ಕೆ.ಎನ್.ಪಿ.ವಾರ್ತೆ,ಚಿತ್ರದುರ್ಗ,ನ.12;

ಸಮಾಜದಲ್ಲಿನ ಭ್ರಷ್ಟಾಚಾರ ನಿರ್ಮೂಲನೆ ನನ್ನ ವಯಸ್ಸಿನವರಿಂದ ಸಾಧ್ಯವಿಲ್ಲ ಕಾರಣ ನನ್ನ ಸಮಕಾಲೀನರು ಭ್ರಷ್ಟಾಚಾರವನ್ನ ಮಾಡಿದರೂ ಈಗ ನಿಮ್ಮಂತ ಯುವಕರು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಸಾಧ್ಯ ಎಂದು ನಿವೃತ್ತ ನ್ಯಾಯಮೂರ್ತಿ ಹಾಗೂ ನಿವೃತ್ತ ಲೋಕಾಯುಕ್ತರಾದ ಸಂತೋಷ ಹೆಗಡೆಯವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸರಸ್ವತಿ ಕಾನೂನು ವಿದ್ಯಾಲಯದ ವಿದ್ಯಾರ್ಥಿಗಳನ್ನು ಮತ್ತು ಸರ್ಕಾರಿ ಕಾಲೇಜ್ ಮತ್ತು ಹೈಸ್ಕೂಲ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಇಂದು ನಗರದ ತರಾಸು ರಂಗಮಂದಿರದಲ್ಲಿ ಬಿಕೆಆರ್ ಫೌಂಡೇಶನ್ ಮತ್ತು ಪೋಲಿಸ್ ಬೇಟೆ ವಾರಪತ್ರಿಕೆ ಹಾಗೂ 4’s ಪ್ರೊಡಕ್ಷನ್ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ”ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಯುವಜನರ ಪಾತ್ರ”ಎಂಬ ವಿಷಯಕ್ಕೆ ಸಂಬಂಧಪಟ್ಟಂತೆ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಭ್ರಷ್ಟಾಚಾರ ಯಾವ ರೀತಿ ಹರಡಿತ್ತು ಎಂಬುದಕ್ಕೆ ಹೆಗಡೆಯವರು ತಮ್ಮ ಮಾತಿನಲ್ಲಿ ಈ ರೀತಿಯಾಗಿ ಪ್ರಸ್ತಾಪಿಸಿದರು. ನಾವು ನ್ಯಾಯಮೂರ್ತಿಗಳಾಗಿ ಅಧಿಕಾರದಲ್ಲಿದ್ದಾಗ ಒಂದು ರೀತಿಯ ಕೂಪಮಂಡೂಕದ ರೀತಿಯಲ್ಲಿ ಇದ್ದೇವೆಂದು ಅನಿಸಿತ್ತು.

ನಾವು ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಳ್ಳುವ ತನಕ ಈ ಸಮಾಜದ ಭ್ರಷ್ಟಾಚಾರ ಇಷ್ಟರಮಟ್ಟಿಗೆ ಇತ್ತು ಎಂಬುದು ನಮ್ಮ ಗಮನಕ್ಕೆ ಬಂದಿರಲಿಲ್ಲ ಅಂದರೆ ಸಮಾಜದಲ್ಲಿನ ಭ್ರಷ್ಟಾಚಾರವನ್ನು ನೋಡಿದ ಮೇಲೆ ಈ ಪ್ರಜಾಪ್ರಭುತ್ವ ಯಾರಿಗಾಗಿ, ಯಾರಿಗೋಸ್ಕರ ಪ್ರಜಾಪ್ರಭುತ್ವ ಇದು ಎಂಬುದು ತಿಳಿಯದಂತಾಗಿದೆ ಎಂದರು.

ತಮ್ಮ ಭಾಷಣದ ಉದ್ದಕ್ಕೂ ಹಗರಣಗಳನ್ನು ಭ್ರಷ್ಟಾಚಾರಗಳನ್ನು ಉದಾಹರಿಸುತ್ತಾ ಮಾತನಾಡಿದ ಹೆಗಡೆಯವರು ಹಿಂದಿನ ಭ್ರಷ್ಟಾಚಾರಕ್ಕೂ ಇಂದಿನ ಭ್ರಷ್ಟಾಚಾರಕ್ಕೂ ಇರುವ ವ್ಯತ್ಯಾಸ ಸೊನ್ನೆಗಳು ಎಂದು ಮಾರ್ಮಿಕವಾಗಿ ನುಡಿದರು.

ಚೀನಾದಲ್ಲಿ ಭ್ರಷ್ಟಾಚಾರಿಗಳಿಗೆ ಗಲ್ಲು ಶಿಕ್ಷೆ ಆದರೆ ಭಾರತದಲ್ಲಿ ಭ್ರಷ್ಟಾಚಾರಿಗಳಿಗೆ ಕೇವಲ ಏಳು ವರ್ಷ ಕಾರಾಗೃಹ ವಾಸ ಶಿಕ್ಷೆ. ಇಂದು ಭ್ರಷ್ಟಾಚಾರಿಗಳು ಜಾಮೀನಿನ ಮೇಲೆ ಹೊರ ಬಂದ ನಂತರ ಅವರನ್ನು ಹಾರ-ತುರಾಯಿ ಗಳಿಂದ ವಿಜೃಂಭಣೆಯಿಂದ ಸ್ವಾಗತಿಸುವರು.

ಧಾರ್ಮಿಕ ಗುರುಗಳು, ಬುದ್ಧಿಜೀವಿಗಳು, ಸಾರ್ವಜನಿಕರು ಜಾತಿ ಆಧಾರದ ಮೇಲೆ ನಮ್ಮ ಜಾತಿಯವರು ತಪ್ಪು ಮಾಡುವುದಿಲ್ಲ ಎಂದು ಅವರಿಗೆ ಅವರೇ ಹೇಳಿಕೊಳ್ಳುವಂತಹ ಪರಿಸ್ಥಿತಿಯನ್ನು ನೋಡಿದರೆ ಈಗಿನ ಪ್ರಜಾಪ್ರಭುತ್ವ ಕೆಲವರಿಂದ ಕೆಲವರಿಗಾಗಿ ಕೆಲವರಿ ಗೋಸ್ಕರ ಪ್ರಜಾಪ್ರಭುತ್ವ ಇದೆ ಎನಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸುತ್ತ ವಿದ್ಯಾರ್ಥಿಗಳಿಗೆ ಕೆಲವು ಸಲಹೆಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿದ್ದರು. ಪೋಲಿಸ್ ಬೇಟೆ ಕನ್ನಡ ವಾರ ಪತ್ರಿಕೆ ಸಂಪಾದಕರಾದ ಹುಚ್ಚವ್ವನಹಳ್ಳಿ ಪ್ರಸನ್ನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿ ಕೆ ರಮತುಲ್ಲಾ ಮಾಜಿ ಅಧ್ಯಕ್ಷರು ಜಿಲ್ಲಾ ವಕೀಲರ ಸಂಘ ಚಿತ್ರದುರ್ಗ, ವೀರಕಪುತ್ರ ಶ್ರೀನಿವಾಸ್ ರಾಜ್ಯದ್ಯಕ್ಷರು ಡಾಕ್ಟರ್ ವಿಷ್ಣು ಸೇನಾ ಸಮಿತಿ ಬೆಂಗಳೂರು, ಡಾಕ್ಟರ್ ರಾಜೇಂದ್ರ ಪ್ರಸಾದ್ ಸಹಾಯಕ ಪ್ರಾಧ್ಯಾಪಕರು ಶಿವಗಂಗೋತ್ರಿ ದಾವಣಗೆರೆ, ಸುಧಾ ದೇವಿ ಪ್ರಾಂಶುಪಾಲರು ಸರಸ್ವತಿ ಕಾನೂನು ಕಾಲೇಜು ಚಿತ್ರದುರ್ಗ, ವಿಶ್ವನಾಥ್ ಪ್ರಾಂಶುಪಾಲರು ಎಸ್ ಜೆ ಎಂ ಕಾನೂನು ಕಾಲೇಜು ಚಿತ್ರದುರ್ಗ ಮತ್ತು ಎಲ್ಲಾ ಉಪನ್ಯಾಸಕರು ಶಿಕ್ಷಕರು ಉಪಸ್ಥಿತರಿದ್ದರು.

ವರದಿ : ವೇದಮೂರ್ತಿ ಗುತ್ತಿದುರ್ಗ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.