುವರು. ಖ್ಯಾತ ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ ಕಾರ್ಯಕ್ರಮ ಉದ್ಘಾಟಿಸುವರು. ಬೆಂಗಳೂರು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಕವನಸಂಕಲನ ಲೋಕಾರ್ಪಣೆ ಮಾಡುವರು.

ಇದೇ ವೇಳೆ ಗಂಗಾವತಿ ಡಿ.ವೈ.ಎಸ್.ಪಿ ಡಾ.ಚಂದ್ರಶೇಖರ ಬಿ.ಪಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಲುಮರದ ವೀರಾಚಾರ್ ಅವರನ್ನು ಸನ್ಮಾನಿಸಲಾಗುವುದು.

ಸಮಾರಂಭದಲ್ಲಿ ಡಾ.ಎ ಸೋಮರಾಜು ಹಾಗೂ ಡಾ.ಶರಣಬಸಪ್ಪ ಕೋಲ್ಕಾರ್ ಗೌರವ ಉಪಸ್ಥಿತಿ ವಹಿಸುವರು. ಸಾಹಿತಿ ರಾಘವೇಂದ್ರ ದಂಡಿನ್ ಪುಸ್ತಕ ಪರಿಚಯ ಮಾಡುವರು. ರಮೇಶ ಗಬ್ಬೂರು ಹಾಗೂ ಅವರ ತಂಡದಿಂದ ಸಂಕಲನದ ಆಯ್ದ ಕವನಗಳ ವಿನೋದ ಗೀತ ಗಾಯನ ನಡೆಯಲಿದೆ. 

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.