ಕೆ.ಎನ್.ಪಿ.ವಾರ್ತೆ,ಬ್ಯಾಂಕಾಕ್,ನ.03;

ಹೂಡಿಕೆ ಮತ್ತು ಸುಲಭ ಉದ್ಯಮಕ್ಕೆ ಭಾರತಕ್ಕೆ ಬನ್ನಿ. ಕ್ರಿಯಾತ್ಮಕವಾಗಿ ಉದ್ಯಮ ಆರಂಭಿಸಲು ಭಾರತಕ್ಕೆ ಬನ್ನಿ. ಉತ್ತಮ ಪ್ರವಾಸಿ ಸ್ಥಳಗಳು ಮತ್ತು ಉತ್ತಮ ಆತಿಥ್ಯ ಭಾರತದಲ್ಲಿ ಸಿಗುತ್ತದೆ. ಭಾರತ ನಿಮಗೆ ಮುಕ್ತ ಬಾಹುಗಳಿಂದ ಅಪ್ಪಿಕೊಳ್ಳಲು ಕಾಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅವರು ಬ್ಯಾಂಕಾಕ್ ನಲ್ಲಿ ಆದಿತ್ಯ ಬಿರ್ಲಾ ಗ್ರೂಪ್ ನ ಸುವರ್ಣ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತವು ಹೂಡಿಕೆದಾರರನ್ನು ಮುಕ್ತ ಕೈಗಳಿಂದ ಸ್ವಾಗತಿಸುತ್ತದೆ. ನಮ್ಮ ಸರ್ಕಾರದ ಉಪಕ್ರಮಗಳಾದ ಸ್ವಚ್ಛ ಭಾರತ್ ಮಿಷನ್, ಸ್ಮಾರ್ಟ್ ಸಿಟಿ ಮುಂತಾದವು ಉತ್ತಮ ಪಾಲುದಾರಿಕೆ ಅವಕಾಶಗಳನ್ನು ನೀಡಿವೆ.

ತೆರಿಗೆ ಕ್ಷೇತ್ರದಲ್ಲಿ ಭಾರತ ಸರ್ಕಾರ ಅಭೂತಪೂರ್ವ ಕೆಲಸ ಮಾಡಿದೆ. ಜನಸ್ನೇಹಿ ತೆರಿಗೆ ವಿಧಾನ ಹೊಂದಿರುವ ಉತ್ತಮ ದೇಶಗಳಲ್ಲಿ ಭಾರತ ಒಂದಾಗಿದೆ. ಇಂದಿನ ಭಾರತದಲ್ಲಿ, ಕಠಿಣ ಪರಿಶ್ರಮದ ತೆರಿಗೆ ಪಾವತಿದಾರರ ಹಿತಾಸಕ್ತಿಯನ್ನು ಕಾಪಾಡುತ್ತೇವೆ. ತೆರಿಗೆ ವಿಧಾನದಲ್ಲಿ ನಾವು ಮಹತ್ವದ ಕೆಲಸಗಳನ್ನು ಮಾಡುತ್ತಿದ್ದೇವೆ.

ಭಾರತವು ಈಗ ಹೂಡಿಕೆಯಲ್ಲಿ ವಿಶ್ವದ ಅತ್ಯಂತ ಆಕರ್ಷಕ ಆರ್ಥಿಕತೆಯ ದೇಶವಾಗಿದೆ. ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲು ಭಾರತ ಈಗ ಮತ್ತೊಂದು ಕನಸಿನ ಬೆನ್ನತ್ತಿ ಹೋಗಿದೆ. 2014 ರಲ್ಲಿ ನನ್ನ ಸರ್ಕಾರ ಅಧಿಕಾರ ವಹಿಸಿಕೊಂಡಾಗ, ಭಾರತದ ಜಿಡಿಪಿ ಸುಮಾರು 2 ಟ್ರಿಲಿಯನ್ ಡಾಲರ್ ಆಗಿತ್ತು. ಇದಕ್ಕೆ ಮೊದಲು 65 ವರ್ಷಗಳಲ್ಲಿ, 2 ಟ್ರಿಲಿಯನ್. ಆದರೆ ಕೇವಲ 5 ವರ್ಷಗಳಲ್ಲಿ, ನಾವು ಅದನ್ನು ಸುಮಾರು 3 ಟ್ರಿಲಿಯನ್ ಡಾಲರ್‌ಗಳಿಗೆ ಹೆಚ್ಚಿಸಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.