ಕೆ.ಎನ್.ಪಿ.ಕವಿತೆ;

ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಮಂಜುನಾಥ ಮೆಣಸಿನಕಾಯಿ ರವರ “ಪಕ್ಷಿಗಳ ಮನದ ಮಾತು” ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಈ ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ಪಕ್ಷಿಗಳ ಮನದ ಮಾತು

ದಿಟ್ಟಿಸುವ ಕಂಗಳ ನೋಟ
ಪಕ್ಷಿಗಳು ಒಳ ಒಳಗೆ ನೊಂದಿದ್ದನು ಕಂಡೆ,
ಪಕ್ಷಿಗಳ ಒಡಲಿಲ್ಲಿಯೇ
ಬಿಕ್ಕಿ ಬಿಕ್ಕಿ ಅಳುವುದು ಕಂಡೆ.

ಸೂರ್ಯನ ತಾಪಕ್ಕೆ ಸುಸ್ತಾದ
ಪ್ರಾಣಿ ಪಕ್ಷಿಗಳ ಸಂಕುಲ,
ಒಟ್ಟಿನಲ್ಲಿ ಬಿಸಿಲಿನ ಪ್ರಖರತೆಗೆ
ಪ್ರಾಣಿ ಪಕ್ಷಿಗಳಿಗೆ ಹೈರಾಣಾಗುತ್ತಿದೆ.

ಬೇಗೆಗೆ ಹಕ್ಕಿಗಳ ಸಾವು
ಶ್ರವಿಸಿದೆ ನೋವಿನ ತಾಪಕ್ಕೆ,
ರೆಕ್ಕೆಯ ಬಿಚ್ಚಿಕೊಂಡು
ಬಾನಿನತ್ತ ಹಾರಿಕೊಂಡು.

ತಿನ್ನಲು ಒಂದು ಕಾಳಿಲ್ಲ
ಕುಡಿಯಲು ತೊಟ್ಟು ನೀರಿಲ್ಲ,
ಮಳೆಯುಇಲ್ಲಾ ಬೆಳೆಯುಇಲ್ಲಾ
ಈ ಬಿಸಿಲಿನ ಬೇಗೆಯ ನಾ ತಾಳಲಿಲ್ಲ.

ಕಾಳು ಕಾಳಿಗೂ ಅಲೆದಾಟ
ಜೀವ ಜಲಕ್ಕಾಗಿ ಹುಡುಕಾಟ,
“” ಹೇ ಮನುಷ್ಯ “”
ಮರ ಕಡಿಯುವುದು ನಿಮಗೆ ಹುಡುಗಾಟ
ನಮ್ಮ ಪರದಾಟ ಕೇಳುವರಿಲ್ಲ.

ನಮ್ಮ ಈ ಹಸಿರೇ ಉಸಿರು ಕೇಳಿರಣ್ಣಾ
ಗಿಡ ಮರ ಬೆಳೆಸುವುದು ಕಲಿಯಿರಣ್ಣಾ,
ನಮಗೆ ಜೀವ ಜಲವನು ರಕ್ಷಿಸಿರಣ್ಣಾ
ನಮಗೆ ಸ್ವಲ್ಪ ಪರಿಸರ ಉಳಿಸಿ ಕೊಡಿರಣ್ಣಾ.

✍️. ಮಂಜುನಾಥ ಮೆಣಸಿನಕಾಯಿ
ಯಲಿವಾಳ
ಹುಬ್ಬಳ್ಳಿ
ಮೊ ಸಂಖ್ಯೆ.
9019213507

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.