ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಅ.20;

ರಾಜ್ಯ ಪೊಲೀಸರ ಬಹುದಿನಗಳ ಬೇಡಿಕೆಯಾದ ರಾಘವೇಂದ್ರ ಔರಾದ್ಕರ್ ವರದಿ ಜಾರಿಗೆ ರಾಜ್ಯ ಸರ್ಕಾರ ಆದೇಶ ನೀಡಿದ್ದು, ಆದೇಶದ ಅನ್ವಯ ಪೊಲೀಸರ ವೇತನ ಪಟ್ಟಿ ವಿವರ ಇಲ್ಲಿದೆ.

2016 ರ ಜೂನ್​ 21ರಂದು ಔರಾದ್ಕರ್ ಸಮಿತಿ ರಚನೆ ಮಾಡಿ, ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಔರಾದ್ಕರ್ ವರದಿಗೆ ಮೈತ್ರಿ ಸರ್ಕಾರ ಅಂಕಿತ ಹಾಕಿ, ಆಗಸ್ಟ್​ 1ರಿಂದ ಅನ್ವಯವಾಗುವಂತೆ ಆದೇಶ ಹೊರಡಿಸಿತ್ತು. ಆದರೆ ಸರ್ಕಾರದ ಮುಂದಿನ ಆದೇಶ ಬರುವವರೆಗೆ ಕಾಯುವಂತೆ ಎಡಿಜಿಪಿ ಸೂಚಿಸಿದ್ದರು.

ಸದ್ಯ ವರದಿ ಶಿಫಾರಸ್ಸಿನಂತೆ ವೇತನವನ್ನು ಉನ್ನತೀಕರಿಸಿ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದ್ದು, ಈ ಆದೇಶ 2019ರ ಆಗಸ್ಟ್​ 1 ರಿಂದಲೇ ಜಾರಿಯಾಗಿದೆ.

ಪರಿಷ್ಕೃತ ಮೂಲ ವೇತನ ವಿವರ ಇಲ್ಲಿದೆ ನೋಡಿ…

  • ಪೊಲೀಸ್ ಕಾನ್ಸ್​ಟೇಬಲ್ – ರಿಸರ್ವ್ ಕಾನ್ಸ್​ಟೇಬಲ್ – 23,500 ದಿಂದ 47,650
  • ಹೆಡ್ ಕಾನ್ಸ್​ಟೇಬಲ್ – 27,650 ದಿಂದ 52,650
  • ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ – 30,350 ದಿಂದ 58,250
  • ಇನ್ಸ್​ಪೆಕ್ಟರ್ – 43,100 ದಿಂದ 83,900
  • ಎಸ್​ಪಿ( ಐಪಿಎಸ್ ಹೊರತುಪಡಿಸಿ)-70,850 ದಿಂದ 1,07,100

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.