ಕೆ.ಎನ್.ಪಿ.ಕವಿತೆ;

ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ವಿಶ್ವ ಕಾರ್ಮಿಕರ ದಿನದ ಅಂಗವಾಗಿ ದೇವರಾಜ್ ನಿಸರ್ಗತನಯ ರವರ “ಶ್ರಮಿಕನ ಬಾಳು ಹಸನಾಗಲಿ…” ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಈ ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ಶ್ರಮಿಕನ ಬಾಳು ಹಸನಾಗಲಿ…

ದಿನವಿಡೀ ದುಡಿವುದೊಂದೆ ಕಾಯಕ
ಯಾವ ಹಮ್ಮು ಬಿಮ್ಮಿಲ್ಲದ ಕಾರ್ಮಿಕ !
ಕೆಲಸ ಯಾವುದಾದರೇನು ಶ್ರಮಿಕ
ಸಾಮಾಜಿಕ ಕಳಕಳಿಯ ನಾವಿಕ !!

ನಿತ್ಯವೂ ದುಡಿಯುವೆ ಬೆವರ ಹರಿಸಿ
ನನ್ನೆಲ್ಲ ಕಷ್ಟಗಳ ಪಕ್ಕ ಸರಿಸಿ !
ದುಡಿಮೆಯೇ ದೇವರೆಂದು ನಂಬಿರುವೆ
ನಿಸ್ವಾರ್ಥದಿ ಸೇವೆಯ ಗೈದಿರುವೆ !!

ಮೈಮುರಿದು ದುಡಿಯುವೆ ಕರ್ಮಯೋಗಿ
ದೇಶದಾ ಪ್ರಗತಿಯಲಿ ನಾನಾಗಿಹೆ ಭಾಗಿ !
ಸಮಾಜದ ಒಳಿತಿಗೆ ಆಗುವೆನು ತ್ಯಾಗಿ
ನಮ್ಮ ಕಷ್ಟ ಮರೆಯದಿರಿ ತಿಂದು ತೇಗಿ !!

ಕಾರ್ಮಿಕರ ಬದುಕಿಗೆ ನೀಡಿ ಬೆಳಕ
ಆಳುವಾ ಜನರಾಗಲಿ ನಮಗೆ ಪೂರಕ !
ದುಡಿಯುವ ಜನರ ಬಗ್ಗೆ ಹೆಮ್ಮೆಯಿರಲಿ
ಶ್ರಮಜೀವಿಯ ಬಾಳು ಹಸನಾಗಲಿ !!

ದೇವರಾಜ್ ನಿಸರ್ಗತನಯ

-ದೇವರಾಜ್ ನಿಸರ್ಗತನಯ
ಬಂಗಾರಪೇಟೆ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.