ಕೆ.ಎನ್.ಪಿ.ಕವಿತೆ;

ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಮಂಜುನಾಥ ಮೆಣಸಿನಕಾಯಿ ರವರ “ಈ ಸ್ನೇಹ ಭಾವ” ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಈ ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ಈ ಸ್ನೇಹ ಭಾವ

ಹಿಮಾಲಯದಷ್ಟು ಎತ್ತರ
ನಮ್ಮ ಈ ಸ್ನೇಹ,
ಹಾಳಾದ ಬದುಕಿಗೆ ಭಾವನೆಗಳ
ಚಿಲುಮೆ ಹಾಗೇ ಈ ಸ್ನೇಹ,

ಸೋತ ಮನಸ್ಸುಗಳಿಗೆ
ಸ್ಪೂರ್ತಿ ನಮ್ಮ ಈ ಸ್ನೇಹ,
ನಡೆದಷ್ಟು ದೂರ ಜೊತೆಗಿರುವುದೀ
ನಮ್ಮಿಬ್ಬರ ಈ ಸ್ನೇಹ,

ಕೊನೆಯೆ ಇಲ್ಲದ ಮೇಲೆ
ಕಾಣದು ನಮ್ಮ ಈ ಸ್ನೇಹ,
ಪದಗಳಲಿ ಬರೆಯಲಾಗದು
ಮಾತಿನಲ್ಲಿ ಹೇಳಲಾಗದು
ನಮ್ಮ ಈ ಸ್ನೇಹ..

ನಮಗಾಗಿ, ನಮ್ಮವರಿಗಾಗಿ,
ತನು ಮನವ ಧಾರೆಯೆರೆಯುವರ
ಹಾಗೇ ಮಾಡುವುದು
ನಮ್ಮಿಬ್ಬರ ಈ ಸ್ನೇಹ.

ಅಡೆ ತಡೆ ಇಲ್ಲದೆ,
ಕೊನೆ ಮೊದಲಿಲ್ಲದೆ,
ಹಸ್ತ ಚಾಚಿದೆ ಈ ಸ್ನೇಹ,
ಆದಿಯನ್ನು ಮಾತ್ರ ಕಂಡು
ಅಂತ್ಯವನ್ನೇ ಕಾಣದ ಈ ಸ್ನೇಹ…!!

ಕವಿತೆ | ಈ ಸ್ನೇಹ ಭಾವ | ಮಂಜುನಾಥ ಮೆಣಸಿನಕಾಯಿ

✍🏻.ಮಂಜುನಾಥ ಮೆಣಸಿನಕಾಯಿ
ಯಲಿವಾಳ
9019213507

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.