ಕೆ.ಎನ್.ಪಿ.ವಾರ್ತೆ,ಗಂಗಾವತಿ,ನ.21;

“ಐತಿಹಾಸಿಕ ವಿಜಯನಗರದ ಮೊದಲ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಆನೆಗೊಂದಿಯಲ್ಲಿ “ಆನೆಗೊಂದಿ ಉತ್ಸವ” ಆಚರಿಸುತ್ತಿರುವ ಸರಕಾರದ ನಿರ್ಧಾರ ಕಸಾಪಕ್ಕೆ ಸಂತಸ ತಂದಿದೆ. ಅಂತೆಯೇ ಆನೆಗೊಂದಿ ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಗಂಗಾವತಿ ತಾಲೂಕ ಕಸಾಪ ಘಟಕದ ಅಧ್ಯಕ್ಷರಾದ ಎಸ್.ಬಿ ಗೊಂಡಬಾಳ ಆಗ್ರಹಿಸಿದರು.

ಆನೆಗೊಂದಿ ಉತ್ಸವದಲ್ಲಿ ಉಪನ್ಯಾಸ, ಕವಿಗೋಷ್ಠಿ ಏರ್ಪಡಿಸುವ ಹಾಗೂ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡುವುದರ ಕುರಿತು ಇಂದು ಜಿಲ್ಲಾಧಿಕಾರಿಗಳಿಗೆ ತಹಶೀಲ್ದಾರರ ಮುಖಾಂತರ ಕಸಾಪ ವತಿಯಿಂದ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಎಸ್.ಬಿ ಗೊಂಡಬಾಳ, ವಿಜಯನಗರದ ಮೊದಲ ರಾಜಧಾನಿ, ಹಂಪಿಯ ತೂಗುತೊಟ್ಟಿಲು ಎಂದು ಕರೆಯುವ ಆನೆಗೊಂದಿಯಲ್ಲಿ “ಆನೆಗೊಂದಿ ಉತ್ಸವ” ಆಚರಿಸುತ್ತಿರುವ ಸರಕಾರದ ನಿರ್ಧಾರ ಕಸಾಪಕ್ಕೆ ಸಂತಸ ತಂದಿದೆ.  

ಸಾಂಸ್ಕೃತಿಕ ವೈಭವ ಹಾಗೂ ಐತಿಹಾಸಿಕ ಮಹತ್ವವನ್ನು ಸಾರುವ ಜನೋತ್ಸವವಾಗಿರುವ “ಆನೆಗೊಂದಿ ಉತ್ಸವ” ದಲ್ಲಿ ಆನೆಗೊಂದಿಯ ಐತಿಹಾಸಿಕ ಮಹತ್ವ, ಪ್ರಾಚ್ಯ ಸ್ಮಾರಕಗಳ ಸಂರಕ್ಷಣೆ ಕುರಿತಾದ ಹಿರಿಯ ವಿಧ್ವಾಂಸರಿಂದ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಬೇಕು ಹಾಗೂ ಆಯ್ದ ಕವಿಗಳಿಂದ ಕವಿಗೋಷ್ಠಿಯನ್ನು ಏರ್ಪಡಿಸುವ ಮೂಲಕ ವಿಧ್ವಾಂಸರಿಗೆ, ಕವಿಗಳಿಗೆ, ಕಲಾವಿದರಿಗೆ ಪ್ರೇರಣೆ ನೀಡಬೇಕು.

ಅಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಮೊದಲ ಆದ್ಯತೆಯನ್ನು ನೀಡಬೇಕು” ಎಂದು ತಾಲೂಕು
ಕಸಾಪ ಅಧ್ಯಕ್ಷ ಎಸ್.ಬಿ ಗೊಂಡಬಾಳ ಜಿಲ್ಲಾಡಳಿತವನ್ನು ಆಗ್ರಹಪಡಿಸಿದ್ದಾರೆ.

ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ ಎಲ್.ಡಿ ಚಂದ್ರಕಾಂತ್, ಮಾನ್ಯ ಜಿಲ್ಲಾಧಿಕಾರಿಗಳ ಅವಗಾಹನೆಗಾಗಿ ಮನವಿ ಪತ್ರ ಸಲ್ಲಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಶರಣಗೌಡ ಪೊಲೀಸ್ ಪಾಟೀಲ್, ಸಾಹಿತಿಗಳಾದ ಲಿಂಗಾರೆಡ್ಡಿ ಆಲೂರು, ಜಿ. ಪವನಕುಮಾರ, ಕೆ. ಮಹಾಲಕ್ಷ್ಮೀ, ಪದಾಧಿಕಾರಿಗಳಾದ ರಮೇಶ ಕುಲಕರ್ಣಿ, ವಿರುಪಾಕ್ಷಪ್ಪ ಶಿರವಾರ್, ಪರಿಸರ ಟಿ.ವಿ ಸಂಪಾದಕ ಮಂಜುನಾಥ ಗುಡ್ಲಾನೂರು ಉಪಸ್ಥಿತರಿದ್ದರು.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.