ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಸೆ.28;
ತಾಯಿನೇ ನಿಜವಾದ ದೇವರು ಅಂತಾರೆ..ಅಂತಹ ಹೆತ್ತ ತಾಯಿಯನ್ನು ಬೀದಿಗೆ ತಳ್ಳಿರುವ ಘಟನೆ ಗುಡಾಳ್ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮಕ್ಕಳು ಹೆತ್ತ ತಾಯಿಯನ್ನೇ ಬೀದಿಗೆ ತಳ್ಳಿರುವ ಮನಕಲುಕುವ ಘಟನೆ ಇದು..
ಈ ಮಹಾ ತಾಯಿಯ ಮಕ್ಕಳು ಸರ್ಕಾರಿ ಕೆಲಸದಲ್ಲಿ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದವರು. ಆ ಮಕ್ಕಳನ್ನ ಸಾಕಲು ತಾಯಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ, ಆದ್ರೆ ಆ ಮಕ್ಕಳು ಹೆತ್ತ ತಾಯಿಯನ್ನ ಬೀದಿಗೆ ತಳ್ಳಿದ್ದಾರೆ. ಅಲ್ಲದೇ ಆ ತಾಯಿ ಇಂದು ಪಾಳು ಬಿದ್ದ ಮನೆಯಲ್ಲಿ, ಯಾರದೋ ತುತ್ತು ಅನ್ನಕ್ಕೆ ಕಾದು ಕೂರುವಂತ ಪರಿಸ್ಥಿತಿ ಬಂದೊದಗಿದೆ. ಅಷ್ಟಕ್ಕು ಕಷ್ಟ ಪಡುತ್ತಿರುವ ತಾಯಿ ಯಾರು ಅನ್ನೋದನ್ನ ಮುಂದೆ ಓದಿ…
ವಿಷ ಜಂತು ಇರುವ ಸ್ಥಳದಲ್ಲಿ ಏಕಾಂಗಿಯಾಗಿ ಜೀವನ ಮಾಡುತ್ತಿರುವ ವೃದ್ಧೆ ತಾಯಿ :
ವಿಷ ಜಂತು ಇರುವ ಸ್ಥಳದಲ್ಲಿ ಏಕಾಂಗಿಯಾಗಿ ಜೀವನ ಮಾಡುತ್ತಿರುವ ವೃದ್ಧೆಗೆ ಬಿದ್ದು ಹೋಗಿರುವ ಮನೆಯೇ ಆಶ್ರಯವಾಗಿದೆ. ವೃದ್ಧೆಯ ಪರಿಸ್ಥಿತಿ ನೋಡಿ ಸ್ಥಳಿಯರೇ ಅನ್ನ, ನೀರು ನೀಡುತ್ತಿದ್ದಾರೆ. ಈ ತಾಯಿಗೆ ಹೆತ್ತ ಮಕ್ಕಳಿದ್ದರೂ ಇಂತಹ ಹೀನಾಯ ಪರಿಸ್ಥಿತಿ ಬಂದಿದೆ. ಇಂತದೊಂದು ಸನ್ನಿವೇಶ ಕಂಡು ಬಂದದ್ದು ದಾವಣಗೆರೆ ತಾಲೂಕು ಗುಡಾಳ್ ಗ್ರಾಮದಲ್ಲಿ.
ಕಳೆದ ಎರಡು ತಿಂಗಳ ಹಿಂದೆ ಹಿರಿಯಮ್ಮ ತಾನು ಹೆತ್ತ ಮಗ ವೇದಮೂರ್ತಿ ಮನೆಗೆ ದಾವಣಗೆರೆಗೆ ತೆರಳಿದ್ದಾರೆ… ಆಸೆಯಿಂದ ಹೋಗಿದ್ದ ತಾಯಿಗೆ ಶಾಕ್ ಕಾದಿತ್ತು. ತನ್ನ ಹೆಂಡತಿಯ ಮಾತು ಕೇಳಿ, ವೇದಮೂರ್ತಿ ಹೆತ್ತ ತಾಯಿಗೆ ಕಾಲಿನಿಂದ ಒದ್ದು ಹೊರ ಹಾಕಿದ್ದಾನೆ.
ಇದರಿಂದ ಮನ ನೊಂದ ಹಿರಿಯಮ್ಮ ತಾನು ಬದುಕಿ ಬಾಳಿದಂತ ಮನೆಯಲ್ಲಿ ಪ್ರಾಣ ಬಿಡಬೇಕು ಎಂಬ ಕಾರಣಕ್ಕೆ ಹಾಳು ಮನೆಯಲ್ಲಿ ಜೀವನ ಮಾಡುತ್ತಿದ್ದಾರೆ. ಅಲ್ಲದೆ ಊಟ, ತಿಂಡಿಯನ್ನ ಅಕ್ಕಪಕ್ಕದ ಮನೆಯವರು ತುಂದುಕೊಡುತ್ತಿದ್ದು, ಆಕೆಯನ್ನ ಕೊನೆಗಾಲದಲ್ಲಿ ನೋಡಿಕೊಳ್ಳಬೇಕಿದ್ದ ಮಕ್ಕಳೆ ಇಲ್ಲದಂತಾಗಿ ಒಂದು ಹನಿ ವಿಷ ಕುಡಿದು ಸಾಯಬೇಕು ಎಂದು ತಮ್ಮ ನೋವನ್ನ ಹೇಳಿಕೊಂಡಿದ್ದಾರೆ…
ವರದಿ : ಮಹಮ್ಮದ್ ಅಬ್ದುಲ್ ರಖೀಬ್
ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…
ನೀವು ಕೂಡ ಬರೆಯಬಹುದು :
ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.
ಈ-ವಿಳಾಸ : karnatakanewsportal@gmail.com
ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.