ಕೆ.ಎನ್.ಪಿ.ಕವಿತೆ;

ಆತ್ಮೀಯರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಕವಿ ದೇವರಾಜ್ ನಿಸರ್ಗತನಯ ಅವರ “ಅನ್ನ ಕೇಳಿದರೆ ಲಾಟಿ ಏಟೆ..!? ” ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿರಿ.. ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ಅನ್ನ ಕೇಳಿದರೆ ಲಾಟಿ ಏಟೆ..!?

ತುತ್ತು ಅನ್ನವ ಕೊಡಿ ಎಂದರೆ
ಲಾಟಿಯ ನೀವು ಬೀಸುವಿರಿ
ಖಾಕಿ ಖದರಿನ ಖಳನಾಯಕರೆ
ನಮ್ಮಯ ಹೊಟ್ಟೆ ಉರಿಸುವಿರಿ !

ಹಸಿದು ದಣಿದು ಹುದುಗಿದೆ ಉಸಿರು
ಜಲಪ್ರಳಯಕೆ ಬಲಿಯಾಗಿ
ಕರುಣೆಯಿಲ್ಲದ ಮನುಜರೆ ನೀವು
ನಮ್ಮಯ ಕಷ್ಟಕೆ ಹೆಗಲಾಗಿ !

ಕಣ್ಣೆದುರೆ ಕರಗಿದೆ ಜೀವನ
ಮನೆಮಠ ಆಸ್ತಿ ಮುಳುಗುತಿದೆ
ಹೆತ್ತ ಮಕ್ಕಳು ಸಾಕಿದ ದನಕರು
ಆಕ್ರಂದನ ಮುಗಿಲು ಮುಟ್ಟುತಿದೆ !

ಆಲಿಸ ಬಂದ ಆಳುವ ನಾಯಕರೆ
ನಿಮ್ಮೆದುರಲೆ ಇಂಥಾ ದೌರ್ಜನ್ಯ
ಕಂಡೂ ಕಾಣದ ಹಾಗೇ ಹೋಗುವಿರಿ
ಇದುವೇನಾ ನಿಮ್ಮ ಸೌಜನ್ಯ !

ಬಾಯಿಮಾತಿನ ಭರವಸೆಯೇಕೆ
ತುತ್ತಿನ ಚೀಲವು ಕೇಳುವುದೆ ?
ನಮ್ಮಯ ಕಷ್ಟ ಹೇಳಲು ಬಂದರೆ
ಲಾಟಿಯ ಏಟು ಬೀಳುವುದೆ !?

ತಟ್ಟದೆ ಇರದು ಸಂತ್ರಸ್ತರ ಶಾಪ
ನಿಮಗಧಿಕಾರವು ಶಾಶ್ವತವೆ ?
ಮಾನವೀಯತೆ ತೋರಿರಿ ಸಾಕು
ಅದಕೂ ನಿಮ್ಮಲಿ ಸೂತಕವೆ !?

ಕವಿತೆ | ಅನ್ನ ಕೇಳಿದರೆ ಲಾಟಿ ಏಟೆ..!? | ದೇವರಾಜ್ ನಿಸರ್ಗತನಯ

-ದೇವರಾಜ್ ನಿಸರ್ಗತನಯ
ಬಂಗಾರಪೇಟೆ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.