ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಜೂ.15;

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ ಆರ್ ಟಿಸಿ) 2019-20ನೇ ಶೈಕ್ಷಣಿಕ ವರ್ಷಕ್ಕೆ ಇದೇ ಜೂನ್ 19ರಿಂದ ವಿದ್ಯಾರ್ಥಿ ಬಸ್ ಪಾಸುಗಳನ್ನು ವಿತರಿಸಲಿದ್ದು, ವಿದ್ಯಾರ್ಥಿಗಳು ಬಸ್ ಪಾಸ್ ಗಾಗಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಕೆಎಸ್ಆರ್ ಟಿಸಿ ವೆಬ್ ಸೈಟ್ www.ksrtc.in ನಲ್ಲಿ ತಮ್ಮ ವಿವರಗಳನ್ನು ಭರ್ತಿ ಮಾಡಿ ಅದರ ಪ್ರತಿಯನ್ನು ತೆಗೆದು ಶಾಲೆ ಅಥವಾ ಕಾಲೇಜಿನ ಮುಖ್ಯಸ್ಥರ ದಾಖಲಾತಿ ಪಡೆದು ಕೆಎಸ್ಆರ್ ಟಿಸಿ ನಿಗಮಕ್ಕೆ ಸಲ್ಲಿಸಿದರೆ ಪಾಸು ದೊರೆಯುತ್ತದೆ ಎಂದು ಕೆಎಸ್ ಆರ್ ಟಿಸಿ ಹೇಳಿಕೆ ತಿಳಿಸಿದೆ.

ಈ ವರ್ಷ ಕೆಎಸ್ಆರ್ ಟಿಸಿ ವಿದ್ಯಾರ್ಥಿ ಬಸ್ ಪಾಸ್ ದರವನ್ನು ಶೇಕಡಾ 20ರಷ್ಟು ಏರಿಕೆ ಮಾಡಿತ್ತು. ಆದರೆ ನಂತರ ಸರ್ಕಾರ ಮಧ್ಯೆ ಪ್ರವೇಶಿಸಿದ ಹಿನ್ನೆಲೆ ಕಳೆದ ವರ್ಷದ ಬಸ್ ಪಾಸ್ ದರಗಳನ್ನೇ ಈ ವರ್ಷವೂ ಮುಂದುವರೆಸಲಾಗಿದ್ದು, ದರದಲ್ಲಿ ಯಾವುದೇ ಏರಿಕೆಯಾಗಿಲ್ಲ.

ಬಸ್ ಪಾಸ್ ದರ ಇಂತಿದೆ:

  • ಪ್ರಾಥಮಿಕ ಶಾಲೆ-150
  • ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ -750
  • ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ – 550
  • ಪಿಯುಸಿ/ಪದವಿ/ ಡಿಪ್ಲೊಮಾ-1,050
  • ವೃತ್ತಿಪರ ಕೋರ್ಸ್ ಗಳು-1,550
  • ಸಂಜೆ ಕಾಲೇಜು/ ಪಿಎಚ್ ಡಿ-1,350
  • ಎಸ್ ಸಿ/ ಎಸ್ ಟಿ ವಿದ್ಯಾರ್ಥಿ ಪಾಸ್-150

ಐಟಿಐ ವಿದ್ಯಾರ್ಥಿಗಳಿಗೆ 12 ತಿಂಗಳ ಅವಧಿಗೆ ವಿದ್ಯಾರ್ಥಿ ಪಾಸ್ ನೀಡುತ್ತಿದ್ದು, ಸಾಮಾನ್ಯ ವರ್ಗದವರಿಗೆ 1310 ರೂ ಇದ್ದರೆ, ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳಿಗೆ 160 ದರ ಇರಲಿದೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.