ಕೆ.ಎನ್.ಪಿ.ವಾರ್ತೆ,ನವದೆಹಲಿ,ಡಿ.31;

ಆಧಾರ್‌ ಸಂಖ್ಯೆ ಜೊತೆ ಪ್ಯಾನ್‌ ಕಾರ್ಡ್ ಅನ್ನು ಜೋಡಣೆ ಮಾಡುವ ಗಡುವನ್ನು ಕೇಂದ್ರ ಸರ್ಕಾರ ಮತ್ತೆ ವಿಸ್ತರಣೆ ಮಾಡಿದ್ದು, ಈಗ ಗಡುವನ್ನು ಡಿಸೆಂಬರ್‌ 31ರಿಂದ ಮಾರ್ಚ್ ತಿಂಗಳಿಗೆ ವಿಸ್ತರಣೆ ಮಾಡಿದೆ.

ಈ ಮೊದಲು ಆದಾಯ ತೆರಿಗೆ ಇಲಾಖೆಯು ಮಾಧ್ಯಮಗಳಿಗೆ ನೀಡಿದ್ದ ಜಾಹೀರಾತಿನಲ್ಲಿ ಡಿಸೆಂಬರ್‌ 31ರೊಳಗೆ ಆಧಾರ್-ಪ್ಯಾನ್‌ ಲಿಂಕ್‌ ಮಾಡಲು ಸೂಚಿಸಲಾಗಿತ್ತು.

ಇದೀಗ ಈ ಗಡುವನ್ನು ಡಿಸೆಂಬರ್‌ 31ರಿಂದ ಮಾರ್ಚ್ ತಿಂಗಳವರೆಗೆ ವಿಸ್ತರಿಸಲಾಗಿದೆ. ಈ ಸಂಬಂಧ ನಿನ್ನೆ ನಡೆದ ಹಣಕಾಸು ಸಚಿವಾಲಯದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಆಧಾರ್‌ ಜೊತೆ ಪ್ಯಾನ್‌ ಜೋಡಣೆ ಮಾಡುವ ತನಕ ತೆರಿಗೆ, ಬ್ಯಾಂಕಿಂಗ್‌, ಹಣಕಾಸು ವ್ಯವಹಾರಗಳಿಗೆ ತೊಡಕಾಗುವ ಅವಕಾಶಗಳಿವೆ. ಈ ಮೊದಲು ಪ್ಯಾನ್‌-ಆಧಾರ್‌ ಜೋಡಣೆಗೆ 2019ರ ಡಿಸೆಂಬರ್ 31 ಕಡೆಯ ದಿನವಾಗಿತ್ತು.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.