ಕೆ.ಎನ್.ಪಿ,ಗಜಲ್;

ಆತ್ಮೀಯರೇ, ಇಂದಿನ ಕೆ.ಎನ್.ಪಿ ಗಜಲ್ ವಿಭಾಗದಲ್ಲಿ ಬಸವರಾಜ ಕಾಸೆರವರ “ಸದ್ದಾಗದ ಸಂತೆ” ಗಜಲ್ ಅನ್ನು ಪ್ರಕಟಿಸಲಾಗಿದೆ…ಸಹೃದಯರು ಕವಿತೆ ಓದಿರಿ.. ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ಸದ್ದಾಗದ ಸಂತೆ

ಪಕ್ಕದ ಜನತಾ ಬಜಾರ್ ಭಣಗುಡುತ್ತಿತ್ತು ಸದ್ದು ಗದ್ದಲದ ಸಂತೆಯೊಳಗೆ/
ಮನವೊಂದು ಬಿಕೋ ಎನ್ನುತ್ತಿತ್ತು ಉತ್ಸಾಹ ನೆರೆದಿದ್ದ ಸಂತಸದೊಳಗೆ//

ಎರಡು ಪದಗಳ ಒಂದೇ ತರಹದ ಅರ್ಥ ಬೇರೆ ಬೇರೆ ಭಾವ ಹುದುಗಿದ ಅಂತರಂಗ/
ಬೆಂಬಿಡದ ಒಂಟಿತನ ಬೇಸರ ಕಾಡದು ಬಯಸಿ ಒಂದಾದ ಏಕಾಂತದೊಳಗೆ//

ರೂಪಾಯಿ ಕಟ್ಟಿನ ಮೇಲೆ ದುಂಡು ಎಸೆದು ಆಟ ಪ್ರತಿ ಬಾರಿ ತಪ್ಪುವ ಗುರಿ/
ಏಕಾಗ್ರತೆಯೆ ಇಲ್ಲ ನನ್ನಲ್ಲಿ ಕಳೆದು ಹೋಗಿರುವೆ ಚಂಚಲದ ನಡುಕದೊಳಗೆ//

ಮೇಲೆ ಕೆಳಗೆ ಸುತ್ತುವ ಚಕ್ರಗಳ ಬಂಡಿ ಎಲ್ಲೂ ಹೊತ್ತು ಒಯ್ಯಲಿಲ್ಲ ನನ್ನ/
ತಲೆ ತಿರುಗಿ ಬಿದ್ದ ಅನುಭವ ಅರ್ಥ ಆಗಲಿಲ್ಲ ಅಲ್ಲಿಯ ಕಿರುಚಾಟದೊಳಗೆ//

ಭಾರವಾದ ಹೃದಯ ಹಾತೊರೆಯುತ್ತಿದೆ ಯಾವುದಕ್ಕೆ ಎನ್ನುವುದೆ ಇನ್ನೂ ಪ್ರಶ್ನೆ/
ಸದ್ದಿಲ್ಲದೆ ಹೊರ ಬಂದಾಗ ಏನೋ ಸಮಾಧಾನ ಒಂದಿಷ್ಟು ನಿರುತ್ಸಾಹದೊಳಗೆ//

-ಬಸವರಾಜ ಕಾಸೆ

ಮು| ಪೋ| ದೇವಾಪೂರ
ತಾ| ಜಿ| ವಿಜಯಪುರ
ಪಿನ್ ಕೋಡ್ 586125
ಸಂಪರ್ಕ ಸಂಖ್ಯೆ 7829141150
pradeepbasu40@gmail.com

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.