ಕೆ.ಎನ್.ಪಿ.ವಾರ್ತೆ,ಚಿಕ್ಕೋಡಿ,ನ.20;

ಆಕಳಿನ ಹೊಟ್ಟೆ ಮೇಲೆ ತಾಯಿ ಮಗುವನ್ನ ಆರೈಕೆ ಮಾಡುವ ಹೋಲಿಕೆಯ ಚಿತ್ರ ಮೂಡಿರುವ ಘಟನೆ ಬೆಳಗಾವಿ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದಿದೆ.

ಹೌದು, ರಾಹುಲ ಜಾಧವ ಎಂಬ ರೈತನಿಗೆ ಸೇರಿರುವ ಆಕಳಿನ ಹೊಟ್ಟೆ ಮೇಲೆ ತಾಯಿ ಮಗುವನ್ನು ಆರೈಕೆ ಮಾಡುವ ರೀತಿಯಲ್ಲಿ ಚಿತ್ರ ಮೂಡಿದ್ದು ಅಚ್ಚರಿಗೆ ಕಾರಣವಾಗಿದೆ.

ಮೂಲತಃ ಕೃಷಿ ಜೊತೆಗೆ ಹೈನುಗಾರಿಕೆ ಮಾಡುವ ಜಾಧವ ಕುಟುಂಬ ನಾಲ್ಕು ವರ್ಷಗಳ ಹಿಂದೆ ಮಹಾರಾಷ್ಟ್ರದ ಮೀರಜ ಜಾನುವಾರು ಮಾರುಕಟ್ಟೆಯಿಂದ ಬಿಳಿ – ಕಪ್ಪು ಬಣ್ಣದ ಜರಸಿ ಪ್ರಬೇಧದ ಆಕಳನ್ನು ತಂದಿದ್ದರು.

ಕಳೆದ ಮೂರು ವರ್ಷಗಳಿಂದ ಹೊಟ್ಟೆಯ ಮೇಲೆ ಈ ರೀತಿ ಮಚ್ಚೆ ಮೂಡಲು ಆರಂಭವಾಗಿತ್ತು. ದಿನ ಕಳೆದಂತೇ ಈಗ ಸಂಪೂರ್ಣವಾಗಿ ಮಹಿಳೆ ಕುಳಿತುಕೊಂಡು ಮಗುವನ್ನ ಆರೈಕೆ ಮಾಡುವ ರೀತಿಯ ಚಿತ್ರ ಸ್ಪಷ್ಟವಾಗಿ ಕಾಣುತ್ತಿದೆ. ಈ ರೀತಿಯ ಅಚ್ಚರಿಯ ಚಿತ್ರ ಮೂಡಿರುವ ಕಾರಣ ಹೆಚ್ಚಿನ ಸಂಖ್ಯೆಯ ಜನರು ಬಂದು ಈ ಅಚ್ಚರಿಯನ್ನ ಕಣ್ಣು ತುಂಬಿ ಕೊಳ್ಳುತ್ತಿದ್ದಾರೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.