ಕೆ.ಎನ್.ಪಿ,ಗಜಲ್;

ಆತ್ಮೀಯರೇ, ಇಂದಿನ ಕೆ.ಎನ್.ಪಿ ಗಜಲ್ ವಿಭಾಗದಲ್ಲಿ ಬಸವರಾಜ ಕಾಸೆರವರ “ಏಕಾಂತದ ಆಲಿಂಗನ” ಗಜಲ್ ಅನ್ನು ಪ್ರಕಟಿಸಲಾಗಿದೆ…ಸಹೃದಯರು ಕವಿತೆ ಓದಿರಿ.. ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ಏಕಾಂತದ ಆಲಿಂಗನ

ನಾ ನಾನಾಗಲು ಬಯಸಿದ ಹೊತ್ತು ಏಕಾಂತದ ಒಲವು ದಿವ್ಯ ಆಲಿಂಗನ/
ನನ್ನ ನಾ ಕಂಡುಕೊಳ್ಳುವ ಅವಕಾಶ ಅರಿವಿನ ಆಳ ತನು ಮನ ಆ ಕ್ಷಣ//

ಅಂತರಾಳದ ಪಾತಾಳಕ್ಕಿಳಿದು ಕೊಡುತ್ತಿರುವೆ ಬಿಸಿ ಕಾವು ಹಸಿ ಹಸಿಯಾಗಿ/
ಇಳಿದಷ್ಟು ಇಷ್ಟಿಷ್ಟೆ ನನ್ನೊಳಗೆ ನಡೆದು ಹೊರ ಕೃಷಿ ಸಂತಸದ ನರ್ತನ//

ಕಷ್ಟಗಳ ಎದುರಿಸುವ ಛಾತಿ ಚಿಗಿತು ಒದಗಿದೆ ಅವಶ್ಯ ಸಂಪನ್ಮೂಲ ಔಷಧವಾಗಿ/
ಬಾಧಿಸಿದಂತೆ ಒಂಟಿತನ ಆವರಿಸಿ ನವ ಚೈತನ್ಯ ನೆಗೆದಿದೆ ನಿರಾಳವಾಗಿ ಮೈಮನ//

ಆಂತರ್ಯ ಶಕ್ತಿಯ ಶಾಂತ ಗಣಿಗಾರಿಕೆ ಕೆದಕಿ ಬೇಸರವೂ ಆಗಿದೆ ಶರಣಾಗತಿ/
ತಲ್ಲಣಗಳ ಸಂಘರ್ಷ ತವಕಗಳ ವಿಹಾರ ತಿಳಿ ಹೇಳಿ ಹುಡುಕುವೆ ಕಾರಣ//

ಮಾನಸಿಕ ಸ್ಥಿತಿ ಸಧೃಡವಾಗಿಡುವ ಸಂತೃಪ್ತಿ ಪಡೆಯುವ ಸಂಭ್ರಮ ಈ ವೈಭವ/
ಏನಿದು ಸೊಬಗು ಮೈಗೂಡಿ ಸುತ್ತಲೂ ಸಮಾನ ಆಸಕ್ತ ಹಿತ ಮಿತ ಹವಾಮಾನ//

ಹೋದದ್ದೆಲ್ಲಾವನ್ನು ಪುನಃ ಮರಳಿಸುವ ರಸ ಅನುಭವ ಬದುಕಿನ ರಾಯಭಾರತ್ವ/
ಸವಾಲುಗಳಿಗೆ ಅಣಿ ಮಾಡಿ ವಿಚಾರದೊಳು ನೀ ಧ್ಯಾನ ಸಮಾಧಾನಗಳ ಸಂಧಾನ//

ಬಸುನ ಶಾಶ್ವತ ಸಂಗಾತಿ ನೀ ಮಾತ್ರ, ಲವ್ ಯೂ ಓ ನನ್ನ ಏಕಾಂತವೇ/
ನೀಡಿರುವೆ ಅಮೂರ್ತ ಆರೈಕೆ ಮೌನದಲ್ಲಿಯೇ ನಿಸ್ವಾರ್ಥ ಭಾವಗಳ ಸಮ್ಮೇಳನ//

-ಬಸವರಾಜ ಕಾಸೆ

ಮು| ಪೋ| ದೇವಾಪೂರ
ತಾ| ಜಿ| ವಿಜಯಪುರ
ಪಿನ್ ಕೋಡ್ 586125
ಸಂಪರ್ಕ ಸಂಖ್ಯೆ 7829141150
pradeepbasu40@gmail.com

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.