ಕೆ.ಎನ್.ಪಿ.ವಾರ್ತೆ,ಗಂಗಾವತಿ,ಜೂ.12;
09 ತಿಂಗಳ ಬಾಕಿ ವೇತನ ಪಾವತಿಗೆ ಒತ್ತಾಯಿಸಿ ಹೊರಗುತ್ತಿಗೆ ಆಧಾರದ 162 ಜನ ಪೌರಕಾರ್ಮಿಕರು ಗಂಗಾವತಿ ನಗರಸಭೆ ಮುಂಭಾಗದಲ್ಲಿ ನಡೆಸುತ್ತಿರುವ ಧರಣಿ ಸತ್ಯಾಗ್ರಹವು 4 ದಿನಗಳನ್ನು ಪೂರೈಸಿದೆ.
ಕಳೆದ 03 ದಿನಗಳಿಂದ ನಗರಸಭೆಯ ಮುಂದೆ ನಡೆಯುತ್ತಿರುವ ಗುತ್ತಿಗೆ ಪೌರಕಾರ್ಮಿಕರ 09 ತಿಂಗಳ ಬಾಕಿ ವೇತನಕ್ಕಾಗಿ ಧರಣಿ ಸತ್ಯಾಗ್ರಹಕ್ಕೆ ಉಗ್ರ ರೂಪ ಕೊಡಲು ನಾಳೆ ಗುತ್ತಿಗೆ ಪೌರಕಾರ್ಮಿಕರ ಮಕ್ಕಳು ಹಾಗೂ ವಿದ್ಯಾರ್ಥಿಗಳು ಮತ್ತು ಕುಟುಂಬಗಳ ಹಿರಿಯ ಸದಸ್ಯರು ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಸವರಾಜ ಸುಳೇಕಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ 03 ದಿನಗಳಿಂದ 162 ಜನ ಗುತ್ತಿಗೆ ಪೌರಕಾರ್ಮಿಕರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಜಿಲ್ಲಾಡಳಿತವಾಗಲಿ, ನಗರಸಭೆ ಆಡಳಿತವಾಗಲಿ, ಸ್ಥಳೀಯ ರಾಜಕಾರಣಿಗಳಾಗಲಿ ಯಾವುದೆ ರೀತಿ ಸ್ಪಂದನೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಂಗಾವತಿ ನಗರವನ್ನು ಸ್ವಚ್ಛಗೊಳಿಸಿ ಜನರ ಸ್ವಾಸ್ಥ್ಯ ಕಾಪಾಡುವ ದಲಿತ ಕಾರ್ಮಿಕರ ಬಗ್ಗೆ ಆಡಳಿತ ವರ್ಗ ಮತ್ತು ಸರ್ಕಾರ ನಿರ್ಲಕ್ಷ್ಯ ವಹಿಸಿದ್ದು ಅಕ್ಷಮ್ಯ ಅಪರಾಧವಾಗಿದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಕಾರ್ಮಿಕರ ಸಮಸ್ಯೆ ಪರಿಶೀಲನೆ ಮಾಡಿ ಬಾಕಿ ವೇತನ, ಬಾಕಿ ಇರುವ ವ್ಯತ್ಯಾಸ ವೇತನ ಮತ್ತು ಭವಿಷ್ಯ ನಿಧಿಗಳ ಬಾಕಿಗಳನ್ನು ಕೂಡಲೇ ಸಂದಾಯ ಮಾಡಬೇಕೆಂದು ಪ್ರಗತಿಪರ ಗುತ್ತಿಗೆ ಪೌರಕಾರ್ಮಿಕರ ಸಂಘ ಒತ್ತಾಯಿಸುತ್ತದೆ.
ಜಿಲ್ಲಾಡಳಿತ ಕಾರ್ಮಿಕರ ಸಂಬಳದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಬಗೆಹರಿಸದಿದ್ದಲ್ಲಿ ಕಾರ್ಮಿಕರು ಜೂ.14 ರಿಂದ ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಿದ್ದಾರೆ ಎಂದು ಗುತ್ತಿಗೆ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಪರಶುರಾಮ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.
ನೀವು ಕೂಡ ಬರೆಯಬಹುದು :
ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.
9513326661
ಈ-ವಿಳಾಸ : karnatakanewsportal@gmail.com
ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.