ಕೆ.ಎನ್.ಪಿ.ವಾರ್ತೆ,ರಾಂಚಿ,ಡಿ.16;

ಜಾರ್ಖಂಡ್ ವಿಧಾನಸಭೆ ಚುನಾವಣೆ (jharkhand assembly election ) ಯ ನಾಲ್ಕನೇ ಹಂತದ ಮತದಾನ ಇಂದು ಆರಂಭವಾಗಿದ್ದು, ಜಾರ್ಖಂಡ್ ನ ಒಟ್ಟು 15 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಗತಿಯಲ್ಲಿದೆ.

ಜಾರ್ಖಂಡ್ ನ ಜಮುವಾ, ಬಗೊದರ್, ಗಿರಿದಿಹ್, ದುಮ್ರಿ ಮತ್ತು ತುಂಡಿ ಕ್ಷೇತ್ರಗಳಲ್ಲಿ ಇಂದು ಅಪರಾಹ್ನ 3 ಗಂಟೆಗೆ ಮತದಾನ ಮುಕ್ತಾಯವಾಗಲಿದ್ದು ಉಳಿದ ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಯವರೆಗೆ ನಡೆಯಲಿದೆ.

ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಭದ್ರತೆಗಾಗಿ ಸೇನಾಪಡೆಯನ್ನು ನಿಯೋಜಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ವಿನಯ್ ಕುಮಾರ್ ಚೌಭೆ ತಿಳಿಸಿದ್ದಾರೆ.

ರಾಜ್ಯದ 6 ಸಾವಿರದ 101 ಮತಗಟ್ಟೆಗಳ ಪೈಕಿ 587 ಸೂಕ್ಷ್ಮ ಮತ್ತು 405 ಮತಗಟ್ಟೆಗಳು ಅತಿಸೂಕ್ಷ್ಮ ನಕ್ಸಲ್ ಪೀಡಿತ ಮತಗಟ್ಟೆಗಳಾಗಿದ್ದು 546 ನಕ್ಸಲೇತರ ಸೂಕ್ಷ್ಮ ಮತ್ತು 2 ಸಾವಿರದ 665 ಸೂಕ್ಷ್ಮ ಮತಗಟ್ಟೆಗಳಾಗಿವೆ.

ಇಂದು ನಡೆಯುವ ಮತದಾನದಲ್ಲಿ 47 ಲಕ್ಷದ 85 ಸಾವಿರದ 009 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದು, 221 ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಲಿದ್ದಾರೆ.

ಐದನೇ ಮತ್ತು ಕೊನೆಯ ಹಂತದ 16 ಕ್ಷೇತ್ರಗಳಿಗೆ ಚುನಾವಣೆ ಡಿಸೆಂಬರ್ 20ರಂದು ನಡೆಯಲಿದ್ದು ಡಿಸೆಂಬರ್ 23ರಂದು ಮತಎಣಿಕೆ ನಡೆಯಲಿದೆ.

jharkhand assembly election : 3ನೇ ಹಂತದ ಮತದಾನ ಇಂದು

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.