ರಾಮ ಮಂದಿರ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ | 70 ವರ್ಷದ ಪ್ರಕರಣಕ್ಕೆ ಇಂದು ಸುಪ್ರೀಂ ಐತಿಹಾಸಿಕ ತೀರ್ಪು ಪ್ರಕಟಿಸಿದೆ

ರಾಮ ಮಂದಿರ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ | ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಎಸ್ ಎ ಬೊಬ್ಡೆ, ಡಿ. ವೈ ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್ ಎ ನಝೀರ್ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ಇಂದು ಐತಿಹಾಸಿಕ ತೀರ್ಪು ಪ್ರಕಟಿಸಿದೆ.

ಸುಧೀರ್ಘ 40 ದಿನಗಳ ವಿಚಾರಣೆಯ ಬಳಿಕ ಸುಪ್ರೀಂ ಮಹತ್ವದ ತೀರ್ಪು ನೀಡಿದೆ. ಒಟ್ಟು 1045 ಪುಟಗಳ ತೀರ್ಪಿನಲ್ಲಿ ಬಹಳಷ್ಟು ಅಂಶಗಳು ವಿಚಾರಣೆಗೆ ಬಂದಿವೆ. ಇದರಲ್ಲಿ 2.77 ಎಕರೆ ಭೂಮಿ ರಾಮಲಲ್ಲಾ ಗೆ ನೀಡಿದೆ.

ಮಸೀದಿ ನಿರ್ಮಾಣಕ್ಕೆ ಅಯೋದ್ಯೇಯಲ್ಲೇ ಬೇರೆಡೆ ಸೂಕ್ತ ಜಾಗ ಎಂದು ಸುಪ್ರೀಂ ರಾಜ್ಯ ಸರ್ಕಾರ ಅಥವಾ ಕೇಂದ್ರ ವಕ್ಫ್ ಗೆ ಆದೇಶದಲ್ಲಿ ಹೇಳಿದೆ.

ಅಲ್ಲದೇ ನಿರ್ಮೋಶಿ ಅಖಾಡ ಸಲ್ಲಿಸಿದ ಅರ್ಜಿಯನ್ನು ಇಂದು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಸುಪ್ರೀಂ ತೀರ್ಪಿನಲ್ಲಿ ವಿವಾದಿತ ರಾಮಜನ್ಮ ಭೂಮಿ 2.77 ಎಕರೆ ಭೂಮಿಯನ್ನು ರಾಮಲಲ್ಲಾ ಪಾಲಾಗಿರುವುದು ಅಖಂಡ ಭಾರತದ ಹಿಂದೂಗಳ ಭಾವನೆಗೆ ಜಯ ಸಿಕ್ಕಂತಾಗಿದೆ.

ಆದರೆ ರಾಮಜನ್ಮ ಭೂಮಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ರಾಮಲಲ್ಲಾಗೆ ಹಕ್ಕಿಲ್ಲ ಎಂದು ಸುಪ್ರೀಂ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ.

ರಾಮಜನ್ಮ ಭೂಮಿಯಲ್ಲಿ ಮಂದಿರ ನಿರ್ಮಾಣದ ಜವಾಬ್ದಾರಿಯನ್ನು ಸುಪ್ರೀಂ ಕೇಂದ್ರ ಸರ್ಕಾರಕ್ಕೆ ವಹಿಸಿದೆ.

ಮುಂದಿನ ಮೂರು ತಿಂಗಳೊಳಗಾಗಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಒಂದು ಟ್ರಸ್ಟ್ ನ್ನು ರಚಿಸಬೇಕು ಎಂದು ಸುಪ್ರೀಂ ಕೇಂದ್ರ ಸರ್ಕಾರ ಹೇಳಿದೆ.

ರಾಮ ಮಂದಿರ ನಿರ್ಮಾಣದ ಮೇಲ್ವಿಚಾರಣೆಯನ್ನು ರಾಮಲಲ್ಲಾ ನೋಡಿಕೊಳ್ಳಬೇಕು ಎಂದು ಆದೇಶದಲ್ಲಿ ಸುಪ್ರೀಂ ಅಭಿಪ್ರಾಯಪಟ್ಟಿದೆ.

ಅಯೋಧ್ಯೆಯಲ್ಲೇ ಮಸೀದಿ ನಿರ್ಮಾಣಕ್ಕೆ ಸುನ್ನಿ ವಕ್ಫ್ ಬೋರ್ಡ್ ಗೆ 5 ಎಕರೆ ಭೂಮಿಯನ್ನು ನೀಡಬೇಕು ಎಂದು ಸುಪ್ರೀಂ ಐತಿಹಾಸಿಕ ತೀರ್ಪೀನಲ್ಲಿ ಹೇಳುವ ಮೂಲಕ ಇಸ್ಲಾಂ ಧರ್ಮದ ಭಾವನೆಗಳಿಗೂ ಗೌರವಿಸಿದೆ.

ಸುನ್ನಿ ವಕ್ಫ್ ಬೋರ್ಡ್ ನ ಪರ ವಕೀಲರಾದ ಜಿಲಾನಿ ಅವರು ಮಾತನಾಡಿ, ತೀರ್ಪಿನ ಸಂಪೂರ್ಣ ಪ್ರತಿ ಪಡೆದ ಬಳಿಕ ಮುಂದಿನ ಹೆಜ್ಜೆಯ ಬಗ್ಗೆ ನಿರ್ಧರಿಸಲಾಗುವುದು ಎಂದರು.

ಸುಪ್ರೀಂ ತೀರ್ಫಿನ ಕೆಲ ಸಂಗತಿಗಳನ್ನು ಒಪ್ಪಲು ಸಾಧ್ಯವಿಲ್ಲ. ಇದನ್ನ ನ್ಯಾಯ ಅಂತ ಸ್ವೀಕರಿಸಲು ಸಾಧ್ಯವಿಲ್ಲ. ನಮ್ಮ ಜಾಗವನ್ನು ಬೇರೆಯವರಿಗೆ ನೀಡಲಾಗಿದೆ. ತೀರ್ಪಿನ ಪ್ರತಿ ಬಂದ ನಂತರ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕೆ ಅಥವಾ ಮೇಲ್ವಿಚಾರಣಾ ಅರ್ಜಿ ಸಲ್ಲಿಸಬೇಕೆ ಎಂದು ತೀರ್ಮಾನಿಸಲಾಗುವುದು ಎಂದರು.

ಸುಪ್ರೀಂ ತೀರ್ಪಿನ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯೆ :

ಕಾಂಗ್ರೆಸ್ ವಕ್ತಾರ ರಣದೀಪ್ ಮಾತನಾಡಿ, ನಾವು ಈ ತೀರ್ಪಿಗೆ ಗೌರವಿಸುತ್ತೇವೆ. ಆದರೆ ಇದು ಯಾರಿಗೋ ಸಿಕ್ಕ ಜಯವಲ್ಲ.

ಸುಪ್ರೀಂದೇಶದಲ್ಲಿನ ಪ್ರಮುಖ ಅಂಶಗಳೇನು?

  •  ರಾಮಮಂದಿರ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್
  • ವಿವಾದಿತ ಜಮೀನು ರಾಮಲಲ್ಲಾ ಪಾಲು
  • ಮಂದಿರ ನಿರ್ಮಾಣಕ್ಕೆ ಟ್ರಸ್ಟ್ ಮೇಲ್ವಿಚಾರಣೆ.
  • ವಿವಾದಿತ ಜಾಗ ರಾಮಲಲ್ಲಾಗೆ
  • ರಾಮಲಲ್ಲಾ ಗೆ ಮಂದಿರ ನಿರ್ಮಾಣದ ಹಕ್ಕಿಲ್ಲ.
  • ವಿವಾದಿತ ಜಾಗವನ್ನು ಕೇಂದ್ರ ಸರ್ಕಾರಕ್ಕೆ ಒಪ್ಪಿಸಬೇಕು.
  • ಸುನ್ನಿ ಬೋರ್ಡ್ ಗೆ ಬೇರೆಡೆ 5 ಎಕರೆ ಭೂಮಿ
  • ಷರತ್ತು ವಿಧಿಸಿ ಹಿಂದೂಗಳಿಗೆ ಭೂಮಿ
  • ಅಯೋಧ್ಯೆಯಲ್ಲೇ ಮಸೀದಿಗೆ ಪ್ರತ್ಯೇಕ ಜಾಗ ನೀಡಲು ಆದೇಶ
  • ಮೂರು ತಿಂಗಳಳೊಳಗೆ ಟ್ರಸ್ಟ್ ರಚಿಸಬೇಕು ಎಂದು ಕೇಂದ್ರಕ್ಕೆ ಆದೇಶ.

ಮೋಹನ ಭಾಗವತ್ ಹೇಳಿಕೆ :

ಸುಪ್ರೀಂ ತೀರ್ಪನ್ನು ಸ್ವಾಗತಿಸಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡಬೇಕೆಂದು ದೇಶದ ಜನರಲ್ಲಿ ಮನವಿ ಮಾಡಿದ್ದಾರೆ. ಎಲ್ಲರೂ ಸೇರಿ ಮಂದಿರ ನಿರ್ಮಾಣ ಮಾಡೋಣ ಎಂದಿದ್ದಾರೆ. ಇದೇ ವೇಳೆ ತೀರ್ಪಿನ ಸಂಪೂರ್ಣ ವರದಿಯನ್ನು ಅದ್ಯಯನ ಮಾಡಬೇಕಿದೆ ಎಂದರು.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.
ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.