ಕೆ.ಎನ್.ಪಿ.ವಾರ್ತೆ,ಗಂಗಾವತಿ,ಜೂ.05;
ದೇವದಾಸಿ ಹೋರಾಟಗಾರ್ತಿ ಕಾ|| ಮಾಳಮ್ಮನವರನ್ನು ಬಂಧಿಸಿರುವುದು ಖಂಡನೀಯ ಎಂದು ಬಸವರಾಜ ಸುಳೇಕಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಂಪ್ಲಿ ತಾಲೂಕು ಗೋನಾಳ ಗ್ರಾಮದಲ್ಲಿ ದಲಿತ ಯುವಕನ ಕೈ ಕತ್ತರಿಸಿದ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕೆಂದು ಒತ್ತಾಯಿಸಿ ಶಾಂತಿಯುತ ಪಾದಯಾತ್ರೆ ನಡೆಸಲು ಮುಂದಾಗಿದ್ದ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯಾಧ್ಯಕ್ಷರಾದ ಕಾ|| ಬಿ. ಮಾಳಮ್ಮನವರನ್ನು ಮತ್ತು ಇನ್ನಿತರ ಮುಖಂಡರನ್ನು ಬಂಧಿಸಿರುವುದು ಖಂಡನೀಯ ಎಂದು ಸಿ.ಪಿ.ಐ.ಎಂ.ಎಲ್ ಲಿಬರೇಷನ್ ಪಕ್ಷದ ಕೊಪ್ಪಳ ಜಿಲ್ಲಾ ಕಾರ್ಯದರ್ಶಿ ಬಸವರಾಜ ಸುಳೇಕಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಂಗಾವತಿಯ ಸಿ.ಪಿ.ಐ.ಎಂ.ಎಲ್ ಕಾರ್ಯಾಲಯ ಕ್ರಾಂತಿಕೇಂದ್ರದಲ್ಲಿ ಕಾ|| ಭಾರಧ್ವಾಜ್, ಕಾ|| ಕೆಂಚಪ್ಪ, ಕಾ|| ರಮೇಶ, ಕಾ|| ಬಸವರಾಜ, ಕಾ|| ಪರಶುರಾಮ ರವರು ಸಭೆ ಸೇರಿ ಕಾ|| ಮಾಳಮ್ಮರವರ ಬಂಧನ ಖಂಡಿಸಿದ್ದು, ಸಿ.ಪಿ.ಐ.ಎಂ.ಎಲ್ ಪಕ್ಷದಿಂದ ಕಂಪ್ಲಿ ತಾಲೂಕ ಗೋನಾಳ ಗ್ರಾಮಕ್ಕೆ ಸತ್ಯ ಶೋಧನಾ ತಂಡ ಕಳುಹಿಸಿ ವರದಿ ತರಿಸಿಕೊಂಡು, ದಾಳಿಗೊಳಗಾದ ದಲಿತ ಯುವಕನ ಬೆಂಬಲಕ್ಕೆ ನಿಲ್ಲಲು, ಘಟನೆಯನ್ನು ಖಂಡಿಸಿ ರಾಜ್ಯಮಟ್ಟದ ಹೋರಾಟ ಮಾಡಲು ತೀರ್ಮಾನಿಸಲಾಯಿತು.
ನೀವು ಕೂಡ ಬರೆಯಬಹುದು :
ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.
9513326661
ಈ-ವಿಳಾಸ : karnatakanewsportal@gmail.com
ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.
- ಕೆ.ಎನ್.ಪಿ.ಫೇಸ್ಬುಕ್ ಅಕೌಂಟ್ ಗಾಗಿ ಈ ಗುಂಡಿ ಒತ್ತಿರಿ
- ಕೆ.ಎನ್.ಪಿ.ಯುಟ್ಯೂಬ್ ಚಾನಲ್ ಗಾಗಿ ಈ ಗುಂಡಿ ಒತ್ತಿರಿ
- ಕೆ.ಎನ್.ಪಿ.ಆ್ಯಪ್ ಗಾಗಿ ಈ ಗುಂಡಿ ಒತ್ತಿರಿ