ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಮೇ.27;

ನಗರದ ಬಿ.ಎಸ್.ಎನ್.ಎಲ್. ನಿವೃತ್ತ ಅಭಿಯಂತರರಾದ ಹದಡಿ ಕೃಷ್ಣಮೂರ್ತಿ ಮತ್ತು ದಾವಣಗೆರೆ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ವೀಣಾ ಕೃಷ್ಣಮೂರ್ತಿ ಯವರ ಮಗಳಾದ ಐಶ್ವರ್ಯ ಕೃಷ್ಣಮೂರ್ತಿರವರು ಅಮೇರಿಕಾದ ನ್ಯೂಯಾರ್ಕ್ ನಲ್ಲಿರುವ “ಸನಿ ಬಫೆಲೋ” ಯುನಿವರ್ಸಿಟಿಯಿಂದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಮಾಸ್ಟರ್ ಆಫ್ ಸೈನ್ಸ್ ಪದವಿಯನ್ನು ಮೇ.17ರಂದು ಪಡೆದಿರುತ್ತಾರೆ.

ಮೇ.17 ರಂದು ನ್ಯೂಯಾರ್ಕ್ ನ ಯುನಿವರ್ಸಿಟಿ ಆವರಣದಲ್ಲಿ ನಡೆದ ಪದವಿ ಪ್ರದಾನ ಘಟಿಕೋತ್ಸವ ಸಮಾರಂಭದಲ್ಲಿ ಐಶ್ವರ್ಯ ಅವರಿಗೆ ಪದವಿ ಪ್ರಮಾಣ ಪತ್ರವನ್ನು ಪ್ರದಾನ ಮಾಡಲಾಯಿತು.

ಐಶ್ವರ್ಯ ಕೃಷ್ಣಮೂರ್ತಿ ಅವರಿಗೆ, ಸನಿ ಬಫೆಲೋ ಯುನಿವರ್ಸಿಟಿ ಪ್ರಾಧ್ಯಾಪಕರು, ತಂದೆ, ತಾಯಿ, ಶ್ರೀಮತಿ ಅನುಪಮ ಕೃಷ್ಣಮೂರ್ತಿ, ಶ್ರೀ ವಿನಯ ಚಂದ್ರ ವೈದ್ಯ ಮತ್ತು ಕು.ವಿವಾನ್, ವೈದ್ಯ ಹಾಗೂ ದಾವಣಗೆರೆ ತಿಂಗಳ ಅಂಗಳ ಬಳಗದ ಸದಸ್ಯರು ಅಭಿನಂದಿಸಿದ್ದಾರೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.