ಕೆ.ಎನ್.ಪಿ.ವಾರ್ತೆ,ಮುಂಡರಗಿ,ನ.06;

ವೃತ್ತಿಯಲ್ಲಿ ಕ್ಷೌರಿಕ, ಪ್ರವೃತ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ, ಧಾರ್ಮಿಕ ಸೇವೆ ಜೊತೆಗೆ ಸಾಮಾಜಿಕ ಕಳಕಳಿಯ ಸೇವೆಯ ಹಾದಿಯಲ್ಲಿ ದೇವು ಹಡಪದ ಗುರುತಿಸಿಕೊಂಡಿದ್ದಾರೆ.

64ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಹಾವೇರಿ ಉತ್ತರ ಕರ್ನಾಟಕ ಕಲಾವಿದರ ಸಂಘವು ದೇವು ಹಡಪದರ ಸಾಮಾಜಿಕ ಸೇವೆಯನ್ನು ಗುರುತಿಸಿ ಸೇವಾಕಿರಣ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ದೇವು ಹಡಪದ ತಿಪ್ಪಾಪುರ ಗ್ರಾಮದ ಕೃಷ್ಣಪ್ಪ ಪಾರ್ವತಮ್ಮಳ ಮೂರನೇ ಮಗ, ಇವರು ಪ್ರೌಢಶಿಕ್ಷಣ ಮುಗಿಸಿ ಬಡತನದ ಕಾರಣ ಶಿಕ್ಷಣ ಮೊಟುಕುಗೊಳಿಸಿದರು.

ಕುಲಕಸಬು ಆದ ಕ್ಷೌರಿಕ ವೃತ್ತಿಯ ಜೊತೆಗೆ ಸಾಮಾಜಿವಾಗಿ ನಿಸ್ವಾರ್ಥ ಸೇವಾ ಮನೋಭಾವದಿಂದ ಹರಿಜನ ಕೇರಿ ಜನರಿಗರ ಕ್ಷೌರದ ಸೇವೆ ಮಾಡಿ, ಅಂಧ ಮತ್ತು ಅನಾಥ ಮಕ್ಕಳಿಗೆ ಹಾಗೂ ಮಧ್ಯವರ್ಜನ ಶಿಬಿರಾರ್ಥಿಗಳಿಗೆ ಉಚಿತ ಕ್ಷೌರದ ಸೇವೆ, ಬಡ ಮಕ್ಕಳಿಗೆ ಪಠ್ಯ ಪುಸ್ತಕ ವಿತರಣೆ, ಶಾಲೆಗಳಲ್ಲಿ ವಚನಾಮೃತ ಕಾರ್ಯಕ್ರಮಗಳನ್ನು ದೇವು ಹಡಪದ ನೀಡಿದ್ದಾರೆ.

ಸುಮಾರು 19 ಬಾರಿ ಸ್ವತಃ ರಕ್ತದಾನ ಮಾಡುವುದರ ಜೊತೆಗೆ ಯುವಕರಲ್ಲಿ ರಕ್ತದಾನದ ಬಗ್ಗೆ ಅರಿವು ಮೂಡಿಸುವುದು, ಇವರದೇ ಆದ ಕಲ್ಪವೃಕ್ಷ ವಿವಿಧೋದ್ದೇಶ ಸೇವಾ ಫೌಂಡೇಷನ್ ಸಹಯೋಗದಲ್ಲಿ ಸಾಮಾಜಿಕ ಕಾರ್ಯಕ್ರಮದ ಜೊತೆಗೆ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವುದರ ಜೊತೆಗೆ ರೈತಪರ, ಕನ್ನಡ ಪರ, ನಾಡ ನುಡಿಯ ಕಾಳಜಿಯಿಂದ ಹೋರಾಟಗಾರರ ಜೊತೆ ಬೆರತು ಗುರುತಿಸಿಕೊಂಡು, ಬೀಡನಾಳ ಗ್ರಾಮ ಪಂಚಾಯತಿ ಸದಸ್ಯರಾಗಿ ಬಯಲು ಶೌಚಮುಕ್ತ ಗ್ರಾಮವನ್ನಾಗಿ ಮಾಡಿದ್ದಾರೆ. ಸಾಮಾಜಿಕ ಸೇರಿದಂತೆ ಇನ್ನೂ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಇವರ ಸೇವೆಯನ್ನು ಗುರುತಿಸಿ ಹತ್ತಾರು ಸಂಘ ಸಂಸ್ಥೆಗಳು, ಮಠ ಮಾನ್ಯಗಳಿಂದ ಹಲವು ಪ್ರಶಸ್ತಿ ಪುರಸ್ಕಾರಗಳು ಮತ್ತು ಸನ್ಮಾನಗಳು ಲಭಿಸಿವೆ.
ಯುವ ಸ್ಫೂರ್ತಿ ಚೇತನ, ಚಾಲುಕ್ಯ ವಿಕ್ರಮಾದಿತ್ಯ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಈ ವರ್ಷ 64ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ 2019ರಲ್ಲಿ ಉತ್ತರ ಕರ್ನಾಟಕ ಕಲಾವಿದರ ಸಂಘ ಹಾವೇರಿ, ಗದಗ ಜಿಲ್ಲೆಯ ಮೂರು ಜನರನ್ನು ಗುರುತಿಸಿ ಅದರಲ್ಲಿ ದೇವು ಹಡಪದರ ಸಾಮಾಜಿಕ ಸೇವೆಗೆ ಸೇವಾಕಿರಣ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

ಕಲ್ಪವೃಕ್ಷ ವಿವಿಧೋದ್ದೇಶ ಸೇವಾ ಫೌಂಡೇಷನ್ ಪದಾಧಿಕಾರಿಗಳು ಮತ್ತು ಸಂಬಂಧಿಕರು ಮತ್ತು ಗೆಳೆಯರ ಬಳಗ, ಹಾಗೂ ಅಪ್ಪಣ್ಣ ಯುವಕ ಸಂಘ, ಹಡಪದ ಸಮಾಜದ ಬಂಧುಗಳು ಹಡಪದರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಮುಂದಿನ ದಿನಗಳಲ್ಲಿ ರಾಜ್ಯ ರಕ್ತಧಾನಿಗಳ ಸಂಘ ಕಟ್ಟಿ ವಿಶೇಷವಾಗಿ ರಕ್ತದಾನ ಸೇವೆ ಮಾಡಲು ಚಿಂತನೆ ಮಾಡಿದ್ದೇನೆ, ಎಲ್ಲರ ಸಹಕಾರ ಸೇವೆ ಬೇಕಾಗಿದೆ | ದೇವು ಹಡಪದ

ವರದಿ : ಕೋಗಳಿ ಶೇಖರ್

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.