ಕೆ.ಎನ್.ಪಿ.ಕವಿತೆ,ಜೂ.11;
ಕವಿಮಿತ್ರರೆ, ಇಂದು ಕೆ.ಎನ್.ಪಿ.ಯ ಕವಿತೆ ವಿಭಾಗದಲ್ಲಿ ಕವಿ ರಾಜೇಶ್. ಎನ್ ಅವರ ಕವಿತೆ ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ/ ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.
ಮತ್ತೆ ನೆನಪಾಗುತ್ತಿದೆ…
ನಡೆದಿರಲು ಮಳೆಯಲಿ
ಜೋಡೆತ್ತಿನ ತೆರದಲಿ
ಹಿಡಿದಿರುವ ಕೊಡೆಯದು ನೆಪಮಾತ್ರ
ಹೊರಗಿನ ಹಸಿ ಒಳಗೇರಿ ಬಿಸಿ
ಇಬ್ಬರು ತಬ್ಬಲು ಆವರಿಸಿತ್ತು ಹನಿಯಂದರ
ಎಲ್ಲಾ ನೆನಪಾಗುತ್ತಿದೆ ಬಾಲೆ
ಕಾರಣ ಮತ್ತೆ ಮುಂಗಾರು ಮಳೆ
ಮಳೆಗಾಲ ಮುಗಿದಿರಲಿಲ್ಲ
ಅದಾಗಲೇ ನೀ ನನಗಿರಲಿಲ್ಲ
ಅಕಾರಣವಿನ್ನೂ ತಿಳಿದಿಲ್ಲ
ಮಳೆ ಹನಿಗಳೊಂದಿಗಿಳಿದವೆ ಕಂಬನಿ
ಲೆಕ್ಕವಿಲ್ಲ ಸಾಗರದ ಮುತ್ತುಗಳಿಗೆ
ಕೊನೆಯಿಲ್ಲದ ಹನಿಗಳ ನನಗುಳಿಸಿದವಳೆ
ಕೊನೆವರೆಗೂ ಹನಿಸುವೆ ಎಣಿಸ ಬಾರೆ
ಮತ್ತೆ ನೆನಪಾಗುತ್ತಿದೆ…
ರಾಜೇಶ್. ಎನ್
ನಿಮ್ಮ ಕವಿತೆಗಳನ್ನು ಕೂಡ ಕಳುಹಿಸಬಹುದು.
9513326661
ನೀವು ಕೂಡ ಬರೆಯಬಹುದು :
ಆತ್ಮೀಯರೇ ಕೆ.ಎನ್.ಪಿ.ಯಲ್ಲಿ ನೀವು ಕೂಡ ಬರೆಯಬಹುದಾಗಿದೆ. ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆಯಿರಿ, ಕೆ.ಎನ್.ಪಿ.ಗೆ ಕಳುಹಿಸಿರಿ.
ಈ-ವಿಳಾಸ : karnatakanewsportal@gmail.com
ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.