ಕೆ.ಎನ್.ಪಿ.ವಾರ್ತೆ,ನವದೆಹಲಿ,ಸೆ.04;

ಪಾಕಿಸ್ತಾನದ ನಾಲ್ವರು ಭಯಂಕರ ಉಗ್ರರು ಇದೀಗ ‘ಘೋಷಿತ ಉಗ್ರರ ಪಟ್ಟಿ’ ಸೇರಿದ್ದಾರೆ. ಮಸೂದ್ ಅಝರ್, ಹಫೀಜ್ ಸಯೀದ್, ದಾವೂದ್ ಇಬ್ರಾಹಿಂ ಹಾಗೂ ಝಾಕಿ-ಉರ್-ರೆಹಮಾನ್ ಲಖ್ವಿ ಹೆಸರುಗಳನ್ನು ‘ಘೋಷಿತ ಉಗ್ರರ ಪಟ್ಟಿ’ಗೆ ಸೇರ್ಪಡೆ ಮಾಡಲಾಗಿದೆ.

ಕಾನೂನು ಬಾಹಿರ ಚಟುವಟಿಕೆಗಳನ್ನು ನಿಗ್ರಹಿಸುವ ತಿದ್ದುಪಡಿ ಕಾನೂನಿನ ಅನ್ವಯ, ಈ ನಾಲ್ವರ ಹೆಸರುಗಳನ್ನು ಭಾರತ ಸರ್ಕಾರ ಸೇರ್ಪಡೆ ಮಾಡಿದೆ. ತಿದ್ದುಪಡಿ ಕಾಯ್ದೆ ಜಾರಿಯಾದ ಒಂದು ತಿಂಗಳ ಬಳಿಕ ಭಾರತ ಈ ಮಹತ್ವದ ತೀರ್ಮಾನ ಕೈಗೊಂಡಿದೆ.

ಗೆಜೆಟ್ ಅಧಿಸೂಚನೆ ಪ್ರಕಾರ, ಮೌಲಾನಾ ಮಸೂದ್ ಅಜರ್ ಅಲಿಯಾಸ್ ಮೌಲಾನಾ ಮೊಹಮ್ಮದ್ ಮಸೂದ್ ಅಜರ್ ಅಲ್ವಿ , ಜೈಷೆ- ಮೊಹಮದ್ ಸಂಘಟನೆಯ ಸಂಸ್ಥಾಪಕ ಹಾಗೂ ಮುಖಂಡನಾಗಿದ್ದಾನೆ. ಇದು ಯುಎಪಿಎ ಅಡಿಯ ಪಟ್ಟಿಯಲ್ಲಿನ ಆರನೇ ಪ್ರಮುಖ ಸಂಘಟನೆಯಾಗಿದೆ. ಹಫೀಜ್ ಮೊಹಮ್ಮದ್ ಸಯೀದ್ ಲಷ್ಕರ್ -ಇ-ತೊಯ್ಬಾ(ಎಲ್ ಇಟಿ) ಮತ್ತು ಜಮಾತ್ -ಉದ್ -ದಾವಾ (ಜೆಯುಡಿ) ನಿಷೇಧಿತ ಸಂಘಟನೆಗಳ ಸಂಸ್ಥಾಪಕನಾಗಿದ್ದಾನೆ. ಎಲ್ ಇಟಿ ಯುಎಪಿಎ ಕಾಯ್ದೆಯಡಿ 5ನೇ ಸ್ಥಾನದಲ್ಲಿದೆ.

ಮೌಲಾನಾ ಮಸೂದ್ ಅಝರ್ ಹಾಗೂ ಹಫೀಜ್ ಮುಹಮ್ಮದ್ ಸಯೀದ್ ನೇರವಾಗಿ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗದಿದ್ದರೂ, ಭಯೋತ್ಪಾದನೆಗೆ ಆರ್ಥಿಕ ಸಹಕಾರ, ತರಬೇತಿ ಹಾಗೂ ಬೆಂಬಲ ನೀಡುತ್ತಿರುವ ಹಿನ್ನೆಲೆಯಲ್ಲಿ ಅವರ ಹೆಸರುಗಳನ್ನು ಕಾಯ್ದೆಯನ್ವಯ ‘ಘೋಷಿತ ಉಗ್ರರ ಪಟ್ಟಿ’ಗೆ ಸೇರ್ಪಡೆ ಮಾಡಲಾಗಿದೆ ಎಂದು ಕೇಂದ್ರ ಗೃಹಸಚಿವಾಲಯ ಹೇಳಿದೆ.

1967ರ ಮೂಲ ಕಾನೂನಿನಲ್ಲಿ ವೈಯಕ್ತಿಕವಾಗಿ ಯಾರನ್ನೂ ಉಗ್ರರು ಎಂದು ಘೋಷಿಸಲು ಸಾಧ್ಯವಿರಲಿಲ್ಲ. ಗುಂಪು ಅಥವಾ ಸಂಘಟನೆಯನ್ನು ಮಾತ್ರ ಉಗ್ರರೆಂದು ಘೋಷಿಸಬಹುದಿತ್ತು. ಇದೀಗ ಸರ್ಕಾರ ಈ ನಾಲ್ವರನ್ನೂ ‘ವೈಯಕ್ತಿಕ ಘೋಷಿತ ಉಗ್ರ’ರು ಎಂದು ಘೋಷಿಸಿರುವುದರಿಂದ ‘ರೆಡ್ ಕಾರ್ನರ್’ ನೊಟೀಸ್ ಹೊರಡಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರರನ್ನು ಈ ಪಟ್ಟಿಯಲ್ಲಿ ಸೇರಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.