ಕೆ.ಎನ್.ಪಿ.ವಾರ್ತೆ,ಕೊಪ್ಪಳ,ಅ.29;

ಕೊಪ್ಪಳ ತಾಲೂಕಿನ ಹೊಸಶಿವಪುರ ಗ್ರಾಮದಲ್ಲಿ ಮಂಗಳವಾರ ದೀಪಾವಳಿ ಪ್ರಯುಕ್ತ ವಲಯಮಟ್ಟದ ಕಬಡ್ಡಿ ಪಂದ್ಯಾವಳಿ ನಡೆಯಿತು. ಈ ಪಂದ್ಯದಲ್ಲಿ ಒಟ್ಟು 18 ತಂಡಗಳು ಭಾಗವಹಿಸಿದ್ದವು.

ಫೈನಲ್ ಪಂದ್ಯದಲ್ಲಿ ಅಗಳಕೇರ ವಿರುದ್ಧ ಶಿವಪುರ ಅಗಳಕೇರ ತಂಡ 19 ಅಂಕಗಳಿಂದ ರೋಚಕ ಜಯಗಳಿಸಿತು. ಮೊದಲ ಬಹುಮಾನ 5555 ರೂಪಾಯಿ, ದ್ವಿತೀಯ 3333 ರೂಪಾಯಿ ಶಿವಪುರ, 1111 ರೂಪಾಯಿ ತೃತೀಯ ಬಹುಮಾನವನ್ನು ಬಂಡಿಹರ್ಲಾಪುರ ಪಡೆಯಿತು.

ರವಿಂದ್ರ (ನಾನಿ ಬಾಬು) ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್ ಚನ್ನದಾಸರ, ಮಾಜಿ ಅಧ್ಯಕ್ಷ ಮಂಜುನಾಥ, ಯುವಮುಖಂಡರಾದ ಹನುಮೇಶ, ಶರಣಪ್ಪ ಉಪ್ಪಾರ, ನಿರ್ಣಾಯಕರಾಗಿ ನಿವೃತ್ತ ಶಿಕ್ಷಕ ಬೆಳ್ಳೆಪ್ಪ ಕಂಪಸಾಗರ, ಶಿವಕುಮಾರ್, ಗೋಪಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.