ಕೆ.ಎನ್.ಪಿ.ಕವಿತೆ;
ಕವಿಮಿತ್ರರೆ, ಇಂದು ಕೆ.ಎನ್.ಪಿ.ಯ ಕವಿತೆ ವಿಭಾಗದಲ್ಲಿ ಟಿಪ್ಪು ಜಯಂತಿಯ ಪ್ರಯುಕ್ತ ಕವಿ ಬಿ.ಪೀರ್ ಬಾಷ ಅವರ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮಅಮೂಲ್ಯವಾದ ಅನಿಸಿಕೆ/ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.
ಹುಲಿಗುಂಡಿಗೆ ಬಗೆದ ಗಂಡು
ಟಿಪ್ಪು ಎಂದರೆ
ವೀರತ್ವ
ಹೇಡಿಗಳ ನರ ನಾಡಿಗಳಲ್ಲಿ
ನಡುಕ
ಟಿಪ್ಪು
ಹುಲಿ ಗುಂಡಿಗೆ ಬಗೆದ
ಗಂಡು
ಈ ಸೋಜಿಗವ ಕಂಡು,
ಬೆದರಿ ಊಳಿಡುತ್ತಿವೆ ನರಿಗಳು
ಬೊಗಳುತ್ತಿವೆ ನಾಯಿಗಳ
ದಂಡು
ಟಿಪ್ಪು
ತಾಯೆದೆಯ ಹಾಲು ಕುಡಿದ
ಮಗ
ರವಿಕೆ ಬಿಚ್ಚುವ ತಾಯ್ಗಂಡರು
ಅರಚುತ್ತಿದ್ದಾರೆ, ನಿಜ
ಸೋರುತ್ತಿದೆ ರಕ್ತ
ಅವರ ಕೈ, ಮೂಗುಗಳ ಕತ್ತರಿಸಿದ್ದಾನೆ
ಆತ
ಟಿಪ್ಪು
ನಾಡದೇವಿಯ ಸೆರಗ ಹಿಡಿದವರ
ಕಡಿದು
ಹಡೆದ ತಾಯಿಯ ಒಡಲು ಸೇರಿದ
ಇಗೋ, ಇಲ್ಲಿ
ಉಂಡ ಮನೆಯ ಜಂತಿ ಎಣಿಸಿದ
ದೇಶ ದ್ರೋಹಿಗಳ ದಂಡು
ಅರಚುತ್ತಿದೆ
ಸೂರ್ಯನ ಕಂಡು
ಕುಟಿಲ ಕಾರಸ್ಥಾನಕ್ಕೆ ಕತ್ತಲುಬೇಕೆಂದು
– ಬಿ ಪೀರ್ ಬಾಷ
ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…
ನೀವು ಕೂಡ ಬರೆಯಬಹುದು :
ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.
ಈ-ವಿಳಾಸ : karnatakanewsportal@gmail.com
ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.