ಕೆ.ಎನ್.ಪಿ.ವಾರ್ತೆ,ಬೆಂಗಳೂರು,ನ.13;

ಕನಕ ಜಯಂತಿ ರಜೆ ಯನ್ನು ಕರ್ನಾಟಕ ಸರ್ಕಾರ ರದ್ದುಗೊಳಿಸಿಲ್ಲ. ನವೆಂಬರ್ 15ರಂದು ಸರ್ಕಾರದ ವತಿಯಿಂದ ಕನಕ ಜಯಂತಿ ಆಚರಣೆ ಮಾಡಲಾಗುತ್ತದೆ.

ಉಪ ಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ಈ ಕುರಿತು ಸ್ಪಷ್ಟನೆ ನೀಡಿದ್ದು, “ಕನಕದಾಸ ಜಯಂತಿ ಪ್ರಯುಕ್ತ ಇರುವ ರಜೆಯನ್ನು ಕರ್ನಾಟಕ ಸರ್ಕಾರ ಹಿಂಪಡೆದಿಲ್ಲ. ಆ ದಿನ ಸರ್ಕಾರಿ ರಜೆ ಇದೆ” ಎಂದು ಹೇಳಿದರು.

“ನವೆಂಬರ್ 15ರ ಶುಕ್ರವಾರ ಕನಕದಾಸ ಜಯಂತಿ ಆಚರಣೆ ಮಾಡಲಾಗುತ್ತದೆ. ರಜೆ ಬಗ್ಗೆ ಖಾಸಗಿ ಕಂಪನಿ/ಶಿಕ್ಷಣ ಸಂಸ್ಥೆಗಳು ಬೇರೆ ತೀರ್ಮಾನ ಕೈಗೊಂಡಿದ್ದರೆ ಅದು ಆಯಾ ಸಂಸ್ಥೆಯ ನಿರ್ಧಾರವಾಗಿರುತ್ತದೆ” ಎಂದರು.

ಕರ್ನಾಟಕ ಸರ್ಕಾರ ಹಲವು ಜಯಂತಿಗಳ ರಜೆಗಳನ್ನು ರದ್ದುಪಡಿಸಲು ಹೊರಟಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು. ಆದರೂ ಸರ್ಕಾರಿ ರಜೆ ದಿನಗಳನ್ನು ಕಡಿತಗೊಳಿಸಿತ್ತು. ಆದ್ದರಿಂದ, ಕನಕಜಯಂತಿ ರಜೆ ಬಗ್ಗೆ ಗೊಂದಲ ಉಂಟಾಗಿತ್ತು.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.