ಕೆ.ಎನ್.ಪಿ.ವಾರ್ತೆ,ಹಾವೇರಿ,ಡಿ.26;

ಇಷ್ಟಲಿಂಗ ಪೂಜೆಯಿಂದ ಮನುಷ್ಯನ ಸರ್ವ ಪಾಪನಾಶವಾಗುತ್ತದೆ ಎಂದು ಕೇದಾರಪೀಠದ ಜಗದ್ಗುರು ಭೀಮಾಶಂಕರ ಲಿಂಗಶಿವಾಚಾರ್ಯರು ಹೇಳಿದರು.

ತಾಲೂಕಿನ ನೆಗಳೂರ ಗ್ರಾಮದ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಆವರಣದಲ್ಲಿ ಬುಧವಾರ ಸಂಗೀತಯುಕ್ತ ಇಷ್ಟಲಿಂಗ ಪೂಜೆ ನೇರವೇರಿಸಿ ಆರ್ಶೀವಚನ ನೀಡಿದರು.

ಪ್ರತಿಯೊಬ್ಬ ಮನುಷ್ಯನು ಕೂಡ ಮೂರು ರತ್ನ ಗಳನ್ನು ಹೊಂದಿರಬೇಕು. ಭಸ್ಮ, ಇಷ್ಟಲಿಂಗ, ರುದ್ರಾಕ್ಷಿಗಳೆಂಬ ತ್ರಿರತ್ನಗಳನ್ನು ಸದಾ ಧರಿಸಿರಲೇಬೇಕು ಎಂದರು.

ನೆಗಳೂರ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪೂಜಾನುಷ್ಠಾನಗಳಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ. ಭಗವಂತನಿಂದ ಪಡೆದ ಜನ್ಮಕ್ಕೆ ಪೂಜೆಯಿಂದ ಆತನಿಗೆ ಬಾಡಿಗೆ ಕಟ್ಟಬೇಕು ಎಂದರು.

ಮದ್ದದರಕಿ ಗಚ್ಚಿನ ಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಸಮಾರಂಭದಲ್ಲಿ ಚಂದ್ರಶೇಖರ ತೋಟಗೇರ, ಸಿ.ಬಿ ಕುರುವತ್ತಿಗೌಡ್ರ, ಗದಿಗೆಯ್ಯಸ್ವಾಮಿ ಹಿರೇಮಠ, ಗುರುರಾಜ್ ಕಲಕೋಟಿ ಕುಟುಂಬಸ್ಥರು, ಬನ್ನಿಕೊಪ್ಪದ ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ, ಕಣ್ವಕಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಕೊಡಲ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಹೆರೂರಿನ ಗುಬ್ಬಿ ನಂಜುಂಡ ಪಂಡಿತರಾಧ್ಯಸ್ವಾಮೀಜಿ, ಹಾವೇರಿ ಗುರುಪಾದೇವರಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಕುರುವತ್ತಿಯ ಸಿದ್ದನಂದಿಶ್ವರ ಸ್ವಾಮೀಜಿ ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ ಸಹಸ್ರಾರು ಸಂಖ್ಯೆಯಲ್ಲಿ ಸದ್ಭಕ್ತರು ಜಗದ್ಗುರುಗಳ ಇಷ್ಟಲಿಂಗ ಪೂಜೆ ಯಲ್ಲಿ ಪಾಲ್ಗೊಂಡು ಧನ್ಯರಾದರು.

ಶಿವಯೋಗಿ ಕಂಬಾಳಿಮಠ ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ನಂತರ ಗ್ರಾಮದ ಪರವಾಗಿ ಜಗದ್ಗುರುಗಳ ಗೌರವಸಲ್ಲಿಸಿ ಜಗದ್ಗುರುಗಳನ್ನು  ಬೀಳ್ಕೊಡಲಾಯಿತು. 

ವರದಿ : ಗುರುಶಾಂತಸ್ವಾಮಿ ಹಿರೇಮಠ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.