ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಜು.27;
ಬಳ್ಳಾರಿಯ ವಿಶಾಲನಗರದ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಇಂದು ಬೆಳಗಿನ ಆರತಿ ಕಾರ್ಯಕ್ರಮದಿಂದ ಸಾವಿರಾರು ಭಕ್ತರು ಶ್ರೀ ಶಿರಡಿ ಸಾಯಿಬಾಬಾನ ದರ್ಶನ ಪಡೆದು ಪುನೀತರಾದರು.
ಜನರು ಶ್ರದ್ಧಾಭಕ್ತಿಯಿಂದ ಸಾಲಿನಲ್ಲಿ ಬಂದು ದರ್ಶನ ಪಡೆದು ಪೂಜೆ ಸಲ್ಲಿಸಿ ಪ್ರಸಾದವನ್ನು ಸ್ವೀಕರಿಸಿದರು. ಗುರುಪೌರ್ಣಮಿಯ ದಿನವಾದ ಇಂದು ರಕ್ತದಾನ ಶಿಬಿರವನ್ನು ಸಹ ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ನೂರಾರು ಜನ ರಕ್ತದಾನ ಮಾಡಿದರು.
ಇದೇ ರೀತಿ ಕೌಲ್‍ಬಜಾರ್, ಬ್ರಾಹ್ಮಣ ಬೀದಿ, ಸತ್ಯನಾರಾಯಣ ಪೇಟೆಯಲ್ಲಿರುವ ಬಾಬಾ ಮಂದಿರಕ್ಕೂ ಸಹ ಸಾವಿರಾರು ಭಕ್ತರು ಭೇಟಿ ನೀಡಿ ದರ್ಶನ ಪಡೆದದ್ದು ಕಂಡುಬಂತು.
ಜಾತಿ, ಮತ ಭೇದವಿಲ್ಲದೇ ಎಲ್ಲರೂ ಸರತಿ-ಸಾಲಿನಲ್ಲಿ ನಿಂತು ಬಾಬಾನ ದರ್ಶನ ಪಡೆದರು. ಬೆಳಗಿನ ಕಾಕಡಾರತಿಯಿಂದ ಗಣಪತಿ ಪೂಜೆ, ಬಾಬಾ ಅವರಿಗೆ ಮಂಗಳಸ್ನಾನ, ಕ್ಷೀರಾಭಿಷೇಕ, ಸಾಯಿ ಚರಿತ್ರೆ ಪಾರಾಯಣ, ಸಂಕೀರ್ತನೆ, ಅರ್ಚನೆ, ಪೂಜೆ, ಸತ್ಯವೃತವನ್ನು ಶ್ರದ್ದಾಭಕ್ತಿಯಿಂದ ನೆರವೇರಿಸಿದರು.
ಶ್ರೀ ಸಾಯಿಬಾಬಾ ಸಮಾಧಿಯಾಗಿ ನೂರು ವರ್ಷ ಕಳೆದಿರುದಿರುವುದರಿಂದ ಈ ವರ್ಷ ವಿಶೇಷವಾಗಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಂದಿರಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ದೇವಸ್ಥಾನದ ಸಂಸ್ಥಾಪಕ ಅಧ್ಯಕ್ಷ ಕುಮಾರಸ್ವಾಮಿ ತಿಳಿಸಿದರು.
ವರದಿ : ಟಿ.ಗಣೇಶ್
ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…
ನೀವು ಕೂಡ ಬರೆಯಬಹುದು :
ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.
ಈ-ವಿಳಾಸ : karnatakanewsportal@gmail.com
ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.