ಕೆ.ಎನ್.ಪಿ.ವಾರ್ತೆ,ಹೊಸಪೇಟೆ,ಡಿ.01;

ಅನರ್ಹ ಶಾಸಕ, ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಅವರ ಪುತ್ರ ಸಿದ್ದಾರ್ಥ ಹಾಗೂ ಉದ್ಯಮಿ ಪ್ರಭು ಸಬರದ ಅವರ ಮಗಳು ಸಂಜನಾ ಅವರ ವಿವಾಹವು ಇಂದು ಅದ್ದೂರಿಯಾಗಿ ನೆರವೇರಿತು.

ಆನಂದ್ ಸಿಂಗ್ ಅವರ ಭವ್ಯ ಬಂಗಲೆಯ ಹಿಂಭಾಗದಲ್ಲಿನ 10 ಎಕರೆ ಪ್ರದೇಶದಲ್ಲಿ ಶಾಮಿಯಾನ ಹಾಕಲಾಗಿದ್ದು, ತಿರುಮಲ ತಿರುಪತಿಗೆ ಹೋಲುವ ಅದ್ದೂರಿ ಸೆಟ್ ಎಲ್ಲರ ಕಣ್ಣು ಕುಕ್ಕುವಂತಿತ್ತು. 

ವೆಂಕಟೇಶ್ವರ ಹಾಗೂ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ನವ ವಧು ಸಂಜನಾ ಹಾಗೂ ವರ ಸಿದ್ಧಾರ್ಥ ಅವರ ಫೋಟೊ ಮದುವೆ ಮನೆಯಲ್ಲಿ ರಾರಾಜಿಸುತ್ತಿದ್ದವು.

ರಜಪೂತ್ ಸಂಪ್ರದಾಯದಂತೆ ಮದುವೆ ನೆರವೇರಿಸಲಾಯಿತು. ಮದುವೆ ಮಂಟಪದಲ್ಲಿ ತಿರುಪತಿ ವೆಂಕಟೇಶ್ವರ ಶೈಲಿಯಲ್ಲಿ ಬಾಗಿಲುಗಳನ್ನು ಅಳವಡಿಸಲಾಗಿತ್ತು. 

ಸಾವಿರಾರು ಜನರು ಭಾಗವಹಿಸಿದ್ದ ಮದುವೆಯ ಘಟನಾವಳಿಗಳನ್ನು ಚುನಾವಣಾ ಸಿಬ್ಬಂದಿ ಚಿತ್ರೀಕರಿಸಿದರು. “ಮದುವೆ ಕಾರ್ಯಕ್ರಮದಲ್ಲಿ 10 ಸಾವಿರಕ್ಕಿಂತ ಕಡಿಮೆ ಜನರು ಭಾಗವಹಿಸಿದ್ದರು. 

ಕಾನೂನು ಸಚಿವ ಮಾಧುಸ್ವಾಮಿ, ಸಂಸದ ವೈ. ದೇವೇಂದ್ರಪ್ಪ, ವಿಧಾನಪರಿಷತ್ ಸದಸ್ಯರಾದ ಕೆ.ಸಿ. ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಶಾಸಕರಾದ ಜಿ. ಸೋಮಶೇಖರ ರೆಡ್ಡಿ, ರಾಜುಗೌಡ, ಈ.ತುಕಾರಾಂ, ಮಾಜಿ ಸಂಸದ ಸಣ್ಣಫಕೀರಪ್ಪ, ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್, ಕ್ಷೇತ್ರದ ಬಿಜೆಪಿ ಚುನಾವಣಾ ಉಸ್ತುವಾರಿ ಎನ್. ರವಿಕುಮಾರ ಹಾಗೂ ಹಲವು ಗಣ್ಯರು ಮದುವೆಗೆ ಆಗಮಿಸಿ ವಧು ವರನನ್ನು ಆಶೀರ್ವದಿಸಿದರು.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.