ಕೆ.ಎನ್.ಪಿ,ಗಜಲ್;

ಆತ್ಮೀಯರೇ, ಇಂದಿನ ಕೆ.ಎನ್.ಪಿ ಗಜಲ್ ವಿಭಾಗದಲ್ಲಿ ಬಸವರಾಜ ಕಾಸೆರವರ “ಅಪೂರ್ವ ಶಕ್ತಿ” ಗಜಲ್ ಅನ್ನು ಪ್ರಕಟಿಸಲಾಗಿದೆ…ಸಹೃದಯರು ಕವಿತೆ ಓದಿ, ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ, ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ಅಪೂರ್ವ ಶಕ್ತಿ

ಮನೆ ಮನಗಳ ಕದ ತಟ್ಟಿ ಕಿವಿ ಇಂಪಾಗಿ ತಂಪೆನಿಸುವುದೆ ಅದೊಂದು/
ತನ್ನೆಡೆಗೆ ಆಕರ್ಷಿಸಿ ಹಿಡಿದಿಡುವ ಅಪೂರ್ವ ಶಕ್ತಿ ಇದೆ ಕನ್ನಡಕ್ಕೊಂದು//

ಸಾವಿರಾರು ವರ್ಷಗಳ ಇತಿಹಾಸ ಇರುವ ಸೊಬಗಿದು ಅರಿತಿರುವೆ ಆಸ್ವಾದಿಸಿ/
ಪೋಷಿಸಿ ನೀರೆರೆವ ಹೃದಯ ಬಿತ್ತನೆ ಎದೆಯಲ್ಲಿ ಅಚ್ಚಾಗಬೇಕಿದೆ ಇದೊಂದು//

 

ಜಗದ ಭಾಷೆಗಳೆಲ್ಲಾ ಅಡಗಿಸಿಕೊಳ್ಳುವ ಶಕ್ತಿಯ ಭವ್ಯ ಪರಂಪರೆಯ ನುಡಿ/
ಹಳೆ ನಡು ಹೊಸಗನ್ನಡ ಅಂದಿನಿಂದ ನಿರಂತರ ಪುಟಿದೇಳುತ್ತಲಿದೆ ಎಂದೆಂದು//

ತಂದು ಹಾಕಿದರೂ ನುಸುಳಿ ಬಂದರೂ ಕೊಬ್ಬಿ ಮೆರೆದರೂ ಅಜರಾಮರ ಕನ್ನಡ/
ಮಾತಾಡುವ ಹೆಮ್ಮೆ ಮಾಡಿರುವೆ ಪುಣ್ಯ ಕೇಳಿಕೊಂಡು ಬರಬೇಕಿದೆ ಇದಕ್ಕೆಂದು//

ವಿವಿಧ ರೂಪ ವಿಶಿಷ್ಟ ಸಂಸ್ಕೃತಿ ವಿಭಿನ್ನ ಪ್ರದೇಶಗಳ ಮುಕುಟಮಣಿ ನಾಡಿದು/
ಕಲಿತು ಕಲಿಸುವ ಅಭಿಮಾನ ಪಸರಿಸಿದರೆ ಸ್ವಾಭಿಮಾನ ನಿಜವಾಗಲಿದೆ ಎಂದೆಂದೂ//

-ಬಸವರಾಜ ಕಾಸೆ

7829141150
pradeepbasu40@gmail.com

ಬಸವರಾಜ್ ಕಾಸೆ ರವರ ಗಜಲ್ ಗಳಿಗಾಗಿ ಇಲ್ಲೊಮ್ಮೆ ಕ್ಲಿಕ್ಕಿಸಿ.. 

ಕೆ.ಎನ್.ಪಿ.ಯ ಸಮಸ್ತ ಓದುಗ ಬಳಗಕ್ಕೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು..

ಕನ್ನಡ ಉಳಿಸಿ – ಕನ್ನಡ ಬೆಳಸಿ, ಕನ್ನಡವನೆ ಬಳಸಿ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.