ಕೆ.ಎನ್.ಪಿ.ವಾರ್ತೆ,ನವದೆಹಲಿ,ಜು.24;

ಆದಾಯ ತೆರಿಗೆ ಮರುಪಾವತಿ (ಐಟಿ ರಿಟರ್ನ್ಸ್) ಸಲ್ಲಿಸಲು ಸಮಸ್ಯೆ ಎದುರಿಸುತ್ತಿದ್ದ ಮಂದಿಗೆ ಗುಡ್ ನ್ಯೂಸ್. ಐಟಿ ರಿಟರ್ನ್ಸ್ ವಿವರ ಸಲ್ಲಿಕೆಯ ಅವಧಿಯನ್ನು ಆಗಸ್ಟ್ 31ರವರೆಗೆ ವಿಸ್ತರಿಸಲಾಗಿದೆ.

2018-19ನೇ ಸಾಲಿನ ಆದಾಯ ತೆರಿಗೆ ವಿವರಗಳನ್ನು (ಐಟಿಆರ್) ಸಲ್ಲಿಸುವ ಅವಧಿಯನ್ನು ಕೇಂದ್ರ ಹಣಕಾಸು ಸಚಿವಾಲಯ ಆಗಸ್ಟ್ 31ರವರೆಗೆ ವಿಸ್ತರಿಸಿದೆ.

ವೇತನ ತೆರಿಗೆ ಪಾವತಿದಾರರು, ಸಂಸ್ಥೆ, ಕಂಪೆನಿಗಳು 2018-19ನೇ ಸಾಲಿನ ಆದಾಯ ತೆರಿಗೆ ವಿವರಗಳನ್ನು ಈ ತಿಂಗಳ 31ರೊಳಗೆ ಸಲ್ಲಿಸಬೇಕಾಗಿತ್ತು. ಇದೀಗ ಕೇಂದ್ರ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ಆದಾಯ ತೆರಿಗೆ ಸಲ್ಲಿಕೆ ಅವಧಿಯನ್ನು ಒಂದು ತಿಂಗಳ ಕಾಲ ವಿಸ್ತರಿಸಿದೆ ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಕಳೆದ ವರ್ಷದ ಟಿಡಿಎಸ್ ಪ್ರತಿ ಸಿಗುವುದು ವಿಳಂಬವಾಗಿರುವುದರಿಂದ ಐಟಿಆರ್ ದಿನಾಂಕವನ್ನು ವಿಸ್ತರಿಸಬೇಕೆಂಬ ಬೇಡಿಕೆ ಕೇಳಿಬಂದಿತ್ತು.
ಕಳೆದ ತಿಂಗಳು ಆದಾಯ ತೆರಿಗೆ ಇಲಾಖೆ ಉದ್ಯೋಗದಾತರು ತಮ್ಮ ಉದ್ಯೋಗಿಗಳಿಗೆ ಕಳೆದ ಸಾಲಿನ ಟಿಡಿಎಸ್ ಪ್ರಮಾಣಪತ್ರದ ಫಾರ್ಮ್ 16 ನೀಡುವ ಕಡೆಯ ದಿನಾಂಕವನ್ನು ಜುಲೈ 10ರವರೆಗೆ ವಿಸ್ತರಿಸಿತ್ತು. ಇದರಿಂದಾಗಿ ಆದಾಯ ತೆರಿಗೆ ವಿವರ ಸಲ್ಲಿಸುವ ವೇತನ ಉದ್ಯೋಗಿಗಳಿಗೆ ತೆರಿಗೆ ವಿವರ ಸಲ್ಲಿಸಲು ಕೇವಲ 20 ದಿನಗಳ ಅವಕಾಶ ಮಾತ್ರ ಸಿಕ್ಕಿತ್ತು.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.