ಕೆ.ಎನ್.ಪಿ.ವಾರ್ತೆ,ಚಂಡೀಘಡ,ಅ.24;

ಹರ್ಯಾಣ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಲಿದೆ ಎಂದೇ ಎಣಿಸಲಾಗಿತ್ತು. ವಿಪಕ್ಷ ಕಾಂಗ್ರೆಸ್‌ಗೆ ಐದಕ್ಕಿಂತಲೂ ಕಡಿಮೆ ಸೀಟುಗಳಷ್ಟೆ ಬರುತ್ತವೆಂದು ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿದ್ದವು. ಆದರೆ ಇವೆಲ್ಲ ಹುಸಿಯಾಗಿವೆ.

ಹರ್ಯಾಣದಲ್ಲಿ ವಿಪಕ್ಷವಾದ ಕಾಂಗ್ರೆಸ್ ಒಳಜಗಳಗಳಿಂದ ತತ್ತರಿಸಿತ್ತು. ಆಡಳಿತಾರೂಢ ಬಿಜೆಪಿಗೆ ಈ ವಿಧಾನಸಭೆ ಚುನಾವಣೆ ಸುಲಭದ ಗೆಲುವು ಎಂದೇ ಹೇಳಲಾಗಿತ್ತು. ಆದರೆ ಮತದಾರನ ಮನಸ್ಸಿನಲ್ಲಿ ಬೇರೆಯೇ ಇದ್ದಂತಿದೆ.

ಮತ ಎಣಿಕೆಯ ಈವರೆಗಿನ (ಬೆಳಿಗ್ಗೆ 10 ಗಂಟೆ) ಟ್ರೆಂಡ್‌ ಪ್ರಕಾರ ಹರ್ಯಾಣದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಬಹುಮತಕ್ಕೆ 46 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕಿದೆ. ಆದರೆ ಈಗಿನ ಮುನ್ನಡೆಯೇ ಮುಂದುವರೆದರೆ ಬಿಜೆಪಿಗೆ ಈ ಸಂಖ್ಯೆ ಸಾಧ್ಯವಾಗದು. ಕಾಂಗ್ರೆಸ್‌ ಸಹ ಗುರಿ ಮುಟ್ಟಲು ಸಾಧ್ಯವಾಗದು. ಹರ್ಯಾಣದಲ್ಲಿ ಜನನಾಯಕ ಜನತಾ ಪಕ್ಷ ನಿರ್ಣಾಯಕ ಸ್ಥಾನ ವಹಿಸಲಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು 47 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅಧಿಕಾರ ಹಿಡಿದಿತ್ತು. ಕೇವಲ 15 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲ ಕಾಂಗ್ರೆಸ್‌ ಹೀನಾಯ ಸೋಲು ಕಂಡಿತ್ತು. ಐಎನ್‌ಎಲ್‌ಡಿ ಪಕ್ಷವು 19 ಸ್ಥಾನಗಳಲ್ಲಷ್ಟೆ ಗೆದ್ದಿತ್ತು.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.