ಕೆ.ಎನ್.ಪಿ.ವಾರ್ತೆ,ಧಾರವಾಡ,ಜು.28;
ರಾಜ್ಯದಲ್ಲಿ ಕನ್ನಡ, ನಾಡು, ನುಡಿ, ಗಡಿ, ಜಲಕ್ಕಾಗಿ ಕಳೆದ 10 ವರ್ಷಗಳಿಂದಲೂ ಹೋರಾಡುತ್ತಿರುವ ಹೋರಾಟಗಾರರ ಮೇಲೆ ದಾಖಲಾಗಿರುವ ಸುಮಾರು ಒಂದು ಲಕ್ಷದ ಇಪ್ಪತೈದು ಸಾವಿರ ಮೊಕದ್ದಮೆಗಳನ್ನು ಸರ್ಕಾರ ಮರಳಿ ಪಡೆಯಬೇಕೆಂದು ಕರ್ನಾಟಕ ನವ ನಿರ್ಮಾಣ ಸೇನೆ ಧಾರವಾಡ ಜಿಲ್ಲಾ ಘಟಕ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಪತ್ರದ ಮುಖಾಂತರ ಒತ್ತಾಯಿಸಿದೆ.
ವೋಟ್ ಬ್ಯಾಂಕ್ ಗಾಗಿ ಈ ಹಿಂದೆ ಇದ್ದ ಸರಕಾರಗಳು ಅಕ್ರಮ ಧನ ಸಾಗಾಟ, ಪಬ್ಬ್, ದಾಳಿಯ ಆರೋಪಿಗಳ ಮೇಲಿನ ಪ್ರಕರಣಗಳು, ಗಣಿ ಮಾಫಿಯಾದವರ ಮೇಲಿನ ಪ್ರಕರಣಗಳು, ವಿಧಾನಸೌಧದಲ್ಲಿ ನೀಲಿ ಚಿತ್ರ ವೀಕ್ಷಣೆ ಮಾಡಿದವರ ಮೇಲಿದ್ದ ಪ್ರಕರಣಗಳು, ಭೂ ಮಾಫಿಯಾ ಮೇಲಿದ್ದ ಪ್ರಕರಣಗಳನ್ನು ಮರಳಿ ಪಡೆದುಕೊಂಡು ಕನ್ನಡಪರ ಹೋರಾಟ ಮಾಡಿದ ಹೋರಾಟಗಾರ ಮೇಲಿನ ಪ್ರಕರಣಗಳನ್ನು ಹಾಗೇ ಬಿಟ್ಟಿರುವುದು ನಾಚಿಗೇಡಿನ ಸಂಗತಿ.
ಎಲ್ಲ ಸರ್ಕಾರಗಳು ಕನ್ನಡಪರ ಹೋರಾಟಗಾರರನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಾ ಬಂದಿವೆ. ಎಷ್ಟೋ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆ ಕಾರ್ಯಕರ್ತರ ಮೇಲೆ ರೌಡಿಶೀಟ್ ತೆಗೆದು ಅವರ ಹೋರಾಟದ ಧ್ವನಿಯನ್ನು ಅಡಗಿಸುವ ಕೆಲಸ ಮಾಡುತ್ತಲಿವೆ.
ರಾಜ್ಯದ ನೆಲ, ಜಲ, ಗಡಿ ವಿಚಾರ ಬಂದಾಗ ಸರ್ಕಾರ ಮಾಡದೆ ಇರುವ ಕೆಲಸವನ್ನು ಕನ್ನಡಪರ ಸಂಘಟನೆಗಳು ಮಾಡಿವೆ. ನಾಡು, ನುಡಿಗಾಗಿ ಹೋರಾಡುತ್ತಿರುವವರನ್ನು ನಾಡದ್ರೋಹಿಗಳ ಹಾಗೆ ಕಾಣುತ್ತಿರುವ ಸರ್ಕಾರದ ಕೆಟ್ಟ ನೀತಿಗೆ ಧಿಕ್ಕಾರ. ವೋಟ್ ಬ್ಯಾಂಕ್ ರಾಜಕಾರಣಕ್ಕೆ ಕನ್ನಡಪರ ಹೋರಾಟಗಾರರ ಬದುಕನ್ನು ಬಲಿ ಕೊಡದೇ ಸರ್ಕಾರ ಹೂಡಿರುವ ಮೊಕದಮ್ಮೆಗಳನ್ನು ತಕ್ಷಣ ಮರಳಿ ಪಡೆಯಬೇಕೆಂದು ಸೇನೆ ಒತ್ತಾಯಿಸಿದೆ.
ವರದಿ : ಚಂದ್ರು ಹಿರೇಮಠ ಧಾರವಾಡ
ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…
ನೀವು ಕೂಡ ಬರೆಯಬಹುದು :
ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.
ಈ-ವಿಳಾಸ : karnatakanewsportal@gmail.com
ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.