ಕೆ.ಎನ್.ಪಿ.ವಾರ್ತೆ,ಜಗಳೂರು,ಅ.22;

ಜಗಳೂರು ತಾಲೂಕಿನ ಗುತ್ತಿದುರ್ಗ ಗ್ರಾಮದಲ್ಲಿ ನಿನ್ನೆ ರಾತ್ರಿ ಇಡೀ ಸುರಿದ ಮಳೆಗೆ ಗ್ರಾಮದ ಚೆಕ್ ಡ್ಯಾಮ್ ಗಳು ತುಂಬಿ, ಹಳ್ಳಕೊಳ್ಳಗಳು ಹರಿಯುತ್ತಿವೆ.

ಕಳೆದ ಐದು ವರ್ಷಗಳಲ್ಲಿ ಈ ತರಹದ ಮಳೆ ಬಂದದ್ದು ಬಹಳ ಅಪರೂಪವಾಗಿದೆ. ಬತ್ತಿದ ಬೋರ್ ವೆಲ್ ಗಳಲ್ಲಿ ಮತ್ತೆ ನೀರು ಬರುವ ಸಾಧ್ಯತೆ ಇರುವುದರಿಂದ ರೈತರ ಮೊಗದಲ್ಲಿ ನೆಮ್ಮದಿ ಕಾಣುವಂತಾಗಿದೆ.

ನಿನ್ನೆ ಸುರಿದ ಮಳೆಗೆ ಗ್ರಾಮದ ಐತಿಹಾಸಿಕ ಹೊಂಡ ತುಂಬಿದ್ದು ಒಂದು ಭಾಗದ ದಡ ಕುಸಿದಿದೆ. 2016ರಲ್ಲಿ ಉದ್ಯೋಗ ಖಾತ್ರಿಯಲ್ಲಿ ಈ ಹೊಂಡವನ್ನು ಜೀರ್ಣೋದ್ಧಾರ ಮಾಡಲಾಗಿತ್ತು. ಈ ಹೊಂಡದ ವಿಶೇಷವೆಂದರೆ ಬೇಸಿಗೆಯಲ್ಲಿ ನೀರಿಲ್ಲದೆ ಒಣಗಿರುವ ಸಂದರ್ಭಗಳು ಬಹಳ ಕಮ್ಮಿ, ಅದ್ದರಿಂದ ಇದರ ದುರಸ್ತಿ ತುಂಬಾ ಪ್ರಾಮುಖ್ಯತೆ ಹೊಂದಿದೆ.

ವರದಿ : ವೇದಮೂರ್ತಿ 

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.