ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಏ.20;
ಈವರೆಗೆ ಒಟ್ಟು 155 ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಸೇರಿ ಇನ್ನಿತರ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಕೈಗೊಂಡಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಟಿ.ಬಿ. ಜಯಚಂದ್ರ, ಡಿ.ಕೆ. ಶಿವಕುಮಾರ್, ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಸಿಂಗ್ ಸೇರಿದಂತೆ ಘಟಾನುಘಟಿಗಳು ನಾಮಪತ್ರ ಸಲ್ಲಿಸಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಮಂಗಳವಾರ ಆರಂಭಗೊಂಡಿದ್ದು ಏ.24 ಕ್ಕೆ ಅಂತ್ಯಗೊಳ್ಳಲಿದೆ. ಪಕ್ಷಗಳಿಂದ ‘ಬಿ’ ಫಾರಂ ಪಡೆದಿರುವ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸುತ್ತಿದ್ದಾರೆ. ಇತ್ತೀಚಿನ ವರದಿ ಪ್ರಕಾರ, ಚುನಾವಣಾ ಆಯೋಗದ ಅಧಿಕೃತ ಮಾಹಿತಿಯಂತೆ ಈವರೆಗೆ 155 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ತಿಳಿದುಬಂದಿದೆ.
ನಾಮಪತ್ರ ಸಲ್ಲಿಸಿದ ಪ್ರಮುಖರು :
-
ಬಿಜೆಪಿ :
- ಬಿ.ಎಸ್. ಯಡಿಯೂರಪ್ಪ (ಶಿಕಾರಿಪುರ)
- ಕೆ.ಎಸ್. ಈಶ್ವರಪ್ಪ (ಶಿವಮೊಗ್ಗ)
- ಆರ್. ಅಶೋಕ್ (ಪದ್ಮನಾಭನಗರ)
- ವಿಶ್ವೇಶ್ವರ ಹೆಗಡೆ ಕಾಗೇರಿ (ಶಿರಸಿ)
- ವಿ. ಸುನೀಲ್‌ಕುಮಾರ್ (ಕಾರ್ಕಳ)
- ಡಿ.ಎನ್. ಜೀವರಾಜ್ (ಶೃಂಗೇರಿ)
- ಮುರುಗೇಶ್ ನಿರಾಣಿ (ಬೀಳಗಿ)
-
ಕಾಂಗ್ರೆಸ್ :
- ಟಿ.ಬಿ. ಜಯಚಂದ್ರ (ಶಿರಾ)
- ಡಿ.ಕೆ. ಶಿವಕುಮಾರ್ (ಕನಕಪುರ)
- ಕೆ.ಆರ್. ರಮೇಶ್‌ಕುಮಾರ್ (ಶ್ರೀನಿವಾಸಪುರ)
- ರಮಾನಾಥ ರೈ (ಬಂಟ್ವಾಳ)
- ಎ. ಮಂಜು (ಅರಕಲಗೂಡು)
- ಕಿಮ್ಮನೆ ರತ್ನಾಕರ್ (ತೀರ್ಥಹಳ್ಳಿ)
- ಆನಂದ್ ಸಿಂಗ್ (ವಿಜಯನಗರ)
-
ಜೆಡಿಎಸ್ :
- ಎಚ್. ವಿಶ್ವನಾಥ್ (ಹುಣಸೂರು)
- ಮಧು ಬಂಗಾರಪ್ಪ (ಸೊರಬ)