ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಜೂ.17;

ಕನ್ನಡ ಸಾಹಿತ್ಯ ಪರಿಷತ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಲಿತ ಸಾಹಿತ್ಯಕ್ಕೆ ಒತ್ತು ನೀಡಿದ್ದು, ದಲಿತ ಸಮ್ಮೇಳನ ಹಾಗೂ ದಲಿತ ಸಂಪುಟ ಹೊರತರುವ ಕಾರ್ಯ ಕೈಗೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮನುಬಳಿಗಾರ್‌ ಹೇಳಿದ್ದಾರೆ.

”ಸಾಹಿತ್ಯ ಸಮ್ಮೇಳನದಂತೆ ಈ ಬಾರಿ ಮಹಿಳಾ ಸಾಹಿತ್ಯ ಸಮ್ಮೇಳನವನ್ನು ಪರಿಷತ್‌ ನಡೆಸಿತ್ತು. ಅದರಂತೆ ಇದೀಗ ಆ.17 ಮತ್ತು 18ರಂದು ಕೋಲಾರದಲ್ಲಿ ದಲಿತ ಸಾಹಿತ್ಯ ಸಮ್ಮೇಳನ ನಡೆಸಲು ಮುಂದಾಗಿದ್ದು, ಸಿದ್ಧತೆಗಳನ್ನು ಆರಂಭಿಸಲಾಗಿದೆ.

ದಲಿತ ಸಾಹಿತ್ಯ ಸಂಪುಟವನ್ನು ಹೊರತರಲು ಉದ್ದೇಶಿಸಿದ್ದು 10 ಸಂಪುಟಗಳ ಪೈಕಿ ಈಗಾಗಲೇ 4 ಸಂಪುಟಗಳ ಮುದ್ರಣ ಕಾರ್ಯ ಪೂರೈಸಿ, ಬಿಡುಗಡೆಗೆ ಅಣಿಗೊಳಿಸಲಾಗಿದೆ. ಜುಲೈ ಕೊನೆ ವಾರ ಮುದ್ರಣಗೊಂಡ ನಾಲ್ಕು ದಲಿತ ಸಂಪುಟ ಕೃತಿಗಳನ್ನು ಬಿಡುಗಡೆ ಮಾಡಿಕೊಡುವಂತೆ ಮುಖ್ಯಮಂತ್ರಿಗಳಿಗೆ ವಿನಂತಿಸಲಾಗಿದೆ,” ಎಂದು ಬಳಿಗಾರ್‌ ತಿಳಿಸಿದರು.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.