ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಸೆ.09;

ಗಾಳಿ ಮಳೆಯಿಂದಾಗಿ ಹಳೆಯ ಆಲದ ಮರ ಪುರಾತನ ಗುಡಿಯ ಮೇಲೆ ಬಿದ್ದು, ದೇಗುಲದ ಮೇಲ್ಛಾವಣಿಗೆ ಧಕ್ಕೆಯಾದ ಘಟನೆ ತಾಲೂಕಿನ ಅಣಜಿ ಗ್ರಾಮ ಹೊರ ವಲಯದ ಕೆರೆ ಏರಿಯ ಮೇಲೆ ನಡೆದಿದೆ.

ದಾವಣಗೆರೆ ತಾಲೂಕಿನ ಆಣಜಿ ಗ್ರಾಮಕ್ಕೆ ಹೊಂದಿಕೊಂಡಿರುವ 2-3 ಶತಮಾನಗಳಷ್ಟು ಹಳೆಯದಾದ ಕೆರೆ ಹೊನ್ನಮ್ಮ ದೇವಿ ದೇವಸ್ಥಾನದ ಮೇಲೆ ದೈತ್ಯ ಆಲದ ಮರ ಉರುಳಿ ಬಿದ್ದಿದೆ. ಅಣಜಿ ಕೆರೆಯ ಕೆರೆ ಹೊನ್ನಮ್ಮ ದೇವಿ ದೇವಸ್ಥಾನ ಪ್ರಸಿದ್ಧವಾಗಿದ್ದು, ಇಲ್ಲಿ ನಡೆಯುವ ಜಾತ್ರೆಗೆ ಸಾವಿರಾರು ಮಂದಿ ಸೇರುತ್ತಾರೆ.

ಒಂದು ಭಾಗದಲ್ಲಿ ಕೆರೆ ಇದ್ದರೆ ಮತ್ತೊಂದು ಭಾಗದಲ್ಲಿ ಈ ಗುಡಿ ಇದೆ. ಇದರ ಜೊತೆಗೆ ಸುಮಾರು 130 ವರ್ಷಗಳ ಇತಿಹಾಸ ಇರುವ ಆಲದಮರ ದೇಗುಲಕ್ಕೆ ಮತ್ತಷ್ಟು ಕಳೆ ತಂದಿತ್ತು. ದೈತ್ಯ ಆಲದ ಮರ ಸತತ ಮಳೆಯಿಂದಾಗಿ ಹಾಗೂ ಹಳೆಯ ಮರವಾಗಿದ್ದರಿಂದ ಅದರ ಒಳಗೊಳಗೆ ನೀರು ತುಂಬಿತ್ತು. ಈ ಮರದ ಮಧ್ಯೆ ಇರುವ ಪೊಟರೆಗಳಲ್ಲಿ ನೀರು ನಿಂತು ಬೇರುಗಳು ಹಾಳಾಗಿದ್ದವು. ಹೀಗಾಗಿ ಗಾಳಿ ಬೀಸಿದಾಗ ಮರ ವಾಲುತ್ತಲೇ ಇತ್ತು.

ಇತ್ತೀಚೆಗೆ ಸಂಚರಿಸುವಾಗ ಚಾಲಕನ ನಿಯಂತ್ರಣ ತಪ್ಪಿ ವಾಹನವೊಂದು ಕೆರೆ ಏರಿಯ ಗುಡಿಯ ಭಾಗಕ್ಕೆ ಗುದ್ದಿದ್ದು, ದೇವಿಯ ಪವಾಡ ಎಂಬಂತೆ ಪ್ರಯಾಣಿಕರು ಬದುಕಿ ಉಳಿದಿದ್ದರು.. ಅಂದಿನ ಘಟನೆಯಲ್ಲಿ ಮರ ಇಲ್ಲದೇ ಇದ್ದಿದ್ದರೆ ಹಲವರು ಪ್ರಾಣ ತೆರಬೇಕಿತ್ತು ಎನ್ನುತ್ತಾರೆ ಇಲ್ಲಿನ ಸ್ಥಳಿಯರು.

ಈ ಇತಿಹಾಸವುಳ್ಳ ಆಲದ ಮರ ಶನಿವಾರ ಸುರಿದ ಗಾಳಿ, ಮಳೆಗೆ ಧರೆಗುರುಳಿದೆ. ಪರಿಣಾಮ ಅದರ ಪಕ್ಕದಲ್ಲಿದ್ದ ದೇವಸ್ಥಾನ ಜಖಂಗೊಂಡಿದೆ. ದೇವಸ್ಥಾನದ ಮೇಲ್ಛಾವಣಿ ಮೇಲೆ ಮರದ ಕೊಂಬೆಗಳು ಬಿದ್ದು ಹಾನಿಯಾಗಿದೆ.

ವರದಿ : ಮಹಮ್ಮದ್ ಅಬ್ದುಲ್ ರಖೀಬ್

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.