ಕೆ.ಎನ್.ಪಿ.ವಾರ್ತೆ,ಗಂಗಾವತಿ,ಅ.20;

ಕನ್ನಡದ ಜನಪದ ಸಾಹಿತ್ಯ ಬಹುದೊಡ್ಡ ಸಂಸ್ಕೃತಿಯಾಗಿದೆ. ಇದು ಜನರ ಬಾಯಿಂದ ಬಾಯಿಗೆ ಬೆಳೆದು ಬಂದ ಜೀವಂತ ಕಲೆಯಾಗಿದೆ. ಆದರೆ ಇಂದು ಚಲನಚಿತ್ರ ಗೀತೆಗಳ ಹುಚ್ಚು ಬರಾಟೆಯಲ್ಲಿ ಜಾನಪದ ಸಾಹಿತ್ಯ ಬರಡಾಗುತ್ತಿರುವುದು ವಿಷಾಧನೀಯ ಸಂಗತಿಯಾಗಿದೆ ಎಂದು ಶ್ರೀ ಕ್ಷೇತ್ರ ನವಲಿ ವೀರಭದ್ರೇಶ್ವರ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಅಧ್ಯಕ್ಷರಾದ ಶಿವಯ್ಯ ಸ್ವಾಮಿ ನವಲಿ ಕಳವಳ ವ್ಯಕ್ತಪಡಿಸಿದರು.

ಸಮೀಪದ ಹಣವಾಳ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಹಾಗೂ ಸ್ನೇಹ ಜ್ಯೋತಿ ಗ್ರಾಮೀಣಾಭಿವೃದ್ದಿ ಸಂಸ್ಥೆ ಗಂಗಾವತಿ ಇವರ ಸಂಯುಕ್ತಾಶ್ರಯದಲ್ಲಿ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಅ.15ರಂದು ನಡೆದ ಜನಪದ ನೃತ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಮ್ಮ ರೈತರ ತ್ಯಾಗ ಜೀವನ, ಹಳ್ಳಿ ಸೊಗಡು ಮತ್ತು ಸ್ಥಳೀಯ ಮಹಾ ಪುರುಷರ ಶೌರ್ಯ ಸಾಹಸ ಹಾಗೂ ಶರಣರ ಜೀವನ ಚರಿತೆಗಳನ್ನ ಜನಪದಗಳು ತಿಳಿ ಹೇಳುವಲ್ಲಿ ಮಹತ್ತರ ಪಾತ್ರವಹಿಸುತ್ತವೆ. ಇಂದಿನ ಮಕ್ಕಳು ಹಾಗೂ ಯುವ ಜನತೆ ಚಲನಚಿತ್ರಗೀತೆಗಳ ಬರಾಟೆಯಲ್ಲಿ ಜನಪದವನ್ನ ಮರೆಯುತ್ತಿರುವದು ತುಂಬಾ ಖೇದಕರವಾಗಿದ್ದು ಜನಪದವನ್ನ ಉಳಿಸಿ ಬೆಳೆಸಲು ನಾವು ನೀವೆಲ್ಲ ಕೈಜೋಡಿಸಬೇಕಾಗಿದೆ ಎಂದರು.

ರಾಜ್ಯ ಯುವ ಜನಪದ ಕಲಾವಿದರಾದ ಸುಖಮುನಿ ಹಿರೇಮನಿ, ಪ್ರಕಾಶ ಗೌಡ ಪಾಟೀಲ್ ರವರು ಪ್ರಸ್ತುತಪಡಿಸಿದ ಜನಪದ ನೃತ್ಯ ಹಾಗೂ ಹಾಡುಗಳು, ಯುವ ಕಲಾಪ್ರತಿಭೆ ಶ್ಯಾಮಣ್ಣ ಭೋವಿ ಮರಕುಂಬಿ ಯುವಕನ ಕೋಲಾಟ ನೃತ್ಯ ಹಾಗೂ ಆಹಾ ಸಂಗೀತ ಬಳಗದವರ ಗೀಗೀಪದಗಳು ಊರಿನ ಜನರ ಮೆಚ್ಚುಗೆಗೆ ಪಾತ್ರವಾದವು, 

ಕಾರ್ಯಕ್ರಮದಲ್ಲಿ ಹೆಸರಾಂತ ಸುಗಮ ಸಂಗೀತ ಕಲಾವಿದರಾದ ಎಸ್ ಸದಾನಂದ ಸೇಟ್, ಹಣವಾಳ ಗ್ರಾಮ ಪಂಚಾಯತ ಸದಸ್ಯರಾದ ಹೆಚ್ ವೀರೇಶಪ್ಪ, ಶಾಮಣ್ಣ ಮಡಿವಾಳ, ದೇವರಾಜ ಹಣವಾಳ, ಮಂಜುನಾಥ ಡಿ ರಾಜ್ಯ ಯುವ ಜಾನಪದ ಕಲಾವಿದರಾದ ವೀರುಪಣ ಕಲ್ಲೂರ, ಸಂಸ್ಥೆಯ ಅಧ್ಯಕ್ಷರಾದ ಎಸ್ ಬಿ ಹಿರೇಮಠ ನವಲಿ ಮತ್ತು ಸಂಸ್ಥೆ ಪದಾಧಿಕಾರಿಗಳು, ಸ್ಥಳಿಯ ಗ್ರಾಮ ಪಂಚಾಯತನ ಸದಸ್ಯರು, ಊರಿನ ಯುವ ಮುಖಂಡರುಗಳು ಉಪಸ್ಥಿತರಿದ್ದರು.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.