ಕೆ.ಎನ್.ಪಿ,ಅಡುಗೆಮನೆ;

ಕೆ.ಎನ್.ಪಿ.ಓದುಗರೇ ಇಂದು ಕೆ.ಎನ್.ಪಿ.ಅಡುಗೆಮನೆ ವಿಭಾಗದಿಂದ “ಕ್ಯಾರೆಟ್ ಪಾಯಸ” ಮಾಡುವುದನ್ನು ತಿಳಿಸಲಾಗಿದೆ ತಪ್ಪದೇ ಮಾಡಿ ನೋಡಿ…

ಆರೋಗ್ಯಕರ ಅಂಶವುಳ್ಳ ಕ್ಯಾರೆಟ್ ಸೇವನೆಯಿಂದ ಕಣ್ಣುಗಳ ದೃಷ್ಟಿಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

ರೋಗ ನಿರೋದಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದಾಗಿದೆ.

ಸಾಕಷ್ಟು ಪ್ರಮಾಣದಲ್ಲಿ ನಾರಿನಂಶವಿರುವ ಕ್ಯಾರೆಟ್ ನ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸರಿದೂಗಿಸಿಕೊಳ್ಳಬಹುದಾಗಿದೆ,

ಜೀರ್ಣಕ್ರಿಯೆಯೂ ಹೆಚ್ಚುತ್ತದೆ. ಇನ್ನೂ ಸಾಕಷ್ಟು ಆರೋಗ್ಯ ಲಾಭವನ್ನು ಹೊಂದಿದೆ.

ಸಾಮಾನ್ಯವಾಗಿ ಮನೆಗೆ ಸಡನ್ ಆಗಿ ಯಾರಾದರೂ ಅತಿಥಿಗಳು ಬಂದಾಗ ಏನಾದರೂ ಸಿಹಿ ತಿಂಡಿಯನ್ನು ಮಾಡಲು ನೀವು ಬಯಸಿದರೆ ಅಥವಾ ನಿಮಗೆ ಏನಾದರೂ ಸಿಹಿ ತಿನ್ನಬೇಕು ಎನಿಸಿದರೆ ಕ್ಯಾರೆಟ್ ಪಾಯಸ ಸುಲಭವಾಗಿ ತಯಾರಿಸಿಕೊಳ್ಳಬಹುದು.

ಬೇಕಾಗುವ ಸಾಮಾಗ್ರಿಗಳು

  • ಅರ್ಧ ಲೀಟರ್ ಗಟ್ಟಿ ಹಾಲು
  • 2-3 ಸ್ವಲ್ಪ ದೊಡ್ಡ ಗಾತ್ರದ ಕ್ಯಾರೆಟ್( ಸಿಪ್ಪೆ ಸುಲಿದು ತುರಿದಿಡಿ)
  • 8-10 ಗೋಡಂಬಿ
  • ಬಾದಾಮಿ 6-7(ನೀರಿನಲ್ಲಿ ನೆನೆ ಹಾಕಿರಿ)
  • ಅರ್ಧ ಚಮಚ ಏಲಕ್ಕಿ ಪುಡಿ
  • 1 ಚಮಚ ತುಪ್ಪ
  • ಸ್ವಲ್ಪ ಕೇಸರಿ (ಬೇಕಿದ್ದರೆ)

ತಯಾರಿಸುವ ವಿಧಾನ:

* ಹಾಲು ಚೆನ್ನಾಗಿ ಕುದಿ ಬಂದು ಸ್ವಲ್ಪ ಗಟ್ಟಿಯಾಗುವವರೆಗೆ ಕುದಿಸಿ. ಒಂದು ಬದಿಯಲ್ಲಿಡಿ.

* ನಂತರ ಬೇರೆ ಪಾತ್ರೆಗೆ ತುಪ್ಪ ಹಾಕಿ ಅದರಲ್ಲಿ ಗೋಡಂಬಿಯನ್ನು ಹಾಕಿ 4-5 ನಿಮಿಷ ಫ್ರೈ ಮಾಡಿ ಒಂದು ಬದಿಯಲ್ಲಿ ತೆಗೆದಿಡಿ.

* ನಂತರ ಅದೇ ಪಾತ್ರೆಗೆ ತುರಿದ ಕ್ಯಾರೆಟ್ ಹಾಕಿ ಅದರ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ, ನಂತರ ಬಾದಾಮಿಯ ಸಿಪ್ಪೆ ಸುಲಿದು ಅದನ್ನು ಕ್ಯಾರೆಟ್ ಜೊತೆ ಹಾಕಿ ಕುದಿಸಿದ ಮಂದವಾಗಿಸಿದ ಹಾಲಿನಿಂದ ಕಾಲು ಕಪ್ ಹಾಲನ್ನು ಹಾಕಿ 7-8 ನಿಮಿಷ ಸೌಟ್ ನಿಂದ ಆಡಿಸುತ್ತಾ ಕುದಿಸಿ. ನಂತರ ತಣ್ಣಗಾಗಲು ಇಡಿ.

* ಈಗ ಕ್ಯಾರೆಟ್ ಮತ್ತು ಬಾದಾಮಿ ಮಿಶ್ರಣವನ್ನು ಮಿಕ್ಸಿಯಲ್ಲಿ ಹಾಕಿ ಗ್ರೈಂಡ್ ಮಾಡಿ.

* ಈಗ ಪುನಃ ಹಾಲನ್ನು ಕುದಿಯಲು ಇಟ್ಟು, ಅದಕ್ಕೆ ಸಕ್ಕರೆಯನ್ನು ಹಾಕಿ, ರುಬ್ಬಿದ ಕ್ಯಾರೆಟ್ ಹಾಕಿ ಸೌಟ್ ನಿಂದ ಮಿಕ್ಸ್ ಮಾಡುತ್ತಾ 5 ನಿಮಿಷ ಕುದಿಸಬೇಕು. ಸಕ್ಕರೆ ಅಥವಾ ಹಾಲು ಬೇಕಿದ್ದರೆ ಸ್ವಲ್ಪ ಸೇರಿಸಬಹುದು (ಹಾಲು ಸೇರಿಸುವುದಾದರೆ ಕುದಿಸಿದ ಹಾಲನ್ನು ಹಾಕಿ).

* ನಂತರ ಏಲಕ್ಕಿ ಹಾಕಿ ಮಿಕ್ಸ್ ಮಾಡಿ ಉರಿಯಿಂದ ಇಳಿಸಿ ಅದನ್ನು ಗೋಡಂಬಿ ಮತ್ತು ಕೇಸರಿಯಿಂದ ಅಲಂಕರಿಸಿದರೆ ಕ್ಯಾರೆಟ್ ಪಾಯಸ ರೆಡಿ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.