ಕೆ.ಎನ್.ಪಿ.ಕವಿತೆ;

ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ದೇವರಾಜ್ ನಿಸರ್ಗತನಯ ರವರ “ನನ್ನಪ್ಪ..‌.!!” ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಈ ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ನನ್ನಪ್ಪ..‌.!!

ನನ್ನಪ್ಪ ಎಂದೂ ಎತ್ತಿ ಆಡಿಸಿದವನಲ್ಲ!
ಜೀವನದಾಟದಲ್ಲಿ ಗೆಲ್ಲುವ ಛಲದ ಬೀಜ ಬಿತ್ತಿದವನು !!
ನನ್ನಪ್ಪ ಎಂದೂ ಅಪ್ಪಿ ಮುದ್ದಿಸಿದವನಲ್ಲ !
ಅಪಾರ ಜೀವಪ್ರೀತಿ ತುಂಬಿಸಿದವನು !!

ನನ್ನಪ್ಪ ಎಂದೂ ಹೆಗಲ ಮೇಲೆ ಹೊತ್ತು ತಿರುಗಲಿಲ್ಲ !
ತಿರುಗುವ ಜೀವನದ ಬಂಡಿಯ ಚಕ್ರಕೆ ಕಡೆಗೀಲಾದವನು !!

ನನ್ನಪ್ಪ ಎಂದೂ ಧೈರ್ಯಶಾಲಿಯಾಗು ಅನ್ನಲಿಲ್ಲ !
ಕಷ್ಟವನು ಎದುರಿಸುವ, ಅನ್ಯಾಯವನು ಪ್ರತಿಭಟಿಸುವ ಎದೆಗಾರಿಕೆ ಕಲಿಸಿದವನು !!

ನನ್ನಪ್ಪ ಎಂದೂ ಜಾತಿ ಧರ್ಮಗಳ ಬಗ್ಗೆ ತಲೆಕೆಡಿಸಿಕೊಂಡವನಲ್ಲ !
ಎಲ್ಲ ಜಾತಿ ಧರ್ಮಗಳ ಮೀರಿದ ಮಾನವತ್ವವೇ ಶ್ರೇಷ್ಠವೆಂದು ಬದುಕಿದವನು !!

ನನ್ನಪ್ಪ ಎಂದೂ ಕಂಡ ಕಂಡ ದೇವರಿಗೆ ಕೈ ಮುಗಿಯೆಂದು ಹೇಳಲಿಲ್ಲ !
ಸೂರ್ಯ, ಚಂದ್ರ, ಗಾಳಿ, ನೀರು, ಪ್ರಕೃತಿ ಪರಿಸರವೇ ದೇವರೆಂಬ ಕಟುಸತ್ಯವನು ಅರುಹಿದವನು !!

ನನ್ನಪ್ಪ ಎಂದೂ ಆಸ್ತಿ ಅಂತಸ್ತು
ಒಡವೆ ವಸ್ತ್ರಗಳ ವ್ಯಾಮೋಹಿಯಾಗುವಂತೆ ಮಾಡಲಿಲ್ಲ !
ಪ್ರೀತಿ, ವಿಶ್ವಾಸ, ನಂಬಿಕೆ, ಕಾಯಕ ತತ್ವವ ಮೋಹಿಸುವಂತೆ ಮಾಡಿದವನು !!

ನನ್ನಪ್ಪನೇ ನನಗೆ ಬುದ್ಧ, ಬಸವ, ಅಂಬೇಡ್ಕರ್ !
ನನ್ನಪ್ಪನೇ ನನಗೆ ಸರ್ವಸ್ವ…‌ !!

ಕವಿತೆ | ನನ್ನಪ್ಪ..‌.!! | ದೇವರಾಜ್ ನಿಸರ್ಗತನಯ
✍🏻ದೇವರಾಜ್ ನಿಸರ್ಗತನಯ
ಬಂಗಾರಪೇಟೆ.

9845527597

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.