ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಡಿ.17;

ನಿಟ್ಟೂರು ಬಜ್ಜಿ ಹನುಮಂತಪ್ಪ ಚಾರಿಟಬಲ್ ಟ್ರಸ್ಟ್, ದಾವಣಗೆರೆ ವತಿಯಿಂದ ಡಿ.22 ರಂದು ಸಂಜೆ 6 ಗಂಟೆಗೆ ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಿವಯೋಗಿ ಮಂದಿರದಲ್ಲಿ ಕವಿ ಮಹಾಂತೇಶ್ ಬಿ ನಿಟ್ಟೂರ್ ಅವರ “ಹಾದಿಯ ಹಂಗು” ಚುಟುಕು ( ಮುಕ್ತಕ ) ಕವನ ಸಂಕಲನ ಲೋಕಾರ್ಪಣೆ ನಡೆಯಲಿದೆ.

ನಿವೃತ್ತ ಪ್ರಾಧ್ಯಾಪಕರಾದ ಹರಪನಹಳ್ಳಿ ಪ್ರೊ. ತಿಮ್ಮಪ್ಪನವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಕ.ಸಾ.ಪ. ದಾವಣಗೆರೆ ಜಿಲ್ಲಾಧ್ಯಕ್ಷರಾದ ಡಾ. ಹೆಚ್.ಎಸ್ ಮಂಜುನಾಥ್ ಕುರ್ಕಿ ಉದ್ಘಾಟಿಸುವರು.

ಖ್ಯಾತ ಸಾಹಿತಿ ಹಾಗೂ ವಿಮರ್ಶಕರಾದ ಡಾ. ಲೋಕೇಶ್ ಅಗಸನಕಟ್ಟೆ ಕೃತಿ ಲೋಕಾರ್ಪಣೆ ಮಾಡುವರು. ರಾಣೆಬೆನ್ನೂರು ಜಿ.ಎಫ್.ಜಿ.ಸಿ ಕಾಲೇಜಿನ ಉಪನ್ಯಾಸಕರಾದ ಡಾ. ಹೊನ್ನಪ್ಪ ಹೊನ್ನಪ್ಪನವರ ಕೃತಿ ಅವಲೋಕನ ಮಾಡುವರು.

ಮುಖ್ಯ ಅತಿಥಿಗಳಾಗಿ ದಾವಣಗೆರೆ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜಿ.ಸಿ ನಿರಂಜನ್‌ರವರು, ಜನಮಿಡಿತ ದಿನಪತ್ರಿಕೆಯ ಸಂಪಾದಕರಾದ ಜಿ.ಎಂ.ಆರ್ ಆರಾಧ್ಯ ಹಾಗೂ ಸಾಹಿತಿ ಹರಪನಹಳ್ಳಿಯ ಇಸ್ಮಾಯಿಲ್ ಎಲಿಗಾರ್ ಭಾಗವಹಿಸುವರು.

ಕೃತಿ ಕರ್ತೃ ಹಿರೇಕೋಗಲೂರು ಎಸ್.ಟಿ.ಜೆ ಸರ್ಕಾರಿ ಪ. ಪೂ. ಕಾಲೇಜಿನ ಉಪನ್ಯಾಸಕರಾದ ಮಹಾಂತೇಶ್ ಬಿ ನಿಟ್ಟೂರ್, ಕವಿನುಡಿಯಾಡುವರು.

ಕಾವ್ಯ ಗಾಯನ :

ಕವಿ ಮಹಾಂತೇಶ್ ಬಿ ನಿಟ್ಟೂರ್ ಅವರ ಕವನಗಳಿಗೆ ರಾಗ ಸಂಯೋಜನೆ ಮಾಡಿರುವ ದಾವಣಗೆರೆ ವಾಯ್ಸ್ ಪುರಸ್ಕೃತೆ ಶ್ರೀಮತಿ ಸಂಗೀತ ರಾಘವೇಂದ್ರ, ಇಪ್ಟಾ ಕಲಾವಿದ ಐರಣಿ ಚಂದ್ರು, ಶ್ರೀಮತಿ ಉಮಾದೇವಿ ಹಾಗೂ ಯುವ ಗಾಯಕ ಆರ್ ಪ್ರಶಾಂತ್ ಅವರು ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಹಾಗೂ ನಂತರ ಕಾವ್ಯ ಗಾಯನ ಮಾಡಲಿದ್ದಾರೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.