ಕೆ.ಎನ್.ಪಿ.ಕವಿತೆ;

ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಮಂಜುನಾಥ ಮೆಣಸಿನಕಾಯಿ ರವರ “ಕಾರಂಜಿ ನೀರಿನ ಹಾಗೇ ನನ್ನ ಈ ಪ್ರೀತಿ” ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಈ ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ಕಾರಂಜಿ ನೀರಿನ ಹಾಗೇ ನನ್ನ ಈ ಪ್ರೀತಿ

ಕನಸಿದು ಕನವರಿಕೆಯಿದು
ಕಥೆಯಿದು ಕಾವ್ಯ ಇದು
ಕತ್ತಲ ಹೃದಯಕ್ಕೆ
ತುಂಬೋ ಬೆಳಕಿದು !!

ಪ್ರೀತಿಗೆ ಕೊಡುವ
ಕಾಣಿಕೆಯಿದು
ಪಡೆಯೋ ಭಾಗ್ಯ ಇದು
ನೊಂದ ಮನಸ್ಸಿನ ಸ್ವಾಂತನ ಇದು !!

ಪ್ರೀತಿಗೆ ನೋವು ಇದು
ನಲಿವು ಇದು
ಚಿತ್ರ ವಿಚಿತ್ರ ಇದು
ಭಾಗವತರಕ್ಕೂ
ಕಾರಣ ಇದು ಪ್ರೀತಿಯ ಬದುಕಿದು !!

ಬೆಸುಗೆಯಿದು
ಬಂಧ ಇದು ಬಂಧನ ಇದು
ಬರಡು ಭೂಮಿಯಲ್ಲೂ
ಸಿಡಿಯುವ
ನೀರ ಕಾರಂಜಿ ಇದು
ನನ್ನ ಈ ಪ್ರೀತಿ !!

✍️. ಮಂಜುನಾಥ ಮೆಣಸಿನಕಾಯಿ
ಯಲಿವಾಳ
ಹುಬ್ಬಳ್ಳಿ
ಮೊ ಸಂಖ್ಯೆ.
9019213507

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.