ಕೆ.ಎನ್.ಪಿ.ವಾರ್ತೆ,ಜಗಳೂರು,ಮೇ.06;

ಇದೇ ತಿಂಗಳು ಮೇ ಏಳನೇ ತಾರೀಖಿನಿಂದ 11 ರ ವರೆಗೆ ಭರಣಿ ಮಳೆಯೂ ದೇಶದ ವಿವಿಧ ಭಾಗಗಳಲ್ಲಿ ಮತ್ತು ಕರ್ನಾಟಕದಲ್ಲಿ ರುದ್ರತಾಂಡವ ಮಾಡುತ್ತದೆ ಎಂದು ಭುಜಂಗಮಠದ ಶಿವಮೂರ್ತಿ ಶಾಸ್ತ್ರಿಗಳು ಭವಿಷ್ಯ ನುಡಿದಿದ್ದಾರೆ.

ಭಾರತ ದೇಶದ ಪೂರ್ವ ಉತ್ತರ ಮತ್ತು ದಕ್ಷಿಣ ದಿಕ್ಕಿನಿಂದ ಗುಡುಗು-ಸಿಡಿಲಿನ ಆರ್ಭಟ ಕೇಳಿ ಬರುತ್ತದೆ. ಜೊತೆಗೆ ಭೂಕಂಪ ಅಗ್ನಿ ಅನಾಹುತ ಜಲಪ್ರಳಯ ದಂತಹ ಘಟನೆಗಳು ಕಂಡುಕೇಳರಿಯದ ರೀತಿಯಲ್ಲಿ ಜರುಗುತ್ತದೆ, ಪರಿಣಾಮ ಕಾಡಿನ ಪ್ರಾಣಿಗಳು ಬರಗಾಲದಿಂದ ಎಷ್ಟು ಕಷ್ಟ ಅನುಭವಿಸಿದವೊ ಅಷ್ಟೇ ಕಷ್ಟವನ್ನು ಈ ಭರಣಿ ಮಳೆಯ ಅನಾಹುತದಿಂದ ಅನುಭವಿಸುವಂತಾಗುತ್ತದೆ.

ಕಾಡು ಪ್ರಾಣಿಗಳ ಚೀರಾಟ ಮನ ಕಲಕುವಂತೆ ಇರುತ್ತದೆ, ಮಾನವನ ಅಸಹಾಯಕತೆ ಆ ಪರಮಾತ್ಮನೇ ಸಹಾಯಕ್ಕೆ ಬರಬೇಕು ಅನ್ನುವ ರೀತಿಯಲ್ಲಿ ಇರುತ್ತದೆ .ಭೂಕುಸಿತ ಜಲಪ್ರಳಯದ ಪ್ರಳಯದಂತಹ ಅನಾಹುತಗಳಿಂದ ತಪ್ಪಿಸಿಕೊಳ್ಳಲು ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಆದರೆ ರೈತಾಪಿ ವರ್ಗದವರು, ತೋಟದ ಮಾಲೀಕರು, ಹೇಗಾದರೂ ಸರಿಯೇ ಮಳೆ ಭೂಮಿಗೆ ಬಂದರೆ ಸಾಕು ಅನ್ನುವ ರೀತಿಯಲ್ಲಿದ್ದಾರೆ. ತೋಟಗಳಿಗೆ ಟ್ಯಾಂಕರ್ ಗಳಿಂದ ನೀರು ಸರಬರಾಜು ಮಾಡುವ ರೈತರು ಮಳೆಯನ್ನೇ ಕಾಯುತ್ತಿದ್ದಾರೆ. ಬಿಸಿಲಿನ ಬೇಗೆ ಎಷ್ಟಿದೆ ಎಂದರೆ, ರೈತ ಮಳೆ ಮೋಡ ಆಗಿರಬಹುದೇ ಎಂದು ತಲೆಯೆತ್ತಿ ಆಕಾಶ ನೋಡಲು ಆಗದಂತಹ ಬಿಸಿಲಿನ ಝಳ ಅಷ್ಟಿದೆ.

ಏನೇ ಅನಾಹುತವಾದರೂ ಸಹಿಸಿಕೊಳ್ಳುವ ಮಟ್ಟಕ್ಕೆ ಬಂದಿದ್ದಾನೆ. ಹೇಗಾದರೂ ಸರಿಯೇ ಭರಣಿ ಮಳೆಯೂ ಧರಣಿಯನ್ನು ಸೇರಲಿ, ಅಂತರ್ಜಲ ಹೆಚ್ಚಾಗಲಿ, ಒಣಗಿದ ಬಾವಿಗಳಲ್ಲಿ ನೀರು ಬರುವಂತಾಗಲಿ, ಜನ ಜಾನುವಾರುಗಳು ಈ ಬರದ ಸಂಕಷ್ಟದಿಂದ ಪಾರಾಗುವಂತಾಗಲಿ ಎಂದು ಆಶಿಸೋಣ, ಈ ಹಿಂದೆಯೂ ಭುಜಂಗ ಮಠದ ಶ್ರೀ ಶಿವಮೂರ್ತಿ ಶಾಸ್ತ್ರಿಗಳ ಮಳೆ ಭವಿಷ್ಯ ನಿಜವಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ವರದಿ : ವೇದಮೂರ್ತಿ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.